ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಗ್ರ್ಯಾಂಡ್‌ ವೆಡ್ಡಿಂಗ್ ನಡೀತಿರೋ ಸ್ಟೋಕ್‌ಪಾರ್ಕ್‌ ಹೇಗಿದೆ?

First Published | Apr 23, 2024, 10:43 AM IST

ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಮುಖೇಶ್‌ ಅಂಬಾನಿ ಕಿರಿಯ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭ ಜುಲೈನಲ್ಲಿ ಲಂಡನ್‌ನಲ್ಲಿ ನಡೆಯಲಿದೆ. ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿಯ ಡೀಟೈಲ್ಸ್ ಇಲ್ಲಿದೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಈ ವರ್ಷದ ಜುಲೈನಲ್ಲಿ ತಮ್ಮ ಲೇಡಿ ಲವ್ ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ. ಇತ್ತೀಚೆಗಷ್ಟೇ ಮಾರ್ಚ್‌ನಲ್ಲಿ ತಮ್ಮ ಪೂರ್ವ ವಿವಾಹದ ಸಂಭ್ರಮವನ್ನು ಆಚರಿಸಿಕೊಂಡ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 
 

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ನ ಚೇರ್ಮನ್‌ ಮುಕೇಶ್‌ ಅಂಬಾನಿ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆಗೆ ಎಲ್ಲಾ ರೀತಿಯ ಸಿದ್ಧತೆಗಳು ನಡೀತಿವೆ. ಪ್ರೀ ವೆಡ್ಡಿಂಗ್‌ ಸಮಾರಂಭ ಮಾರ್ಚ್‌ ತಿಂಗಳ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ದೂರಿಯಾಗಿ ನಡೆದಿತ್ತು. 

Tap to resize

ಮದುವೆಯ ಸ್ಥಳ, ಅತಿಥಿಗಳ ಪಟ್ಟಿ ಮತ್ತು ಡ್ರೆಸ್ ಡಿಸೈನರ್‌ಗಳ ಬಗ್ಗೆ ಹಲವಾರು ಗಾಳಿ ಸುದ್ದಿಗಳು ಕೇಳಿ ಬರುತ್ತಿವೆ. ಇತ್ತೀಚಿನ ವರದಿಯೊಂದು ಇದೀಗ ಅನಂತ್ ಮತ್ತು ರಾಧಿಕಾ ಅವರ ಮದುವೆಯ ಕಾರ್ಯಕ್ರಮಗಳಲ್ಲೊಂದು ಲಂಡನ್‌ನ ಅವರ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ನಡೆಯಲಿದೆ ಎಂದು ಹೇಳಿದೆ.

ಅಂಬಾನಿ ಫ್ಯಾಮಿಲಿ ತಮ್ಮ ಅದ್ಧೂರಿ ಪಾರ್ಟಿ, ಸಮಾರಂಭಗಳಿಗೆ ಹೆಸರು ಮಾಡಿದ್ದಾರೆ. ಹೀಗಾಗಿ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ಆಯೋಜಿಸುವ ಕಾರ್ಯಕ್ರಮವು ಅತೀ ಅದ್ಧೂರಿಯಾಗಿ ಇರಬಹುದು ಎಂದು ಊಹಿಸಲಾಗುತ್ತಿದೆ.

ಸ್ಟೋಕ್ ಪಾರ್ಕ್‌ನಲ್ಲಿ ಆಯೋಜಿಸಲಾಗುತ್ತಿರುವ ಫಂಕ್ಷನ್‌ನ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಆದರೆ, ಇದು ಕಾಕ್‌ಟೈಲ್ ಅಥವಾ ಮ್ಯೂಸಿಕಲ್ ನೈಟ್‌ ಎಂದು ಹೇಳಲಾಗುತ್ತದೆ.

ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ 592 ಕೋಟಿಯ ಸ್ಟೋಕ್ ಪಾರ್ಕ್ ಕಂಟ್ರಿ ಕ್ಲಬ್ UKಯ ಅತ್ಯಂತ ಐಷಾರಾಮಿ ಆಸ್ತಿಯಾಗಿದೆ. ಇದು ಬರೋಬ್ಬರಿ 900 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಎರಡು ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ, 'ಗೋಲ್ಡ್ ಫಿಂಗರ್' (1964) ಮತ್ತು 'ಟುಮಾರೊ ನೆವರ್ ಡೈಸ್' (1997)ನಲ್ಲಿದೆ.

ಆಸ್ತಿಯನ್ನು ಮೊದಲು 1066 ರಲ್ಲಿ ನಿರ್ಮಿಸಲಾಯಿತು ಮತ್ತು ನಂತರ 1760 ರಲ್ಲಿ ಜಾನ್ ಪೆನ್ರಿಂದ ನವೀಕರಿಸಲಾಯಿತು. ಸ್ಟೋಕ್ ಪಾರ್ಕ್ ಎಸ್ಟೇಟ್ 49 ಸೊಗಸಾದ ಕೊಠಡಿಗಳು, ಮೂರು ಉತ್ತಮ ಊಟದ ರೆಸ್ಟೋರೆಂಟ್‌ಗಳನ್ನು ಹೊಂದಿದೆ.

4,000 ಚದರ ಅಡಿಗಳಷ್ಟು ವ್ಯಾಪಿಸಿರುವ ಜಿಮ್, ಆರೋಗ್ಯ ಕೇಂದ್ರ, ಒಳಾಂಗಣ ಮತ್ತು ಹೊರಾಂಗಣ ಈಜುಕೊಳಗಳನ್ನು ಒಗೊಂಡಿದೆ.  13 ಟೆನ್ನಿಸ್ ಕೋರ್ಟ್‌ಗಳು ಮತ್ತು ದೊಡ್ಡ ಗಾಲ್ಫ್ ಕೋರ್ಸ್ ಇದೆ.

ಇಲ್ಲಿನ ಅನೇಕ ಕೋಣೆಗಳ ಪೈಕಿ, ಪೆನ್ಸಿಲ್ವೇನಿಯಾ ಸೂಟ್ ಅತ್ಯಂತ ಜನಪ್ರಿಯವಾಗಿದೆ ಮತ್ತು 'ಬ್ರಿಡ್ಜೆಟ್ ಜೋನ್ಸ್ ಡೈರಿ' ಸಿನಿಮಾದಲ್ಲಿಯೂ ಇದು ಸಹ ಕಾಣಿಸಿಕೊಂಡಿದೆ. ವಿಂಟೇಜ್ ಪುರಾತನ ವಸ್ತುಗಳು ಮತ್ತು ಕಲಾಕೃತಿಗಳೊಂದಿಗೆ ಈ ಕೋಣೆ ಅಲಂಕೃತವಾಗಿದೆ.

ರೆನೀ ಜೆಲ್ವೆಗ್ಗರ್, ಹಗ್ ಗ್ರಾಂಟ್ ಮತ್ತು ಕಾಲಿನ್ ಫಿರ್ತ್ ನಟಿಸಿದ 2001 ರ ಹಿಟ್ ಚಲನಚಿತ್ರದ 'ಮಿನಿ-ಬ್ರೇಕ್' ಮತ್ತು ರೋಯಿಂಗ್ ದೃಶ್ಯಗಳನ್ನು ಸ್ಟೋಕ್ ಪಾರ್ಕ್‌ನಲ್ಲಿ ಚಿತ್ರೀಕರಿಸಲಾಗಿತ್ತು.

Latest Videos

click me!