ಲೈಂಗಿಕ ಸಂಬಂಧದ ವೇಳೆ ಮಹಿಳಾ ಸಂಗಾತಿಗೆ ಇಷ್ಟವಾಗೋದೇನು?

First Published | Aug 15, 2024, 5:57 PM IST

ದಾಂಪತ್ಯ ಜೀವನದಲ್ಲಿ ಲೈಂಗಿಕ ಸಂಬಂಧ ಬೆಳೆಸುವುದು ಪ್ರಮುಖವಾಗಿರುತ್ತದೆ. ಸಂಗಾತಿಯನ್ನು ಹೇಗೆ ತೃಪ್ತಿಪಡಿಸಬೇಕು ಅನ್ನೋ ವಿಷಯ ಪುರುಷರಿಗೆ ಗೊತ್ತಿರಲ್ಲ. 

ದೈಹಿಕ ಸಂಬಂಧ ಬೆಳೆಸುವಾಗ ಮಹಿಳೆ ತನ್ನ ಸಂಗಾತಿ ಹೀಗೆ ಮಾಡಲಿ ಎಂದು ಬಯಸುತ್ತಾಳೆ. ಕೆಲವೊಮ್ಮೆ ಪುರುಷ ಸಂಗಾತಿ ತದ್ವಿರುದ್ಧವಾಗಿ ನಡೆದುಕೊಂಡು ಮಹಿಳೆ ನೊಂದುಕೊಳ್ಳುತ್ತಾಳೆ.

ಲೈಂಗಿಕ ಸಂಪರ್ಕ ಬೆಳಸಕ್ಕೂ ಮೊದಲು ಪತಿ ತನ್ನೊಂದಿಗೆ ಸಂತಸದಿಂದ ಮಾತನಾಡಬೇಕು ಎಂದು ಬಯಸುತ್ತಾಳೆ. ರೊಮ್ಯಾಂಟಿಕ್ ಮಾತುಗಳ ನಂತರ ಮಹಿಳೆಯರಲ್ಲಿ ಕಾಮದ್ವೇಗ ಉಂಟಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.

Tap to resize

ಉತ್ತಮ ಲೈಂಗಿಕ ಜೀವನಕ್ಕಾಗಿ ದಂಪತಿಗಳ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಹಿಂಜರಿಕೆ ಉಂಟಾದ್ರೆ ಲೈಂಗಿಕ ತೃಪ್ತಿ ಇರಲ್ಲ. ಹಾಗಾಗಿ ಲೈಂಗಿಕತೆ ಬಗ್ಗೆ ತಿಳುವಳಿಕೆ ಹೊಂದಿರಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಮಹಿಳೆ ದೈಹಿಕ ಸಂಪರ್ಕ ಬಳಿಕ ಸಂಗಾತಿ ತನ್ನ ಜೊತೆಯಲ್ಲಿ ಮಾತನಾಡಬೇಕು ಎಂದು ಬಯಸುತ್ತಾಳೆ. ಆತ ತನ್ನ ಆಸೆಗಳನ್ನು ಆಲಿಸಲಿ ಮತ್ತೊಮ್ಮೆ ಸಂಪರ್ಕಕ್ಕೆ ಬರಲಿ ಎಂದು ಇಚ್ಛಿಸುತ್ತಾಳೆ.

ಮಹಿಳೆ ತನ್ನ ಸಂಗಾತಿ ತನ್ನನ್ನು ಎಷ್ಟು ಪ್ರೀತಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾಳೆ. ಗಂಡ ತನ್ನ ಸೌಂದರ್ಯವನ್ನು ಹೊಗಳಲಿ, ಪ್ರೀತಿಯ ಮಾತುಗಳನ್ನಾಡಲಿ ಎಂದು ಆಸೆಪಡ್ತಾಳೆ. ಸೆಕ್ಸ್ ಸಂದರ್ಭದಲ್ಲಿ ಸಂಗಾತಿಯಿಂದ ಲವ್ ಯು ಪದ ಕೇಳಲು ಇಷ್ಟಪಡ್ತಾಳಂತೆ.

ಸೆಕ್ಸ್ ಮಾಡುವಾಗ ಪತಿ ಫ್ಲೋರ್ ಪ್ಲೇ ಮಾಡೋದನ್ನು ಮಹಿಳೆಯರು ಇಷ್ಟಪಡುತ್ತಾರೆ. ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿ ಲೈಂಗಿಕ ಕ್ರಿಯೆಗೆ ಮುನ್ನ ಫೋರ್‌ಪ್ಲೇ ಮಾಡಬೇಕೆಂದು ಬಯಸುತ್ತಾರೆ.

ದೈಹಿಕ ಸಂಪರ್ಕ ಮಾಡುವಾಗ ತನ್ನ ಕೈಗಳನ್ನು ಬಲವಾಗಿ ಹಿಡಿದುಕೊಳ್ಳಲಿ ಎಂದು ಬಯಸುತ್ತಾರೆ. ನಂತರ ಗಂಡನ ತೋಳುಗಳಲ್ಲಿ ಬಂಧಿಯಾಗಿ ಆತನ ಎದೆ ಮೇಲೆ ಮಲಗಲು ಇಷ್ಟಡುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

ಲೈಂಗಿಕ ಕ್ರಿಯೆ ಬಳಿಕ ಪತಿ ನನ್ನೊಂದಿಗೆ ಮಾತನಾಡಲ್ಲ ಎಂಬ ವಿಚಿತ್ರ ಪ್ರಕರಣಗಳು ದೆಹಲಿಯಲ್ಲಿ ದಾಖಲಾದ ಉದಾಹರಣೆಗಳಿವೆ. ಹಾಗಾಗಿ ಪುರುಷರು ತಮ್ಮ ಸಂಗಾತಿ ಏನು ಬಯಸುತ್ತಾಳೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಪ್ರಕ್ರಿಯೆ ಗಂಡ ಹೆಂಡತಿ ಸಂಬಂಧವನ್ನು ಹತ್ತಿರಗೊಳಿಸುತ್ತವೆ ಎಂದು ಲೈಂಗಿಕ ತಜ್ಞರು ಸಲಹೆ ನೀಡುತ್ತಾರೆ

Latest Videos

click me!