ಈ ಹಾರ್ಮೋನ್‌ನಿಂದಾಗಿಯೇ ನಿಮಗೆ ಇನ್ನೊಬ್ರ ಮೇಲೆ ಲವ್ ಆಗೋದು !

First Published | Feb 21, 2024, 5:44 PM IST

ಆಕ್ಸಿಟೋಸಿನ್ ಅನ್ನು ಲವ್ ಹಾರ್ಮೋನ್ ಎಂದು ಕರೆಯಲಾಗುತ್ತದೆ ಅನ್ನೋದು ನಿಮಗೆ ತಿಳಿದಿದೆಯೇ? ಈ ಹಾರ್ಮೋನ್ ಕಾರಣದಿಂದಾಗಿಯೇ, ನಿಮಗೆ ಯಾರ ಮೇಲಾದರೂ ಲವ್, ಕ್ರಶ್ ಆಗೋಕೆ ಸಾಧ್ಯ. 
 

ಲವ್ ಹಾರ್ಮೋನುಗಳ ಬಗ್ಗೆ ತಿಳಿಯಿರಿ 
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ? ಈ ಪ್ರೀತಿ ಹೇಗಾಯ್ತು? ನಿಮ್ಮೊಳಗೆ ಪ್ರೀತಿ ಹುಟ್ಟಿಕೊಳ್ಳೋದಕ್ಕೆ ಕಾರಣ ಏನು? ನೀವು ಲವ್ ಮಾಡ್ತಿದ್ದೀರಿ ಅಂದ್ರೆ, ಎಲ್ಲದಕ್ಕೂ ಮೊದ್ಲು ನೀವು ಲವ್ ಹಾರ್ಮೋನ್ (love hormones) ಅಂದರೆ ಆಕ್ಸಿಟೋಸಿನ್ ಬಗ್ಗೆಯೂ ತಿಳಿದಿರಬೇಕು. 
 

ಪ್ರೀತಿ ಹೇಗೆ ಹುಟ್ಟುತ್ತೆ?
ಈ ಪ್ರಶ್ನೆ ಕೇಳಿದ ತಕ್ಷಣ ನಿಮಗೆ ಕನ್ ಫ್ಯೂಸ್ ಆಗಬಹುದು ಅಲ್ವಾ? ಆದರೆ ವಿಷ್ಯ ಏನಪ್ಪಾ ಅಂದ್ರೆ, ಆಕ್ಸಿಟೋಸಿನ್ (oxytocin)ಹಾರ್ಮೋನ್ ನಮ್ಮ ದೇಹದಲ್ಲಿ ಕೆಲವು ರಾಸಾಯನಿಕಗಳನ್ನು ಉತ್ಪಾದಿಸುತ್ತದೆ, ಅದು ನಿಮ್ಮನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ.

Tap to resize

ಯಾವಾಗ ಈ ಹಾರ್ಮೋನ್ ರಿಲೀಸ್ ಆಗುತ್ತೆ?
ಈ ಹಾರ್ಮೋನ್ ಸುಮ್ ಸುಮ್ನೇ ರಿಲೀಸ್ ಆಗೋದಿಲ್ಲ. ನೀವು ವಿಶೇಷ ವ್ಯಕ್ತಿಯನ್ನು ತಬ್ಬಿಕೊಂಡಾಗ ಅಥವಾ ನಿಮಗೆ ಯಾರಾದರು ಇಷ್ಟವಾಗಿದ್ದರೆ, ಅವರನ್ನು ನೋಡಿದ ತಕ್ಷಣ, ಅವರು ನಿಮ್ಮ ಜೊತೆಗಿದ್ದ ತಕ್ಷಣ ನಿಮ್ಮ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. 
 

