ನಿಮ್ಮ ಎಕ್ಸ್‌ನ್ನು ಮರೆಯೋದು ಹೇಗೆ? ಬ್ರೇಕಪ್ ಬಳಿಕ ಹಳಿ ತಪ್ಪಿದ ಜೀವನದ ಬಂಡಿ ಹಾದಿಗೆ ತರಲು ಇಲ್ಲಿವೆ ಟಿಪ್ಸ್

First Published | May 18, 2024, 1:01 PM IST

ಹಿಂದಿನ ಸಂಬಂಧದಿಂದ ಹೊರಬರುವುದು ಸುಲಭವಲ್ಲ. ಅದಕ್ಕಾಗಿ ವರ್ಷಗಳ ಕಾಲ ಭಾವನಾತ್ಮಕ ಹೂಡಿಕೆ ಮಾಡಿರುತ್ತೀರಿ. ಆದರೆ, ಮನಸ್ಸಿದ್ದರೆ ಮಾರ್ಗವೂ ಇರುತ್ತದೆ. ನಿಮ್ಮ ಎಕ್ಸ್‌ನ್ನು ಮರೆತು ಮುಂದಿನ ಬದುಕನ್ನು ನಗುನಗುತ್ತಾ ಸಾಗಿಸೋಕೆ ಇಲ್ಲಿವೆ ಟಿಪ್ಸ್ 

ಬ್ರೇಕಪ್ ಸವಾಲಿನ ಸಮಯ. ಅದುವರೆಗೂ ಅತಿಯಾಗಿ ಪ್ರೀತಿಸಿದ ಜೀವ ಇನ್ನು ಏನೂ ಅಲ್ಲ ಎಂಬಂತೆ ಇರುವುದು ಸುಲಭವಲ್ಲ. ಅಷ್ಟೊಂದು ಭಾವನಾತ್ಮಕವಾಗಿ ತೊಡಗಿಸಿಕೊಂಡ ಬಳಿಕ ಬ್ರೇಕಪ್ ಎಂದರೆ ಹೃದಯ ಚೂರು ಚೂರಾಗಿರುತ್ತದೆ. 
 

ಆದರೆ, ಎಕ್ಸ್‌ನ್ನು ಮರೆಯಲಾಗದೆ ಒದ್ದಾಡುತ್ತಾ ಎಷ್ಟು ಕಾಲ ಇರಲಾದೀತು? ಜೀವನ ಮುಂದುವರಿಯಲೇಬೇಕು. ಅದನ್ನು ನಗುನಗುತ್ತಾ ಕಳೆಯಬೇಕು ಎಂದರೆ ಮೊದಲು ಎಕ್ಸನ್ನು ಮರೆಯಬೇಕು. 

Tap to resize

ತುಂಬಾ ಪ್ರೀತಿಸಿದವರನ್ನು ಮರೆಯುವುದು ಸುಲಭವಲ್ಲ. ಆದರೆ, ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. ಏಕೆಂದರೆ, ಇರುವುದೊಂದೇ ಬದುಕು. ಅದನ್ನು ಚಂದಗಾಣಿಸಿಕೊಳ್ಳಬೇಕಾದವರು ನಾವೇ. ಎಕ್ಸ್‌ನ್ನು ಮರೆಯಲು ಟಿಪ್ಸ್ ಇಲ್ಲಿವೆ. 

ಮೊದಲು ಬ್ರೇಕಪ್ ಒಪ್ಪಿಕೊಳ್ಳಿ

ಯಾವುದೇ ಸಮಸ್ಯೆಯಿಂದ ಹೊರ ಬರಬೇಕೆಂದರೆ ಮೊದಲು ಮಾಡಬೇಕಿರುವುದು ವಾಸ್ತವವನ್ನು ಒಪ್ಪಿಕೊಳ್ಳುವುದು. ಬ್ರೇಕಪ್ ಆಗಿದೆ ಎಂದು ಮನಸ್ಸಿಗೆ ಒಪ್ಪಿಸಿ. ಮತ್ತೆ ಒಟ್ಟಿಗೆ ಸೇರಲು ಮಾರ್ಗಗಳು, ಚಿಹ್ನೆಗಳು ಅಥವಾ ಯಾವುದೇ ರೀತಿಯ ಭರವಸೆಗಾಗಿ ನೋಡುವುದನ್ನು ನಿಲ್ಲಿಸಿ.

