ಪತಿ ಮಕ್ಕಳ ಜೊತೆ ರಕ್ಷಾ ಬಂಧನ ಆಚರಿಸಿದ ಸನ್ನಿ ಲಿಯೋನ್: ಫೋಟೋಸ್ ವೈರಲ್

First Published | Aug 19, 2024, 12:51 PM IST

ಮಾಜಿ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ತಮ್ಮ ಮೂವರು ಮಕ್ಕಳು ಪತಿ ಹಾಗೂ ತಮ್ಮ ಟೀಂ ಜೊತೆ ರಾಕಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಆ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮಾಜಿ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ತಮ್ಮ ಮೂವರು ಮಕ್ಕಳೊಂದಿಗೆ  ರಕ್ಷಾಬಂಧನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಸನ್ನಿ ಲಿಯೋನ್ ದತ್ತು ಪುತ್ರಿ ನಿಶಾ ಕೌರ್ ವೆಬರ್ ತನ್ನ ಅವಳಿ ಸೋದರರಾದ ನೋಹ್ ಸಿಂಗ್ ವೆಬರ್ ಹಾಗೂ ಅಶೇರ್ ಸಿಂಗ್ ವೆಬರ್‌ಗೆ ರಾಕಿ ಕಟ್ಟಿದ್ದಾರೆ.

Tap to resize

ಈ ವೇಳೆ ಸಲ್ಲಿ ಲಿಯೋನ್ ಪತಿ ಡೇನಿಯಲ್ ವೆಬರ್ ಕೂಡ ಜೊತೆಗಿದ್ದು ಮಕ್ಕಳ ಸಂಭ್ರಮಕ್ಕೆ ದಂಪತಿ ಜೊತೆಯಾಗಿದ್ದಾರೆ. ಮಕ್ಕಳು ದಂಪತಿ ಎಲ್ಲರೂ ಸಂಪ್ರದಾಯಿಕ ಧಿರಿಸು ಧರಿಸಿ ಹಬ್ಬದ ಕಳೆಯನ್ನು ಹೆಚ್ಚಿಸಿದ್ದಾರೆ. 

ರಕ್ಷಾ ಬಂಧನ ಸಂಭ್ರಮದ ನಂತರ ತಮ್ಮ ತಂಡದ ಜೊತೆ ಸನ್ನಿಲಿಯೋನ್ ಕುಟುಂಬ ಫೋಟೋ ತೆಗೆಸಿಕೊಂಡಿದ್ದು, ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ

ಸನ್ನಿ ಲಿಯೋನ್ ಹಾಗೂ ಕುಟುಂಬದ ರಕ್ಷಾ ಬಂಧನದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಅವರ ಅಭಿಮಾನಿಗಳು ಹೀಗೆ ಖುಷಿಯಾಗಿರಿ ಎಂದು ಶುಭ ಹಾರೈಸಿದ್ದಾರೆ. 

Latest Videos

click me!