ಸೋಶಿಯಲ್ ಮೀಡಿಯಾ ರೀಲ್ಸ್‌ಗೆ ಮಾರುಹೋದ ಪತ್ನಿಗೆ ಪತಿಯೊಬ್ಬ ಪಿಂಡದಾನ ಮಾಡಿರುವ ಘಟನೆ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರಿಂದ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಪತಿಯ ಕೃತ್ಯವನ್ನು ಖಂಡಿಸಿದರೆ, ಇನ್ನು ಕೆಲವರು ಸಾಮಾಜಿಕ ಮೌಲ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಹುತೇಕರಿಗೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂಬ ಆಸೆ ಇರುತ್ತದೆ. ಇದಕ್ಕಾಗಿ ವಿಶೇಷ, ವಿಶಿಷ್ಠ ಕಂಟೆಂಟ್ ಮೂಲಕ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಪತ್ನಿಯ ಸೋಶಿಯಲ್ ಮೀಡಿಯಾ ಬಳಕೆಗೆ ಬೇಸತ್ತ ಗಂಡನೊಬ್ಬ ಮಡದಿ ಹೆಸರಿನಲ್ಲಿ ಪಿಂಡದಾನ ಮಾಡಿದ್ದಾನೆ.
25
ಪಿಂಡ ಪ್ರದಾನ
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಹೇಮಾ ಚೌಧರಿ ಎಂಬವರ ಪತಿ ಪಿಂಡದಾನ ಮಾಡಿದ್ದಾರೆ. ನದಿಯಲ್ಲಿ ಪೋಟೋ, ಹೂ, ಅನ್ನದ ಪಿಂಡ ವಿಸರ್ಜನೆ ಮಾಡಿದ್ದಾರೆ. ರೀಲ್ಸ್ ಮಾಡದಂತೆ ತಾಕೀತು ಮಾಡಿದರೂ ಹೆಂಡ್ತಿ ಒಪ್ಪದಿದ್ದಕ್ಕೆ ಗಂಡ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋವನ್ನು @choga_don ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ವೈರಲ್ ಆಗುತ್ತಿದೆ.
35
ಮಹಿಳಾ ನೆಟ್ಟಿಗರಿಂದ ತೀವ್ರ ಆಕ್ಷೇಪ
ಉತ್ತರಾಖಂಡದ ಹರಿದ್ವಾರದ ಹರ್ ಕಿ ಪುರಿ ಘಾಟ್‌ನಲ್ಲಿ ನಿಂತ್ಕೊಂಡು ಪಿಂಡ ಪ್ರದಾನ ಮಾಡಲಾಗಿದೆ. ಈಗ ಗಂಡನ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಮಹಿಳಾ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈತನಿಗೂ ಫೇಮಸ್ ಆಗುವ ಹುಚ್ಚಿರಬೇಕು. ಹಾಗಾಗಿಯೇ ವಿಡಿಯೋ ಮಾಡುತ್ತಾ ಪಿಂಡ ಬಿಟ್ಟಿದ್ದಾನೆ. ಈತ ಮಾಡಿರೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಂದೆಡೆ ಕೆಲ ನೆಟ್ಟಿಗರು, ನದಿಯಲ್ಲಿ ಫೋಟೋ, ಬಟ್ಟೆ ಬಿಟ್ಟಿರೋದಕ್ಕೆ ಜಲಮಾಲಿನ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡಿರುವ ಖಾತೆಯಲ್ಲಿ, ಇನ್‌ಸ್ಟಾಗ್ರಾಮ್ ನಗ್ನತೆಯು ನಮ್ಮ ಸಮಾಜ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹಾಳು ಮಾಡುತ್ತಿದೆ. ಈ ವಿಶೇಷ ವಿಷಯವನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
55
ಇದು ನಿಜವೇ?
ಪಿಂಡ ಪ್ರದಾನ ಮಾಡಿರುವ ವ್ಯಕ್ತಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹೇಮಾ ಚೌಧರಿ ಗಂಡನಾ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಹೇಮಾ ಚೌಧರಿ ಇನ್‌ಸ್ಟಾಗ್ರಾಂನಲ್ಲಿ 9.48 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವೈರಲ್ ವಿಡಿಯೋ ಕುರಿತು ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.