ದುಃಖಿಸಿ ಮತ್ತು ನಿಮ್ಮ ಭಾವನೆಗಳನ್ನು ಹೊರಹಾಕಿ

ಬ್ರೇಕಪ್ ಬಳಿಕ ನೀವು ತಿಳಿಯದೆ ದುಃಖದ ಅವಧಿಗೆ ಪ್ರವೇಶಿಸುತ್ತೀರಿ. ನೀವು ನಿರಾಶೆ ಅನುಭವಿಸುವಿರಿ. ಇದು ಪರವಾಗಿಲ್ಲ. ಮೊದಲು ದುಃಖವನ್ನು ಹೊರ ಹಾಕಲು ಅಳಿ, ಮತ್ತೊಬ್ಬರ ಬಳಿ ಹೇಳಿಕೊಳ್ಳಿ, ಕೂಗಿ, ಕಿರುಚಿ- ಒಟ್ಟಿನಲ್ಲಿ ಭಾವನೆಗಳನ್ನು ಹೊರಹಾಕಿ. ಇದು ನಿಮ್ಮ ಚೇತರಿಕೆಯ ಪ್ರಕ್ರಿಯೆಯ ಒಂದು ಭಾಗವಾಗಿದೆ ಮತ್ತು ಎಕ್ಸ್ ಮರೆಯಲು ಬೇಕಾದ ಮೊದಲ ಹಂತವಾಗಿದೆ.

ನಿಮಗೆ ಅನಿಸಿದ್ದನ್ನು ಬರೆಯಿರಿ
ನಿಮ್ಮ ಡೈರಿಯ ಪುಟಗಳು ಶಾಯಿ ಕುಡಿಯಲಿ. ನಿಮಗೆ ಅನಿಸಿದ್ದನ್ನು ಬರೆಯಿರಿ. ಕೆಲವೊಮ್ಮೆ ಬ್ರೇಕಪ್ ವಿಷಯದಲ್ಲಿ ಎಲ್ಲವನ್ನೂ ಯಾರ ಬಳಿಯೂ ಹೇಳಿಕೊಳ್ಳಲಾಗದಿರಬಹುದು. ಅಂಥ ಸಂದರ್ಭದಲ್ಲಿ ನಿಮ್ಮ ನೋವಿನ ಭಾವನೆಗಳನ್ನು ಕಾಗದದ ಮೇಲೆ ಬರೆಯುವುದು ಹೃದಯದ ಭಾರ ಕಡಿಮೆ ಮಾಡುತ್ತದೆ. 

ಪಠ್ಯ ಸಂದೇಶ ಅಥವಾ ಸಂದೇಶ ಕಳುಹಿಸುವುದನ್ನು ತಪ್ಪಿಸಿ
ಇದು ಸ್ವಲ್ಪ ಕಷ್ಟವೇ. ಆದರೂ ನೆಪ ತೆಗೆದು ನಿಮ್ಮ ಮಾಜಿಗೆ ಸಂದೇಶ ಕಳುಹಿಸಬೇಡಿ. ನೀವು ಅದನ್ನು ಸ್ನೇಹಪರ ರೀತಿಯಲ್ಲಿ ಮಾಡುವುದು ಸಹ ಸರಿಯಲ್ಲ. ನೀವು ಮಾಡಬೇಕಾದ ಉತ್ತಮ ಕೆಲಸವೆಂದರೆ, ಸಂಪರ್ಕ ಸಂಖ್ಯೆಯನ್ನು ಅಳಿಸಿ. ಸೋಷ್ಯಲ್ ಮೀಡಿಯಾಗಳಲ್ಲಿ ಅವರನ್ನು ಸ್ಟ್ಯಾಕ್ ಮಾಡುವುದು ಬಿಟ್ಟು ಬ್ಲಾಕ್ ಮಾಡಿ 

