ನಿಮ್ಮನ್ನು ಜನ ಇಷ್ಟಪಡಬೇಕೆಂದು ಬಯಸಿದ್ರೆ… ಇವತ್ತಿಂದ್ಲೇ ಇದನ್ನ ಫಾಲೋ ಮಾಡಿ

First Published | Mar 12, 2024, 4:20 PM IST

ಜೀವನದಲ್ಲಿ ತಮ್ಮ ಪ್ರೀತಿಯನ್ನು ಪಡೆಯಲು ಬಯಸುವ ಮತ್ತು ಪ್ರೀತಿಯನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಲು ಬಯಸುವ ಜನರು, ನಂತರ ಅವರು ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಅವುಗಳ ಬಗ್ಗೆ ತಿಳಿಯೋಣ. 
 

ದ್ವೇಷ ಅಥವಾ ಪ್ರೀತಿಯಾಗಿರಲಿ, ನಿಮಗೆ ಬೇಕಾದುದನ್ನು ನೀವು ಪಡೆಯುತ್ತೀರಿ ಅಲ್ವಾ? ಪ್ರತಿಯೊಬ್ಬರಿಗೂ ಜೀವನದಲ್ಲಿ ಪ್ರೀತಿ ಬೇಕು ಎಂಬುದರಲ್ಲಿ ಸಂದೇಹವಿಲ್ಲ. ಒಂದು ವೇಳೆ ನೀವು ಜನರು ನಿಮ್ಮತ್ತ ಆಕರ್ಷಿತರಾಗಬೇಕೆಂದು ಬಯಸಿದ್ರೆ, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಸಕಾರಾತ್ಮಕ ಮನಸ್ಥಿತಿಯೊಂದಿಗೆ (Posiitve Mindset) ಮುಂದುವರಿಯುವ ಮತ್ತು ತಮ್ಮ ಅನುಭವಗಳಿಂದ ಕಲಿಯಲು ಪ್ರಾರಂಭಿಸುವ ಜನರಿಗೆ ಪ್ರೀತಿಯಾಗಿರಲಿ ಅಥವಾ ಯಶಸ್ಸಾಗಿರಲಿ ಸಿಗೋದು ಕಷ್ಟವಲ್ಲ. ಜೀವನದಲ್ಲಿ ಪ್ರೀತಿಯನ್ನು (love life) ಪಡೆಯಲು ಬಯಸುವ ಮತ್ತು ಅವುಗಳನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಲು ಬಯಸುವ ಜನರು ಕೆಲವೊಂದು ವಿಷಯಗಳ ಬಗ್ಗೆ ಗಮನ ಹರಿಸಬೇಕು. 
 

ಜೀವನದಲ್ಲಿ ನೀವು ಬಯಸಿದ ಪ್ರೀತಿ ಪಡೆಯಲು ಬಯಸಿದ್ರೆ ಈ ವಿಷಯಗಳತ್ತ ಗಮನ ಇರಲಿ… 
ನಿಮ್ಮನ್ನು ಪ್ರೀತಿಸಿ (self love)

ತಮ್ಮನ್ನು ತಾವು ಪ್ರೀತಿಸದ ಜನರು ಜೀವನದ ಉದ್ದೇಶವನ್ನು ಕಂಡುಕೊಳ್ಳುವಲ್ಲಿ ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಹಾಗಾಗಿ ಇತರರಲ್ಲಿ ಪ್ರೀತಿಯನ್ನು ಹುಡುಕುವ ಮೊದಲು, ನಿಮ್ಮೊಳಗೆ ಪ್ರೀತಿಯನ್ನು ಹುಡುಕಿ ಮತ್ತು ಅದನ್ನು ಸ್ವೀಕರಿಸಿ. ನೀವು ನಿಮ್ಮನ್ನು ಪ್ರೀತಿಸಲು ಪ್ರಾರಂಭಿಸಿದಾಗ, ನಿಮ್ಮ ತಪ್ಪುಗಳು ಮತ್ತು ಒಳ್ಳೆಯ ವಿಷಯಗಳ ಬಗ್ಗೆ ನಿಮಗೆ ತಿಳಿಯುತ್ತೆ. ಇದರಿಂದ ಸ್ವ ಬೆಳವಣಿಗೆ ಸುಲಭವಾಗುತ್ತೆ, ಜೊತೆಗೆ ಇತರರೊಂದಿಗೆ ಆರೋಗ್ಯಕರ ಸಂಬಂಧ ಹೊಂದಲು ಸಹಾಯವಾಗುತ್ತದೆ. 
 

Tap to resize

ಮುಕ್ತವಾಗಿ ಮಾತನಾಡಿ ಮತ್ತು ಆಲಿಸಿ (talk and listen)
ತಜ್ಞರ ಪ್ರಕಾರ, ಸಂವಹನ ಆರೋಗ್ಯಕರ ಸಂಬಂಧದ ಬುನಾದಿ. ಇತರರಿಂದ ಪ್ರೀತಿಯನ್ನು ಹುಡುಕುವ ಮೊದಲು, ಸತ್ಯದಿಂದ ಮುಂದೆ ಸಾಗಲು ಮತ್ತು ಯಾವುದೇ ಸಂಬಂಧದಲ್ಲಿ ಮುಂದುವರಿಯಲು ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಿ. ಸಂಬಂಧವನ್ನು ಆರೋಗ್ಯಕರವಾಗಿಸಲು, ನಿಮ್ಮ ಮಾತುಗಳೊಂದಿಗೆ ನಿಮ್ಮ ಸಂಗಾತಿಯ ಮಾತನ್ನು ಆಲಿಸಿ. ಆರೋಗ್ಯಕರ ಸಂವಹನವು ಸಂಬಂಧದಲ್ಲಿ ಬಲವನ್ನು ಹೆಚ್ಚಿಸುತ್ತದೆ.

