ನಿಮ್ಮ ಮಗುವನ್ನು ಸೂಪರ್ ಕಾನ್ಫಿಡೆಂಟ್ ಮಾಡೋದು ಹೇಗೆ?

First Published | Mar 13, 2024, 12:38 PM IST

ಆತ್ಮವಿಶ್ವಾಸ ಹೊಂದಿರುವ ಮಕ್ಕಳು ಗೆಳೆಯರ ಒತ್ತಡ, ಜವಾಬ್ದಾರಿ, ಹತಾಶೆ, ಸವಾಲುಗಳು ಮತ್ತು ಧನಾತ್ಮಕ ಮತ್ತು ಋಣಾತ್ಮಕ ಭಾವನೆಗಳನ್ನು ಎದುರಿಸಲು ಉತ್ತಮವಾಗಿ ಸಜ್ಜುಗೊಂಡಿರುತ್ತಾರೆ. ಹೀಗೆ ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಬೆಳೆಸಲು ನೀವೇನು ಮಾಡಬೇಕು?
 

ಮಗುವಿನ ಭವಿಷ್ಯದ ಸಂತೋಷ, ಆರೋಗ್ಯ ಮತ್ತು ಯಶಸ್ಸಿಗೆ ಆತ್ಮವಿಶ್ವಾಸವು ಬಹುಮುಖ್ಯವಾಗಿದೆ. ಆತ್ಮವಿಶ್ವಾಸ ಹೊಂದಿರುವ ಮಕ್ಕಳು ಗೆಳೆಯರ ಒತ್ತಡ, ಜವಾಬ್ದಾರಿ, ಹತಾಶೆ, ಸವಾಲುಗಳು ಮತ್ತು ಧನಾತ್ಮಕ ಮತ್ತು ಋಣಾತ್ಮಕ ಭಾವನೆಗಳನ್ನು ಎದುರಿಸಲು ಉತ್ತಮವಾಗಿ ಸಜ್ಜುಗೊಂಡಿರುತ್ತಾರೆ. ಹೀಗೆ ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಬೆಳೆಸಲು ನೀವೇನು ಮಾಡಬೇಕು?
 

ಇದಕ್ಕೆ ಇಲ್ಲೊಬ್ಬ ತಂದೆ ಕೊಟ್ಟಿರುವ ಒಂದು ಟಿಪ್ ಹೆಚ್ಚು ಫಲಕಾರಿಯಂತೆ ತೋರುತ್ತದೆ. ಆತ ಹೇಳುತ್ತಾನೆ, ಮಗಳು ಬಂದು ತಾನು ಬಿಡಿಸಿದ ಚಿತ್ರ ತೋರಿಸಿದರೆ ನಾನದನ್ನು ಸಾರಾಸಗಟಾಗಿ ಹೊಗಳುವುದಿಲ್ಲ. ಬದಲಿಗೆ, ಚೆನ್ನಾಗಿ ಮಾಡಿಲ್ಲ ಇನ್ನೂ ಉತ್ತಮವಾಗಿ ಮಾಡು ಎಂದೂ ಹೇಳುವುದಿಲ್ಲ.

Tap to resize

ಆದರೆ, 'ನಿನಗೆ ಏನನ್ನಿಸುತ್ತಿದೆ' ಎಂದು ಕೇಳುತ್ತೇನೆ ಎಂದು ಹೇಳುತ್ತಾರೆ. ಈ ರೀತಿಯಾಗಿ ಕೇಳುವುದರ ಪ್ರಯೋಜನವನ್ನು ಈ ತಂದೆ ವಿವರಿಸಿದ್ದಾರೆ.

ಇದರಿಂದ ಆಕೆ ತನ್ನ ಕೆಲಸದ ಬಗ್ಗೆ ತಾನೇ ಯೋಚಿಸಲಾರಂಭಿಸುತ್ತಾಳೆ. ಅವಳಿಗೆ ಚೆನ್ನಾಗಿದೆ ಎನಿಸಿದರೆ ತಂದೆಯೂ ಅದಕ್ಕೆ ಅನುಮೋದಿಸುತ್ತಾನೆ. ಆಕೆಗೆ ಚೆನ್ನಾಗಿಲ್ಲ ಎನಿಸಿದರೂ ಅದನ್ನೂ ಅನುಮೋದಿಸುತ್ತಾನೆ. 

ಇದರಿಂದ ಅವಳು, ತನ್ನ ಕೆಲಸಕ್ಕಾಗಿ ಹೊರಗಿನವರ ಮನ್ನಣೆಗಾಗಿ ಎಂದೂ ಕಾಯುವುದಿಲ್ಲ. ಜನರನ್ನು ಮೆಚ್ಚಿಸಲು ಹೋಗುವುದಿಲ್ಲ. ಬದಲಿಗೆ, ತನ್ನ ಕೆಲಸ ತನಗೆ ತೃಪ್ತಿ ಕೊಡುವಂತೆ ಮಾಡುತ್ತಾಳೆ. ಆಗ ಅವಳಿಗೆ ತಾನು ಮಾಡಿದ್ದರಲ್ಲಿ ಆತ್ಮವಿಶ್ವಾಸ ಖಂಡಿತಾ ಬರುತ್ತದೆ. ಪ್ರತಿಯೊಂದನ್ನೂ ತನ್ನ ದೃಷ್ಟಿಕೋನದಲ್ಲಿ ನೋಡುವುದನ್ನು ಮಗು ಕಲಿಯುತ್ತದೆ ಎನ್ನುತ್ತಾನೆ ಈ ತಂದೆ. 
 

