ಅಂದು ಹುಡುಗನ ಕಡೆಯವ್ರು ಮನೆಗೆ ಬಂದಿದ್ರು, ಪೊಲೀಸ್ರು ಸಮನ್ಸ್​ ತಂದ್ರು: ಮದುವೆ ಬಗ್ಗೆ ಕಂಗನಾ ಮಾತು

Published : Apr 20, 2026, 07:29 PM IST

ಸಂಸದೆ ಕಂಗನಾ ರಣಾವತ್, ಚಿರಾಗ್ ಪಾಸ್ವಾನ್ ಜೊತೆಗಿನ ಮದುವೆ ಸುದ್ದಿಯನ್ನು ತಮಾಷೆಯಾಗಿ ತಳ್ಳಿಹಾಕಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿ ಮದುವೆ ಬಗ್ಗೆ ಪ್ರಶ್ನಿಸಿದಾಗ ಮೌನವಹಿಸಿದ ಅವರು, ತನ್ನ ಮೇಲಿರುವ ಕೇಸುಗಳಿಂದ ಮದುವೆ ವಿಳಂಬವಾಗುತ್ತಿದೆ ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ.

PREV
16
ಕಾಂಟ್ರವರ್ಸಿ ಕ್ವೀನ್​

ಇದ್ದದ್ದನ್ನು ಇದ್ದ ಹಾಗೆ ನೇರಾನೇರ ಹೇಳಿ ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ನಟಿ, ಸಂಸದೆ ಕಂಗನಾ ರಣಾವತ್​ ಸದ್ಯ ಮದುವೆಯಿಂದಾಗಿ ಸದ್ದು ಮಾಡುತ್ತಿದ್ದಾರೆ. 

26
ಹೃತಿಕ್​ ರೋಷನ್​ ಜೊತೆ

ಈ ಹಿಂದೆ ಹೃತಿಕ್​ ರೋಷನ್​ ಮದುವೆಯಾಗಿ ನಂಬಿಸಿ ಕೊನೆಗೆ ಇನ್ನೇನು ಅಂತಿಮ ಹಂತ ಇರುವಾಗಲೇ ಮೋಸ ಮಾಡಿದ್ದನ್ನು ಖುಲ್ಲಂ ಖುಲ್ಲಾ ಆಗಿಯೇ ಹೇಳಿದ್ದರು ಕಂಗನಾ. ಇದೀಗ ಸಂಸದ, ನಟ ಚಿರಾಗ್​ ಪಾಸ್ವಾನ್​ ಜೊತೆ ಮದುವೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.

36
ಚಿರಾಗ್​ ಜೊತೆ ಗುಸುಗುಸು

ಕಂಗನಾ ಮತ್ತು ಚಿರಾಗ್​ ಹತ್ತು ವರ್ಷಗಳ ಹಿಂದೆ ಒಂದು ಸಿನಿಮಾದಲ್ಲಿ ನಟಿಸಿದ್ದರು. ಅವರಿಬ್ಬರೂ ಬೆಸ್ಟ್​ ಫ್ರೆಂಡ್ಸ್​. ಆದರೆ ಒಟ್ಟಿಗೇ ಅವರು ಇರುವುದನ್ನು ನೋಡಿ ಗುಸುಗುಸು ಹರಡಿಸಲಾಗುತ್ತಿದೆ. ಅದಕ್ಕೆ ಕಂಗನಾ ನಾವಿಬ್ಬರೂ ಲವ್​ ಮಾಡ್ತಿದ್ರೆ ಇಷ್ಟೊತ್ತಿಗಾಗಲೇ ಮಗು ಆಗಿರುತ್ತಿತ್ತು ಎಂದು ತಮಾಷೆ ಮಾಡಿದ್ದಾರೆ.

46
ಯಾರ ಜೊತೆ ಮದುವೆ

ಇದೀಗ ಕಪಿಲ್​ ಶರ್ಮಾ ಷೋನಲ್ಲಿ ನಟಿಗೆ ನೀವು ರಾಜಕಾರಣಿಯನ್ನು ಮದ್ವೆಯಾಗ್ತಿರೋ, ಸಿನಿಮಾ ತಾರೆಯರನ್ನೋ ಎಂದು ಪ್ರಶ್ನಿಸಿದಾಗ, ಎಲ್ಲದಕ್ಕೂ ಪಟಪಟನೆ ಅರುಳು ಹುರಿದಂತೆ ಉತ್ತರ ಕೊಡ್ತಿದ್ದ ಕಂಗನಾ ಅರೆಕ್ಷಣ ಮೌನವಾಗಿಬಿಟ್ಟರು, ಏನು ಹೇಳಬೇಕು ಎನ್ನುವುದು ಅವರಿಗೆ ತಿಳಿಯಲಿಲ್ಲ.

56
ಇವರು ಬಿಡಲ್ವಲ್ಲಾ

ಕೊನೆಗೆ ಎಲ್ಲರೂ ಮದುವೆಯಾಗಬೇಕು. ನಾನೂ ಆಗುತ್ತೇನೆ. ಪ್ರತಿಯೊಬ್ಬರಿಗೂ ಪಾರ್ಟನರ್​ ಬೇಕು. ಅದರಿಂದ ನಾನು ಮದ್ವೆ ಆಗಲ್ಲ ಎಂದು ಹೇಳಲ್ಲ. ಆದರೆ ಏನು ಮಾಡೋದು ನನ್ನ ಬಗ್ಗೆ ಕಂಪ್ಲೇಂಟ್​ ಕೊಡುತ್ತಲೇ ಇರುತ್ತಾರೆ, ಆ ಕೇಸು ಈ ಕೇಸು ಜಡಿಯುತ್ತಲೇ ಇರುತ್ತಾರೆ. ಪೊಲೀಸರು ಸಮನ್ಸ್​ ಕೊಡುತ್ತಲೇ ಇರುತ್ತಾರೆ. ಮದ್ವೆ ಆಗೋದು ಯಾವಾಗ ಎಂದು ತಮಾಷೆ ಮಾಡಿದ್ದಾರೆ.

66
ಹುಡುಗನ ಕಡೆಯವರು ಬಂದಿದ್ರು

ಅಂದು ನನ್ನನ್ನು ನೋಡಲು ಹುಡುಗನ ಅಪ್ಪ-ಅಮ್ಮ ಬಂದಿದ್ದರು. ಇನ್ನೇನು ಮದುವೆಗೆ ಓಕೆ ಎಂದರು. ಮದುವೆ ಮಾತುಕತೆ ನಡೆಯುತ್ತಿರುವಾಗಲೇ ಪೊಲೀಸರು ಸಮನ್ಸ್​ ತಗೊಂಡು ಬಂದರು. ಹುಡುಗನ ಅಪ್ಪ-ಅಮ್ಮ ಓಡಿ ಹೋದರು ಎಂದು ಹೇಳಿದ ಕಂಗನಾ, ಇವೆಲ್ಲಾ ತಮಾಷೆ ಮತ್ತೆ. ಹೀಗೇನೂ ನಡೆದಿಲ್ಲ ಎಂದು ಹೇಳಿ ಮದುವೆ ವಿಷಯವನ್ನು ಅಲ್ಲಿಯೇ ಮುಚ್ಚಿಬಿಟ್ಟರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories