ಹೊಸದಾಗಿ ಮದುವೆಯಾದವರಲ್ಲಿ ಕಾಡುವ ಆತಂಕ! ನಿಮಗೂ ಹೀಗಾಗ್ತಿದೆಯೇ?

First Published | Nov 28, 2023, 3:07 PM IST

ನಿಮ್ಮ ವಯಸ್ಸು ಮತ್ತು ಅನುಭವ ಏನೇ ಇರಲಿ,  ನೀವು ಹೊಸದಾಗಿ ಏನಾದರು ಆರಂಭ ಮಾಡಲು ಹೊರಟಾಗ ಯಾವಾಗಲೂ ಆತಂಕ ಉಂಟಾಗುತ್ತೆ. ನೀವು ಇತ್ತೀಚೆಗೆ ಹೊಸ ಸಂಬಂಧದಲ್ಲಿ ಬಂಧಿಯಾಗಿದ್ದರೆ, ಈ ಲೇಖನ ನಿಮಗಾಗಿ. 

ಪರ್ಫಾರ್ಮೆನ್ಸ್ ಆಕ್ಸೈಟಿ (Performance anxiety ) ಅನ್ನೋದು ಇದೆ ಅಲ್ವಾ? ಇದು ಜೀವನದ ವಿವಿಧ ಅಂಶಗಳಲ್ಲಿ ಗಮನಾರ್ಹ ಅಡಚಣೆಯನ್ನುಂಟು ಮಾಡಬಹುದು, ವಿಶೇಷವಾಗಿ ನೀವು ಹೊಸ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದರೆ ಇದರಿಂದ ಸಮಸ್ಯೆ ಹೆಚ್ಚೆ. ಹಾಸಿಗೆಯಲ್ಲಿರಲಿ ಅಥವಾ ವೃತ್ತಿಪರ ಜೀವನದಲ್ಲಿರಲಿ, ನಿರೀಕ್ಷೆಗಳಿಗೆ ತಕ್ಕಂತೆ ಬದುಕುವುದಿಲ್ಲ ಎಂಬ ಭಯವು ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ ಮತ್ತು ಸಂಬಂಧಗಳಲ್ಲಿ ಒತ್ತಡವನ್ನು ಸೃಷ್ಟಿಸುತ್ತದೆ.

ಕಾರ್ಯಕ್ಷಮತೆಯ ಆತಂಕವನ್ನು (Performance anxiety ) ತೆಗೆದುಹಾಕುವುದು ಕೇವಲ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮಾತ್ರವಲ್ಲ, ಇದು ನಿಮ್ಮೊಂದಿಗೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಸಕಾರಾತ್ಮಕ ಮತ್ತು ತೃಪ್ತಿದಾಯಕ ಸಂಬಂಧವನ್ನೂ ಸಹ ನಿರ್ಮಿಸುತ್ತೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಏನಿದು ಪರ್ಫಾರ್ಮೆನ್ಸ್ ಆಕ್ಸೈಟಿ ಅಥವಾ ಕಾರ್ಯಕ್ಷಮತೆಯ ಆತಂಕ ಇದರ ಬಗ್ಗೆ ತಿಳಿಯೋಣ. 

Tap to resize

ಕಾರ್ಯಕ್ಷಮತೆಯ ಆತಂಕದ ಲಕ್ಷಣಗಳು ಯಾವುವು?: ಕಾರ್ಯಕ್ಷಮತೆಯ ಆತಂಕವು ಜನರ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರಬಹುದು. ಇದು ಅಂಗೈ ನಡುವುದು ಅಥವಾ ಬೆವರುವಿಕೆಯನ್ನು ಸಹ ಒಳಗೊಂಡಿದೆ. ಕೆಲವೊಮ್ಮೆ ಈ ರೋಗಲಕ್ಷಣಗಳು ಬಹಳ ಗಂಭೀರವಾದ ಪ್ಯಾನಿಕ್ ಅಟ್ಯಾಕ್ (panic attack) ರೂಪದಲ್ಲಿಯೂ ಕಾಣಿಸಿಕೊಳ್ಳಬಹುದು. ನೀವು ಇತ್ತೀಚೆಗೆ ವೈವಾಹಿಕ ಅಥವಾ ಲಿವ್-ಇನ್ ಸಂಬಂಧದಲ್ಲಿದ್ದರೆ (live in relationship), ಅದು ಸೆಕ್ಸ್ ನಲ್ಲಿ ನಾನು ಚೆನ್ನಾಗಿ ಪರ್ಫಾರ್ಮೆನ್ಸ್ ನೀಡಬಹುದೇ ಎನ್ನುವ ಆತಂಕವೂ ಕಾಡುತ್ತೆ. 

ತಜ್ಞರು ಹೇಳುವ ಪ್ರಕಾರ ಲೈಂಗಿಕ ಕಾರ್ಯಕ್ಷಮತೆಯ (sexual performance anxiety) ಆತಂಕ ಎಂದು ಕರೆಯಲ್ಪಡುವ ಆತಂಕವು ಮಾನಸಿಕ ಸ್ಥಿತಿಯಾಗಿದೆ. ಇದರಲ್ಲಿ ನಾನು ಚೆನ್ನಾಗಿ ಲೈಂಗಿಕ ಕ್ರಿಯೆ ನಡೆಸದೇ ಇದ್ದರೆ, ನನ್ನಿಂದ ಸಂಗಾತಿಗೆ ಸಂತೋಷ ಸಿಗದಿದ್ದರೇ ಎನ್ನುವ ಭಯ ಇರುತ್ತೆ. ಇದು ಅಸಾಮಾನ್ಯವಲ್ಲ. ಇದು ಇಬ್ಬರ ಮೇಲೆಯೂ ಪರಿಣಾಮ ಬೀರುತ್ತೆ. ಹಾಗಾಗಿ ಅಂತಹ ಆತಂಕದಿಂದ ಹೊರ ಬರೋದು ಮುಖ್ಯ. 
 

ಪ್ರಣಯ ಸಂಬಂಧದಲ್ಲಿ ಕಾರ್ಯಕ್ಷಮತೆಯ ಆತಂಕವನ್ನು ನಿವಾರಿಸುವುದು ಹೇಗೆ?
ಸಂಭಾಷಣೆಯೊಂದಿಗೆ ಪ್ರಾರಂಭಿಸಿ (Start With Communication): 
ಯಾವುದೇ ಸಂಬಂಧದಲ್ಲಿ, ಪರಸ್ಪರ ಅರ್ಥಮಾಡಿಕೊಳ್ಳುವುದು ಮತ್ತು ಮಾತನಾಡುವುದು ಸಮಸ್ಯೆಗಳನ್ನು ದೂರ ಮಾಡುತ್ತೆ. ಆದರೆ ಲೈಂಗಿಕ ಸಂಬಂಧದಲ್ಲಿನ ಭಾವನೆಗಳು ಮತ್ತು ಕಾಳಜಿಗಳ ಬಗ್ಗೆ ಮುಕ್ತವಾಗಿ ಮಾತನಾಡಲು, ನೀವು ಪರಸ್ಪರ ಉತ್ತಮ ಬಾಂಧವ್ಯ, ಭಾವನಾತ್ಮಕ ಸಂಬಂಧ, ನಂಬಿಕೆ ಇರಿಸೋದು ತುಂಬಾನೆ ಮುಖ್ಯ. ಪರಸ್ಪರ ತಿಳುವಳಿಕೆ ಮತ್ತು ಪರಸ್ಪರ ಬೆಂಬಲ ಮುಖ್ಯ. ನಿಮಗೆ ಏನು ಬೇಕು, ಬೇಡ ಅನ್ನೋದರ ಬಗ್ಗೆ ಮಾತನಾಡಿ ತಿಳಿದುಕೊಳ್ಳೊದರಿಂದ ಸೆಕ್ಸ್ ಕುರಿತಾದ ಆತಂಕ ದೂರವಾಗುತ್ತೆ. 

ನಿಮ್ಮ ನಿರೀಕ್ಷೆಗಳನ್ನು ತಿಳಿಸಿ (Share Your Expectation): ಇಬ್ಬರಿಗೂ ಸೆಕ್ಸ್ ಲೈಫಲ್ಲಿ ತಮ್ಮದೇ ಆದ ನಿರೀಕ್ಷೆಗಳಿರುತ್ತವೆ, ಅದರ ಬಗ್ಗೆ ಸಂಗಾತಿ ಬಳಿ ಕುಳಿತು ಚರ್ಚಿಸೋದು ಮುಖ್ಯ, ಒಬ್ಬರು ಇನ್ನೊಬ್ಬರ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡರೆ, ಇದರಿಂದ ಇಬ್ಬರೂ ಭಾವನಾತ್ಮಕವಾಗಿ ಕನೆಕ್ಟ್ ಆಗಲು ಸಾಧ್ಯವಾಗುತ್ತೆ, ಅಲ್ಲದೇ ಇಂಟಿಮೆಸಿ ಚೆನ್ನಾಗಿರುತ್ತೆ. 

ಹೊಸದನ್ನು ಪ್ರಯೋಗ ಮಾಡಿ (Try New): ಪ್ರತಿ ಸಂಬಂಧದಲ್ಲಿ ರೋಮಾಂಚನವನ್ನು ಕಾಪಾಡಿಕೊಳ್ಳಲು ಹೊಸದನ್ನು ಮಾಡುವುದು ಅಥವಾ ಪ್ರಯೋಗ ಮಾಡುವುದು ಬಹಳ ಮುಖ್ಯ. ಯಾವಾಗಲೂ ಒಂದೇ ಕೆಲಸ ಮಾಡಿದ್ರೆ, ಅದರಿಂದ ಬೇಗನೆ ಬೋರ್ ಹೊಡೆಯುತ್ತೀರಿ, ಅದರ ಬದಲಾಗಿ ಹೊಸದನ್ನು ಟ್ರೈ ಮಾಡಿ. ನಿಮ್ಮ ಸೆಕ್ಸ್ ಲೈಫನ್ನು ಮತ್ತಷ್ಟು ಸ್ಪೈಸ್ ಅಪ್ ಮಾಡುವಂತಹ ಚಟುವಟಿಕೆಗಳನ್ನು ಮಾಡಿ, ಇದರಿಂದ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ. 

ವಿಶ್ರಾಂತಿ ಪಡೆಯಲು ಕೆಲವು ಅಭ್ಯಾಸಗಳನ್ನು ರೂಢಿಮಾಡಿ: ನಿಮ್ಮ ದೈನಂದಿನ ದಿನಚರಿಯಲ್ಲಿ ಸ್ವಯಂ-ವಿಶ್ರಾಂತಿ ತಂತ್ರಗಳನ್ನು ಅಳವಡಿಸಿಕೊಳ್ಳಿ. ಆಳವಾದ ಉಸಿರಾಟ,  ಪ್ರಾಣಾಯಾಮ ಮತ್ತು ಧ್ಯಾನವು ಒತ್ತಡ ಮತ್ತು ಆತಂಕವನ್ನು (stress and anxiety )  ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ನೀವೇ ವಿಶ್ರಾಂತಿ ನೀಡಿದರೆ, ಸೆಕ್ಸ್ ಮಾಡುವಾಗಲೂ ನಿಮಗೆ ಆರಾಮ ಸಿಗುತ್ತೆ. 

Latest Videos

click me!