ಥ್ಯಾಂಕ್ಸ್ ಹೇಳಿ (Thank them)
ನಾವು ದಿನವಿಡೀ ಒಂದಲ್ಲ ಒಂದು ಬಾರಿ ಇತರರಿಂದ ಸಹಾಯ ಪಡೆಯುತ್ತೇವೆ. ನೀವು ಇಷ್ಟಪಡುವ ವ್ಯಕ್ತಿ ನಿಮಗಾಗಿ ಏನೇ ಸಣ್ಣ ಕೆಲಸ ಮಾಡಿದರೂ ಅದನ್ನು ಗುರುತಿಸಿ, ಅವರಿಗೆ ಥ್ಯಾಂಕ್ಸ್ ಹೇಳಿ. ಇದು ಜನರ ಪ್ರೀತಿ ಮತ್ತು ವಿಶ್ವಾಸ ಪಡೆಯಲು ಸಹಾಯ ಮಾಡುತ್ತೆ.

ಮೌಲ್ಯಗಳನ್ನು ಅರ್ಥಮಾಡಿಕೊಳ್ಳಿ (know your values)
ಪ್ರೀತಿಯಲ್ಲಿ ಮುಂದುವರಿಯುವ ಮೊದಲು, ನಿಮ್ಮ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಸಂಬಂಧದಲ್ಲಿ ನಿಮಗೆ ಯಾವುದು ಮುಖ್ಯ ಎಂದು ತಿಳಿಯಲು ಪ್ರಯತ್ನಿಸಿ. ಅದರ ಸಹಾಯದಿಂದ, ನಿಮ್ಮ ಮನಸ್ಥಿತಿಗೆ ಸರಿಹೊಂದುವ ವ್ಯಕ್ತಿಯನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇದು ಪ್ರೀತಿಯ ಅಡಿಪಾಯವನ್ನು ಬಲಪಡಿಸುತ್ತದೆ, ಅಲ್ಲದೇ ಇದು ಸಂಬಂಧದಲ್ಲಿ ತಪ್ಪು ತಿಳುವಳಿಕೆಗಳನ್ನು ತಪ್ಪಿಸುತ್ತದೆ.

ಸತ್ಯದ ದಾರಿಯಲ್ಲಿ ನಡೆಯಿರಿ
ನೀವು ಲವ್ ಲೈಫ್ ಸ್ಟ್ರಾಂಗ್ ಆಗಿರಬೇಕೆಂದು ನೀವು ಬಯಸಿದ್ರೆ ವಾಸ್ತವವನ್ನು ಜೀವನದ ಉದ್ದೇಶವನ್ನಾಗಿ ಮಾಡಿ. ಅಂದರೆ ಯಾವುದೇ ವ್ಯಕ್ತಿಯೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಲು, ಯಾವಾಗಲೂ ಸತ್ಯದ ದಾರಿಯಲ್ಲೇ ನಡೆಯಿರಿ. ಇದು ಸಂಬಂಧಗಳಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತೆ. 

ಭಾವನಾತ್ಮಕವಾಗಿ ಕನೆಕ್ಟ್ ಆಗಿರಿ
ಯಾವುದೇ ಸಂಬಂಧವನ್ನು ಬಲವಾಗಿಡಲು, ಅದರಲ್ಲಿ ಭಾವನಾತ್ಮಕ ಹೊಂದಾಣಿಕೆಯನ್ನು ಹೊಂದಿರುವುದು ಮುಖ್ಯ.  ಪರಸ್ಪರರ ಭಾವನೆಗಳನ್ನು ಗೌರವಿಸುವ (respect the emotion) ಜನರ ಸಂಬಂಧವು ದೀರ್ಘಕಾಲ ಉಳಿಯುತ್ತದೆ ಎಂದು ತಜ್ಞರು ಹೇಳುತ್ತಾರೆ. 

ಪಾಸಿಟಿವ್ ಆಗಿರಿ (be positive)
ಪ್ರತಿ ಕ್ಷಣವೂ ನೀವು ಪಾಸಿಟಿವ್ ಆಗಿ ಯೋಚನೆ ಮಾಡೋದರಿಂದ ಜೀವನದಲ್ಲಿ ನೀವು ಅಂದುಕೊಂಡದ್ದು ಈಡೇರಲು ಆರಂಭವಾಗುತ್ತದೆ. ಸಕಾರಾತ್ಮಕ ಮನಸ್ಥಿತಿ ನಿಮ್ಮದಾಗಿದ್ದರೆ, ಇತರರು ನಿಮ್ಮೆಡೆಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ. ಅಷ್ಟೇ ಅಲ್ಲ, ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಹ ಸುಲಭವಾಗಿ ಎದುರಿಸಬಹುದು. 
 

Latest Videos

click me!