ಗ್ಯಾಂಗ್‌ಸ್ಟರ್‌ ಕಾಲಾ ಜತೇದಿ ಜೊತೆ ರಿವಾಲ್ವರ್ ರಾಣಿ ಅದ್ಧೂರಿ ಮದುವೆ, ಪೊಲೀಸರಿಂದ ಬಿಗಿ ಭದ್ರತೆ!

First Published | Mar 13, 2024, 11:17 AM IST

ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜತೇದಿ ಹಾಗೂ ರಿವಾಲ್ವರ್ ರಾಣಿ ಎಂದೇ ಹೆಸರಾದ ಅನುರಾಧಾ ಚೌಧರಿ ಅಲಿಯಾಸ್ ಮೇಡಂ ಮಿಂಜ್ ವಿವಾಹ ದೆಹಲಿಯಲ್ಲಿ ನಡೆಯಿತು. ವಿಪರ್ಯಾಸ ಅಂದ್ರೆ ಸ್ವತಃ ಪೊಲೀಸರು ಈ ಮದುವೆಗೆ ಬಿಗಿ ಭದ್ರತೆ ಒದಗಿಸಿದ್ದರು.

ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜತೇದಿ ಹಾಗೂ ರಿವಾಲ್ವರ್ ರಾಣಿ ಎಂದೇ ಹೆಸರಾದ ಅನುರಾಧಾ ಚೌಧರಿ ಅಲಿಯಾಸ್ ಮೇಡಂ ಮಿಂಜ್ ವಿವಾಹ ದೆಹಲಿಯಲ್ಲಿ ನಡೆಯಿತು. ಇಲ್ಲಿನ ದ್ವಾರಕಾ ಪ್ರದೇಶದಲ್ಲಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವಿವಾಹಕ್ಕೆ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು

ಗ್ಯಾಂಗ್‌ಸ್ಟರ್‌ ಮದುವೆಗೆ ದೆಹಲಿ ನ್ಯಾಯಾಲಯದಿಂದ ಆರು ಗಂಟೆಗಳ ಪೆರೋಲ್ ಪಡೆದರು. 'ಮೇಡಂ ಮಿಂಜ್' ಎಂದೂ ಕರೆಯಲ್ಪಡುವ ಅನುರಾಧಾ ಚೌಧರಿ,  ಎಸ್‌ಯುವಿಯಲ್ಲಿ ಹರಿಯಾಣದ ಸೋನಿಪತ್‌ನಿಂದ ಮದುವೆ ಸ್ಥಳಕ್ಕೆ ಆಗಮಿಸಿದಳು.

Tap to resize

ದ್ವಾರಕಾ ಸೆಕ್ಟರ್ -3ರ ಸಂತೋಷ್ ಗಾರ್ಡನ್ ಸುತ್ತಮುತ್ತಲಿನ ಮದುವೆ ಸ್ಥಳದಲ್ಲಿ 250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸ್ಥಳದ ಸುತ್ತಲಿನ ಪ್ರದೇಶದ ಕಣ್ಗಾವಲಿಗೆ ಡ್ರೋನ್‌ಗಳನ್ನು ಸಹ ಬಳಸಲಾಯಿತು.

ಅತಿಥಿಗಳು ಮದುವೆ ಸ್ಥಳವನ್ನು ಪ್ರವೇಶಿಸುವ ಮೊದಲು ನಾಲ್ಕು ಹಂತದ ಭದ್ರತಾ ತಪಾಸಣೆಗೆ ಒಳಗಾಗಬೇಕಾಗಿತ್ತು. ಸಂಬಂಧಿಕರು ಸಹ ತಮ್ಮ ಗುರುತಿನ ಪುರಾವೆಗಳನ್ನು ತೋರಿಸಬೇಕಾಗಿತ್ತು. ಅದರ ನಂತರ ಪೊಲೀಸರು ಅತಿಥಿಗಳ ಪಟ್ಟಿಯಲ್ಲಿ ಪರಿಶೀಲಿಸಿದ ಬಳಿಕವಷ್ಟೇ ಮದುವೆ ಹಾಲ್‌ಗೆ ಎಂಟ್ರಿ ಕೊಡಲು ಅನುಮತಿ ನೀಡಲಾಗುತ್ತಿತ್ತು.

ಕಾರ್ಯಕ್ರಮದ ವೇಳೆ ಮೊಬೈಲ್ ಫೋನ್‌ಗಳ ಬಳಕೆಗೂ ಅನುಮತಿಯಿರಲ್ಲಿಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ವ್ಯವಸ್ಥಿತ ಭದ್ರತಾ ಯೋಜನೆ ರೂಪಿಸಿದ್ದರು.

150- 200 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಭದ್ರತೆಗೆ ಪೊಲೀಸ್ ಸಿಬ್ಬಂದಿ ವಿಶೇಷ ಸೆಲ್, ಅಪರಾಧ ವಿಭಾಗ ಮತ್ತು ಹರಿಯಾಣದ CIA (ಅಪರಾಧ ತನಿಖಾ ಸಂಸ್ಥೆ) ತಂಡಗಳನ್ನು ಒಳಗೊಂಡಿತ್ತು.

ಕಾಲಾ ಜತೇದಿ ಅಂತಾರಾಷ್ಟ್ರೀಯ ಜಾಲವನ್ನು ನಡೆಸುತ್ತಿದ್ದು, ಬಾಡಿಗೆ ಕೊಲೆ, ಸಂಘಟಿತ ಕಳ್ಳಬಟ್ಟಿ ವ್ಯವಹಾರ, ಸುಲಿಗೆ ಮತ್ತು ಭೂ ಕಬಳಿಕೆಯ ಕೃತ್ಯಗಳಲ್ಲಿ ಭಾಗಿಯಾಗಿದ್ದ. 2020ರಲ್ಲಿ ಹರ್ಯಾಣ ಪೊಲೀಸ್ ಸಿಬ್ಬಂದಿ ಮೇಲೆ ಭೀಕರ ದಾಳಿ ನಡೆಸಿ ಅವರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. ನಂತರ 2021ರ ಜುಲೈನಲ್ಲಿ ಈತ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಸಿಕ್ಕಿಬಿದ್ದಿದ್ದ.

ಕೊಲೆ ಪ್ರಕರಣಗಳು ಸೇರಿದಂತೆ ಒಟ್ಟು 76 ಪ್ರಕರಣಗಳು ಕಲಾ ಜತೇಡಿ ವಿರುದ್ಧ ದಾಖಲಾಗಿವೆ. ಒಂದು ಕಾಲದಲ್ಲಿ ವಾಂಟೆಡ್ ಕ್ರಿಮಿನಲ್ ಆಗಿದ್ದ ಸಂದೀಪ್ ತಲೆಗೆ 7 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.

ಅನುರಾಧಾ ಚೌಧರಿ, ವಿರುದ್ಧ ಅನೇಕ ಅಪರಾಧ ಪ್ರಕರಣಗಳಿವೆ. ಎರಡು ವರ್ಷಗಳ ಹಿಂದೆ ಇವರಿಬ್ಬರನ್ನೂ ಬಂಧಿಸಲು 12 ರಾಜ್ಯಗಳಲ್ಲಿ ಪೊಲೀಸರ ತಂಡಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದವು.

Latest Videos

click me!