ತುಂಬಾ ವಿಶೇಷವಾದ ಭಾವನೆ ಮೂಡುತ್ತೆ
ಈ ಹಾರ್ಮೋನ್ ತುಂಬಾ ವಿಶೇಷವಾಗಿದೆ ಏಕೆಂದರೆ ಇದು ನಿಮಗೆ ತುಂಬಾ ವಿಶೇಷವಾದ ಭಾವನೆಯನ್ನು (good feeling) ನೀಡುತ್ತದೆ. ನಿಮಗೆ ಲವ್ ಆಗಿದ್ದಾಗ, ಆ ವ್ಯಕ್ತಿ ನಿಮ್ಮೆದುರು ಬಂದಾಗ ಫೀಲ್ ಆಗೋದಿಲ್ವಾ? ಹೇಳಿ… 

ಭಾವನೆಗಳಿಗೆ ಜವಾಬ್ದಾರರಾಗಿರುತ್ತಾರೆ 
ಪ್ರಣಯ ಸಂಬಂಧಗಳ ಹೊರತಾಗಿ, ಸ್ನೇಹ ಅಥವಾ ಆಪ್ತ ಜನರ ಜೊತೆ ಇದ್ದಾಗ ನಿಮಗೆ ಯಾವ ರೀತಿಯ ಗುಡ್ ಫೀಲ್ ಆಗುತ್ತದೆ ಎಂಬುದಕ್ಕೆ ಆಕ್ಸಿಟೋಸಿನ್ ಕಾರಣವಾಗಿದೆ.
 

ಯಾವ ರೀತಿ ಫೀಲ್ ಆಗುತ್ತೆ
ಈ ಹಾರ್ಮೋನ್ (hormones) ನಿಮಗೆ ನಂಬಿಕೆ, ಸಂತೋಷ, ಭದ್ರತೆ, ಇಂಟಿಮೆಸಿ ಮತ್ತು ಬೆಂಬಲದ ಭಾವನೆಗಳನ್ನು ಅನುಭವಿಸಲು ಕಾರಣವಾಗಬಹುದು. ಈ ಹಾರ್ಮೋನ್ ಬಿಡುಗಡೆಯಾದಾಗ, ನಿಮ್ಮವರ ಜೊತೆ ಸಂತೋಷವಾಗಿರಲು ಸಾಧ್ಯವಾಗುತ್ತೆ. 

ಇದನ್ನು ನೆನಪಿಡಿ
ದೈಹಿಕ ಸ್ಪರ್ಶದಿಂದ (physical touch) ಮಾತ್ರವಲ್ಲ, ಆಟವಾಡುವುದು, ಮಸಾಜ್ ಪಡೆಯುವುದು ಅಥವಾ ಯೋಗ / ವ್ಯಾಯಾಮ ಮಾಡುವುದರಿಂದ ಸಹ ಆಕ್ಸಿಟೋಸಿನ್ ಹಾರ್ಮೋನ್ ಬಿಡುಗಡೆಯಾಗುತ್ತೆ. 

ಹೀಗೂ ಬಿಡುಗಡೆಯಾಗುತ್ತೆ
ಇನ್ನು ನಗುವುದು, ಸಂಗೀತ ಕೇಳುವುದು, ಸಾಮಾಜಿಕ ಚಟುವಟಿಕೆಗಳಲ್ಲಿ (social activity)ಭಾಗವಹಿಸುವುದು ಅಥವಾ ಉತ್ತಮ ಆಹಾರವನ್ನು ಸೇವಿಸುವ ಮೂಲಕವೂ ಈ ಹಾರ್ಮೋನ್ ಬಿಡುಗಡೆಯಾಗುತ್ತೆ. ಒಟ್ಟಲ್ಲಿ ಹೇಳಬೇಕಂದ್ರೆ ಈ ಹಾರ್ಮೋನ್ ಬಿಡುಗಡೆಯಿಂದ ನಿಮ್ಮ ಜೀವನ ಮಾತ್ರ ಖುಷೀಯಾಗಿರುತ್ತೆ.

Latest Videos

click me!