ಸಂಪರ್ಕವಿಲ್ಲದ ನಿಯಮವನ್ನು ರಚಿಸಿ
ನಿಮ್ಮ ಮಾಜಿ ಇರುತ್ತಾರೆ ಎಂದು ನಿಮಗೆ ತಿಳಿದಿರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ. ಅವರನ್ನು ಎಲ್ಲಿಯೂ ಭೇಟಿಯಾಗಬೇಡಿ. ಈ ವಿಷಯದಲ್ಲಿ ಕಠಿಣವಾಗಿರುವುದು ಕಷ್ಟವಾದರೂ ಇದು ಧೀರ್ಘಾವಧಿಯಲ್ಲಿ ನಿಮಗೇ ಒಳಿತು.

ಸೌಹಾರ್ದ ವ್ಯವಹಾರ ಬೇಡ
ಕೆಲವು ತಿಂಗಳುಗಳ ನಂತರ ಬ್ರೇಕ್‌ಅಪ್‌ಗಳು ಸ್ವೀಕಾರಾರ್ಹವಾಗುತ್ತೆ. ಆದರೆ ನಿಮ್ಮ ಸ್ನೇಹವನ್ನು ಜೀವಂತವಾಗಿರಿಸಿಕೊಳ್ಳುವುದು ಅಪಾಯಕಾರಿ ವ್ಯವಹಾರವಾಗಿರುತ್ತದೆ. ಮತ್ತೆ ಸಂಪರ್ಕ ರಚಿಸುವ ಆಮಿಷಗಳುಂಟಾಗುತ್ತವೆ. ವಿಶೇಷವಾಗಿ ಒಂಟಿತನ ಕಾಡುವಾಗ. ಆದರೆ, ಯಾವುದೇ ಕಾರಣಕ್ಕೂ ಅವರೊಂದಿಗೆ ಸೌಹಾರ್ದ ಸಂಬಂಧಗಳು ಬೇಡ.

ಮಾಜಿ ಬಗ್ಗೆ ನೆನಪಿಸುವ ವಿಷಯಗಳನ್ನು ಡಂಪ್ ಮಾಡಿ
ನಿಮ್ಮ ಜನ್ಮದಿನಗಳು ಅಥವಾ ವಾರ್ಷಿಕೋತ್ಸವಗಳಲ್ಲಿ ನಿಮ್ಮ ಮಾಜಿ ಪ್ರೇಮಿ ನೀಡಿದ ಉಡುಗೊರೆಗಳಿಗೆ ಮೌಲ್ಯ ನೀಡುವುದು ಬಿಡಿ. ಅವರನ್ನು ನೆನಪಿಸುವ ಹಾಗೂ ಅವರು ಕೊಟ್ಟ ಎಲ್ಲ ವಸ್ತುಗಳನ್ನು ಬಿಸಾಡಿ ಇಲ್ಲವೇ ಸುಟ್ಟು ಹಾಕಿ. 
 

ಬ್ಯುಸಿಯಾಗಿ
ಸಾಧ್ಯವಾದಷ್ಟು ಬ್ಯುಸಿಯಾಗಿರಲು ಪ್ರಯತ್ನಿಸಿ. ಹೊಸ ಕೆಲಸಕ್ಕೆ ಸೇರಿ, ಮನೆಯಲ್ಲಿ ಹವ್ಯಾಸಗಳಿಗಾಗಿ ಸಮಯ ವ್ಯಯಿಸಿ.  ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ, ಪ್ರವಾಸ ಹೋಗಿ- ಒಟ್ಟಿನಲ್ಲಿ ಅವರ ಯೋಚನೆ ಬರಲೂ ಸಮಯವಿಲ್ಲದಷ್ಟು ಬ್ಯುಸಿಯಾಗಿ. ನಿಮ್ಮನ್ನು ನೀವು ಹೆಚ್ಚು ಉತ್ತಮಗೊಳಿಸಿಕೊಳ್ಳುವುದರ ಕಡೆ ಗಮನ ಹರಿಸಿ.

Latest Videos

click me!