ನಟ ಜಾಕಿ ಭಗ್ನಾನಿ ಕೈ ಹಿಡಿದ ಗಿಲ್ಲಿ ಬೆಡಗಿ: ಗೋವಾದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ರಾಕುಲ್ ಪ್ರೀತ್

First Published | Feb 22, 2024, 11:49 AM IST

ಕನ್ನಡದ ಗಿಲ್ಲಿ ಸಿನಿಮಾ ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ನಟ ಜಾಕಿ ಭಗ್ನಾನಿ ಜೊತೆ ಗೋವಾದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಕನ್ನಡದ ಗಿಲ್ಲಿ ಸಿನಿಮಾ ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಬಹುಕಾಲದ ಗೆಳೆಯ ನಟ ಜಾಕಿ ಭಗ್ನಾನಿ ಜೊತೆ ಗೋವಾದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಧ್ಯಾಹ್ನ 3.30ರ ಮುಹೂರ್ತದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಬಾಲಿವುಡ್ ತಾರೆಯರು, ಆತ್ಮೀಯ ಸ್ನೇಹಿತರು, ಬಂಧುಗಳು ಕುಟುಂಬದವರು ಭಾಗಿಯಾಗಿದ್ದರು.

ತಮ್ಮ ಬದುಕಿನ ಈ ವಿಶೇಷ ಕ್ಷಣಗಳ ಫೋಟೋಗಳನ್ನು ಸ್ವತಃ ರಾಕುಲ್ ಪ್ರೀತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನನ್ನದು ಈಗ ಹಾಗೂ ಎಂದೆಂದಿಗೂ ಎಂದು ಬರೆದು ಲವ್ ಸಿಂಬಲ್ ಹಾಕಿದ್ದಾರೆ.

Tap to resize

ನವ ಜೋಡಿಗೆ ಬಾಲಿವುಡ್ ತಾರೆಯರಾದ ಅಜಯ್ ದೇವಗನ್, ಜೆನಿಲಿಯಾ, ನಯನತಾರಾ, ರಾಶಿ ಖನ್ನಾ, ಮೃನಾಲ್ ಠಾಕೂರ್, ಕಾಜಲ್, ಪರಿಣಿತಿ ಚೋಪ್ರಾ ಹೀಗೆ ಸಿನಿಮಾ ರಂಗದ ಬಹುತೇಕ ಗಣ್ಯರು ಶುಭ ಹಾರೈಸಿದ್ದಾರೆ. 

ರಾಕುಲ್ ಪ್ರೀತ್ ಸಿಂಗ್ ಪಿಂಕ್ ಪೀಚ್ ಬಣ್ಣದ ಅದ್ದೂರಿ ಲೆಹೆಂಗಾ ಧರಿಸಿ ವಜ್ರದ ನೆಕ್ಲೇಸ್ ಧರಿಸಿ ತಮ್ಮ ಮದ್ವೆಯಲ್ಲಿ ಮಿಂಚುತ್ತಿದ್ದರೆ, ಜಾಕಿ ಭಗ್ನಾನಿ ಹಾಲಿನ ಕೆನೆ ಬಣ್ಣ ಹಾಗೂ ಚಿನ್ನದ ಬಣ್ಣದ ಸಂಯೋಜನೆಯ ಶೆರ್ವಾನಿಯಲ್ಲಿ ಮಿಂಚಿದ್ದಾರೆ.
 

ಸೌತ್‌ ಗೋವಾದಲ್ಲಿರುವ ಐಟಿಸಿ ಗ್ರ್ಯಾಂಡ್‌ ಹೊಟೇಲ್‌ನಲ್ಲಿ ರಾಕುಲ್ ಪ್ರೀತ್ ಹಾಗೂ ಜಾಕಿ ಭಗ್ನಾನಿ ಈ ಅದ್ದೂರಿ ಮದ್ವೆ ನಡೆದಿದೆ.  ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಅಯುಷ್ಮಾನ್ ಕುರಾನಾ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರು ಈ ಮದ್ವೆಯಲ್ಲಿ ಭಾಗಿಯಾಗಿದ್ದಾರೆ.

ರಾಕುಲ್  ಹಾಗೂ ಜಾಕಿ ಅವರು ಎರಡು ರೀತಿಯಲ್ಲಿ ಮದ್ವೆಯಾಗಿದ್ದು ಆನಂದ್ ಕರಾಜ್( ಪಂಜಾಬಿ ವಿವಾಹ ಪೂರ್ವ ಸಂಪ್ರದಾಯ) ನಿನ್ನೆ ನಡೆದಿತ್ತು. ಸಿಂಧಿ ಶೈಲಿಯಲ್ಲಿ ಈ ಜೋಡಿ ಮತ್ತೆ ಮದ್ವೆಯಾಗಿದ್ದು, ರಾಕುಲ್ ಚುಡ್ಡಾ ಕಾರ್ಯಕ್ರಮ ಇಂದು ಮುಂಜಾನೆ ನಡೆದಿದೆ. 

ಇನ್ನು ರಾಕುಲ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕಮಲ್ ಹಾಸನ್ ಜೊತೆ ಇಂಡಿಯನ್ 2ನಲ್ಲಿ ನಟಿಸುತ್ತಿದ್ದು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕಥಾ ಹಂದರವನ್ನು ಹೊಂದಿದೆ. 

Latest Videos

click me!