ಇಟಲಿಯಲ್ಲಿ ಬಾಯ್‌ಫ್ರೆಂಡ್‌ ಕೈ ಹಿಡಿದ ಕನ್ನಡದ ವಿಲನ್ ನಟಿ: ಅಮ್ಮನ ಮದುವೆಯಲ್ಲಿ ಶೋ ಸ್ಟೀಲರ್ ಆದ ಮಗ

First Published | Aug 28, 2024, 5:42 PM IST

ಕನ್ನಡದ ದಿ ವಿಲನ್ ಸಿನಿಮಾದ ಹಿರೋಯಿನ್ ಆಮಿ ಜಾಕ್ಸನ್  ತಮ್ಮ ಗೆಳೆಯನ ಜೊತೆ ಹಸೆಮಣೆ ಏರಿದ್ದಾರೆ. ಈ ವೇಳೆ ಆಮಿ ಜಾಕ್ಸನ್ ಮೊದಲ ಗೆಳೆಯನ ಪುತ್ರ  ಅಮ್ಮನ ಮದುವೆಯಲ್ಲಿ ಓಡಾಡುವ ಮೂಲಕ ಶೋ ಸ್ಟೀಲರ್ ಆಗಿದ್ದಾನೆ. 

ತಮ್ಮ ಬಹುದಿನಗಳ  ಗೆಳೆಯ ಎಡ್ ವೆಸ್ಟ್ವಿಕ್ (Ed Westwick) ಜೊತೆ ದಕ್ಷಿಣ ಇಟಲಿಯ ವಿವಾಹ ತಾಣವೊಂದರಲ್ಲಿ ನಟಿ ಆಮಿ ಜಾಕ್ಸನ್ ವಿವಾಹ ಬಂಧನಕ್ಕೆ ಕಾಲಿರಿಸಿದ್ದಾರೆ. 

ಆಮಿ ಜಾಕ್ಸನ್ ವಿವಾಹವಾದ ಈ ಇಟಲಿಯ ಸ್ಥಳವೂ 16ನೇ ಶತಮಾನದ ವಿಶೇಷತೆಗಳನ್ನು ಹೊಂದಿದ್ದು, ಇಲ್ಲಿ ದಂಪತಿ ತಮ್ಮ ಮದುವೆಯ ನಂತರದ ಮೊದಲ ನೃತ್ಯವನ್ನು ಮಾಡಿದರು. 

Tap to resize

ಆದರೆ ಈ ವಿವಾಹ ಸಮಾರಂಭದಲ್ಲಿ ಖುಷಿ ಖುಷಿಯಿಂದ ಓಡಾಡಿ ಎಲ್ಲರ ಗಮನ ಸೆಳೆದಿದ್ದು, ಆಮಿ ಜಾಕ್ಸನ್ ಪುತ್ರ . ಅಂದಹಾಗೆ ಆಮಿ ಜಾಕ್ಸನ್ ಮಗ ಆಮಿ ಹಾಗೂ ಆಕೆಯ ಮಾಜಿ ಗೆಳೆಯ ಜಾರ್ಜ್‌ ಪನಯಿಯೊಟೊ ಪುತ್ರ.

ಅಮ್ಮ ವಧುವಿನಂತೆ ಸಿಂಗಾರಗೊಂಡು ವಿವಾಹ ಸ್ಥಳವನ್ನು ಪ್ರವೇಶಿಸುತ್ತಿದ್ದಂತೆ  ಆಮಿ ಮಗ ನಗುತ್ತಾ ಅಮ್ಮನತ್ತ ನೋಡುವ ಫೋಟೊ ಈಗ ಎಲ್ಲರ ಸೆಳೆಯುತ್ತಿದೆ. 

ತಮ್ಮ ಈ ಮದುವೆಗೆ  ಆಮಿ ಜಾಕ್ಸನ್ ಹಾಗೂ ಎಡ್ ವೆಸ್ಟ್ವಿಕ್ ಹೀಗೆ ಕ್ಯಾಪ್ಷನ್ ನೀಡಿದ್ದಾರೆ. ನಮ್ಮ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದಿಂದ ಸುತ್ತುವರೆದಿರುವ ಸೂರ್ಯ ನಮ್ಮ ಹಿಂದೆ ಅಸ್ತಮಿಸುತ್ತಿರುವಾಗ, ನಾವು ಶಾಶ್ವತವಾಗಿ ಪಾಲಿಸುವ ಕ್ಷಣದಲ್ಲಿ ನಮ್ಮ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. 