ಇದರ ಹೊರತಾಗಿ ಈ ಟಿಪ್ಸ್‌ಗಳು ಕೂಡಾ ಬಹಳ ಪ್ರಯೋಜನಕಾರಿಯಾಗಿವೆ. 

ನಿಮ್ಮ ಪ್ರೀತಿ ಅನ್‌ಕಂಡಿಶನಲ್ ಎಂಬುದನ್ನು ಅರ್ಥ ಮಾಡಿಸಿ
ನಾವು ನಮ್ಮ ಮಕ್ಕಳನ್ನು ನೋಡುವ ರೀತಿ ಅವರು ತಮ್ಮನ್ನು ತಾವು ನೋಡುವ ರೀತಿಯಲ್ಲಿ ಆಳವಾದ ಪ್ರಭಾವವನ್ನು ಬೀರುತ್ತದೆ. 

ಹಾಗಾಗಿ, ನಿಮ್ಮ ಮಕ್ಕಳಿಗೆ ಅವರು ತಪ್ಪುಗಳನ್ನು ಅಥವಾ ಕಳಪೆ ನಿರ್ಧಾರಗಳನ್ನು ಮಾಡಿದರೂ ಸಹ ನೀವು ಅವರನ್ನು ಪ್ರೀತಿಸುತ್ತೀರಿ ಮತ್ತು ಕಾಳಜಿ ವಹಿಸುತ್ತೀರಿ ಎಂದು ಸ್ಪಷ್ಟಪಡಿಸಿ ಮತ್ತು ಅವರನ್ನು ಕಟುವಾಗಿ ಟೀಕಿಸುವುದು ಅಥವಾ ಅವಮಾನಿಸುವುದನ್ನು ತಪ್ಪಿಸಿ.
 

ಅವರೊಂದಿಗೆ ಸಕಾರಾತ್ಮಕ ಸ್ವ-ಚರ್ಚೆಯನ್ನು ಅಭ್ಯಾಸ ಮಾಡಿ.
ಆಗಾಗ ನನ್ನಿಂದ ಇದು ಸಾಧ್ಯವಾಗುತ್ತದೆ. ಖಂಡಿತಾ ನಾನಿದನ್ನು ಮಾಡಬಲ್ಲೆ, ಕೊಂಚ ಪ್ರಯತ್ನ ಬೇಕಷ್ಟೇ ಮುಂತಾದ ಸಕಾರಾತ್ಮಕ ಮಾತುಗಳನ್ನು ಅವರಿಗೆ ಹೇಳಿಕೊಳ್ಳುವುದನ್ನು ಅಭ್ಯಾಸ ಮಾಡಿಸಿ. 
 

ಮಕ್ಕಳೊಂದಿಗೆ ಆಟವಾಡಿ
ಮಕ್ಕಳೊಂದಿಗೆ ಆಟದಲ್ಲಿ ಸೇರಿಕೊಳ್ಳಿ. ಏನು ಆಡುವುದೆಂದು ಅವರೇ ನಿರ್ಧರಿಸಲಿ ಮತ್ತು ಅವರೇ ಆಟದ ನಾಯಕರಾಗಲಿ. ಇದರಿಂದ ಮಕ್ಕಳಿಗೆ ತಾವೆಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ. ನೀವು ಅವರಿಗೆ ಸಮಯ ಕೊಡುವುದರಿಂದ ತಮ್ಮ ಬಗ್ಗೆ ಆತ್ಮವಿಶ್ವಾಸ ಹುಟ್ಟುತ್ತದೆ. 

ಮಕ್ಕಳೆದುರು ನಿಮ್ಮ ಆತ್ಮವಿಶ್ವಾಸ ಪ್ರದರ್ಶಿಸಿ
ಮಕ್ಕಳು ಪೋಷಕರನ್ನು ಅನುಕರಿಸುತ್ತಾರೆ ಎಂಬುದು ನೆನಪಿರಲಿ. ನಿಮಗೆ ಆತ್ಮವಿಶ್ವಾಸ ಇಲ್ಲದಾಗ ಅವರಲ್ಲಿ ಅದನ್ನು ಬೆಳೆಸಿಕೊಳ್ಳಿ ಎಂದು ಬೋದಿಸುವುದರಿಂದ ಪ್ರಯೋಜನವಿಲ್ಲ.

ಬದಲಿಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಪ್ರಯತ್ನ ಹಾಕಿ ಮತ್ತು ಮಕ್ಕಳ ಎದುರಲ್ಲಿ ಎಲ್ಲ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ವರ್ತಿಸಿ. ಇದರಿಂದ ಮಕ್ಕಳಿಗೆ ತಾವು ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂಬುದು ಅರ್ಥವಾಗುತ್ತದೆ. 

Latest Videos

click me!