ನಮ್ಮ ವಿಶೇಷ ದಿನದಂದು ನಮ್ಮ ಇಂಗ್ಲಿಷ್ ಉದ್ಯಾನದ ಸೌಂದರ್ಯವನ್ನು ತುಂಬುವುದು ನಮ್ಮ ಕನಸು, ಮತ್ತು ಫೆಡೆರಿಕಾ ಸೊಟ್ಟಿಲಿ ಈ ನಮ್ಮ ಚಿಂತನೆಯನ್ನು ವಾಸ್ತವಕ್ಕೆ ತಂದರು.  ನೀವು ರಚಿಸಿದ ರಹಸ್ಯ ಉದ್ಯಾನ ಸಮಾರಂಭವು ಯಾವುದೇ ಮೋಡಿಗಿಂತ ಕಡಿಮೆ ಏನಲ್ಲ  ಇದು  ಸ್ಪಷ್ಟವಾಗಿ ಮ್ಯಾಜಿಕಲ್ ಆಗಿತ್ತು ಎಂದು ಬರೆದುಕೊಂಡಿದ್ದಾರೆ. 

ತಮ್ಮ ವಿವಾಹದ ಈ ವೀಡಿಯೋವನ್ನು ಹಂಚಿಕೊಂಡ ದಂಪತಿಗಳು, ಈ ಪ್ರದೇಶ ದಕ್ಷಿಣ ಇಟಲಿಯ ಬೆಟ್ಟಗಳಲ್ಲಿ ನೆಲೆಸಿದೆ. ನಾವು 16 ನೇ ಶತಮಾನದ ಕ್ಯಾಸ್ಟೆಲ್ಲೊ ಡಿ ರೊಕ್ಕಾ ಸಿಲೆಂಟೊವನ್ನು ಕಂಡುಕೊಂಡಿದ್ದೇವೆ., ಇದು ಸ್ಗುಗ್ಲಿಯಾ ಕುಟುಂಬದ ಒಡೆತನದಲ್ಲಿದೆ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ಕಾಲಿವುಡ್ ಸೇರಿದಂತೆ ಭಾರತದ ಬಹುತೇಕ ಭಾಷೆಗಳ ಸಿನಿಮಾದಲ್ಲಿ ನಟಿಸಿರುವ ಆಮಿ  ಕನ್ನಡದಲ್ಲಿ ಶಿವರಾಜ್‌ ಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲ್ಲನ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. 

1992ರಲ್ಲಿ ಜನಿಸಿದ ಆಮಿಗೆ 32 ವರ್ಷ ವಯಸ್ಸಾಗಿದ್ದು, ಇವರು ಮೊದಲಿಗೆ ಏಕ್ ದಿವಾನ ಥಾ ಸಿನಿಮಾದಲ್ಲಿ ನಟನೆ ವೇಳೆ ಭಾರತದ ನಟ ಪ್ರತೀಕ್ ಬಬ್ಬರ್ ಜೊತೆ 2011ರಲ್ಲಿ ರಿಲೇಷನ್ ಶಿಪ್‌ನಲ್ಲಿದ್ದರು. ಆದರೆ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಇಬ್ಬರು ದೂರಾದರು. 

2012ರಿಂದ 2015ರವರೆಗೆ ಮುಂಬೈನಲ್ಲಿದ್ದ ಆಮಿ ಜಾಕ್ಸನ್‌ ನಂತರ ಲಂಡನ್‌ಗೆ ತೆರಳಿದ್ದರು. ನಂತರ ಉದ್ಯಮಿಯೋರ್ವನ ಪುತ್ರ ಜಾರ್ಜ್  ಪನಯಿಯೊಟೊ ಜೊತೆ ಡೇಟಿಂಗ್‌ನಲ್ಲಿದ್ದರು. 2019ರಲ್ಲಿ ಇವರಿಬ್ಬರು ಜಾಂಬಿಯಾದಲ್ಲಿ ಎಂಗೇಜ್ ಕೂಡ ಆಗಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಇವರಿಗೆ ಮಗನೂ ಜನಿಸಿದ. 

Amy Jackson wedding

ಆದರೆ 2021ರಲ್ಲಿ ಏನಾಯ್ತೋ ಏನೋ ಇಬ್ಬರು ದೂರಾದರು. ಇದಾದ ನಂತರ ಜಾಕ್ಸನ್ ಇಂಗ್ಲೀಷ್ ನಟ ಎಡ್ ವೆಸ್ಟ್ವಿಕ್ ಜೊತೆ ಡೇಟಿಂಗ್ ಶುರು ಮಾಡಿದ್ದು, ಈಗ ಮಗನ ಸಮ್ಮುಖದಲ್ಲಿ ಆತನನ್ನೇ ಮದುವೆಯಾಗಿದ್ದಾರೆ.

Latest Videos

click me!