ಬೋರಿಂಗ್ ದಾಂಪತ್ಯ ಜೀವನದಲ್ಲಿ ಹೀಗೆ ರೊಮ್ಯಾನ್ಸ್ ಮಸಾಲವಿರಲಿ!

First Published Mar 20, 2021, 3:33 PM IST

ಸಾಮಾನ್ಯವಾಗಿ ನಮ್ಮ ಜೀವನವು ಕೆಲಸ ಮತ್ತು ಮನೆ ಇದರ ಸುತ್ತವೇ ಸುತ್ತುತ್ತವೆ. ಜವಾಬ್ದಾರಿಗಳಲ್ಲಿ ಬದುಕನ್ನು ಸವೆಸುತ್ತಾ ನಿಜವಾದ ವಿನೋದವನ್ನು ಮರೆಯಲಾಗುತ್ತದೆ. ಎಲ್ಲರೂ ಜೊತೆಯಾಗಿಯೇ ಇರುತ್ತೇವೆ, ಆದರೆ ಜೊತೆಯಾಗಿ ಮಾತನಾಡಲು ಸಮಯವಿಲ್ಲ ಮತ್ತು ಸಮಯ ಬಂದಾಗ ಸಂಬಂಧಗಳ ಪ್ರಾಮುಖ್ಯತೆಯನ್ನು ನಾವು ಕಡೆಗಣಿಸುತ್ತೇವೆ. ಕಾರಣ ಏನೇ ಇರಲಿ, ಈ ಬ್ಯುಸಿ ಜೀವನದಿಂದಾಗಿ ಪ್ರೀತಿ, ರೊಮ್ಯಾನ್ಸ್ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ವೈವಾಹಿಕ ಜೀವನವೂ ಬೋರ್ ಎನಿಸಲು ಶುರುವಾಗುತ್ತದೆ. ಆದರೆ, ಶೋ ನಡೆಯಲೇ ಬೇಕು. ಅದಕ್ಕೆ ಶ್ರಮ ಹಾಕುವುದು ಅನಿವಾರ್ಯ.

ಜೀವನದಲ್ಲಿ ಹೆಚ್ಚಿನವರು ಈ ಒಂದು ಹಂತವನ್ನು ತಲುಪುತ್ತಾರೆ, ಪ್ರೀತಿಯೇ ಇಲ್ಲದೇ, ಜೀವನ ಸಾಗುತ್ತದೆ. ಜೀವನದಲ್ಲಿ ತುಂಬಾ ಏಕತಾನತೆಯನ್ನು ಅನುಭವಿಸುತ್ತಾರೆ. ನಿಮ್ಮ ಜೀವನದಲ್ಲೂ ಈ ರೀತಿ ಆಗುತ್ತಿದ್ದರೆ ಸಂಬಂಧವನ್ನು ತಾಜಾತನದಿಂದಿಡುವ ಮಾಂತ್ರಿಕ ಮಂತ್ರವನ್ನು ಅಳವಡಿಸಕೊಳ್ಳಬೇಕಿದೆ. ಜೀವನದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಮೂಲಕ, ಬೋರಿಂಗ್ ಲೈಫನ್ನು ಮತ್ತೆ ರೋಮ್ಯಾಂಟಿಕ್ ಆಗಿ ಮಾಡಬಹುದು. ಅದು ಹೇಗೆ ಅನ್ನೋದನ್ನು ತಿಳಿಯೋಣ...
undefined
ನೆನಪುಗಳನ್ನು ಜೀವಂತಗೊಳಿಸಿನೆನಪುಗಳು ಅಂದರೆ ಅದು ಜೀವನವನ್ನು ಸಂತೋಷವಾಗಿರಿಸುವ ಮತ್ತು ತಾಜಾವಾಗಿರಿಸುವ ಒಂದು ಅಸ್ತ್ರ. ನೆನಪುಗಳು ಎಂದಿಗೂ ಬೇಸರವನ್ನು ಉಂಟು ಮಾಡುವುದಿಲ್ಲ. ಬದಲಾಗಿ ಸಂತೋಷವನ್ನು ದುಪ್ಪಟ್ಟು ಮಾಡುತ್ತದೆ.
undefined
ಜೀವನ ಬೋರ್ ಎನಿಸುತ್ತಿದ್ದರೆ,ದಂಪತಿತಾವು ಈ ಹಿಂದೆ ಜೊತೆಯಾಗಿ ಕಳೆದ ಸಮಧುರಕ್ಷಣಗಳನ್ನು ನೆನಪಿಸಿಕೊಳ್ಳಬಹುದು. ನೆನಪುಗಳು ಸಂಬಂಧವನ್ನು ಮತ್ತಷ್ಟು ಹತ್ತಿರಕ್ಕೆ ತರುತ್ತವೆ. ಇದರಿಂದ ರೊಮ್ಯಾನ್ಸ್ ಹೆಚ್ಚುತ್ತದೆ.
undefined
ಜೊತೆಯಾಗಿ ಸಮಯ ಕಳೆಯಿರಿಪ್ರೀತಿ ಹೆಚ್ಚಾಗಲು ಇಬ್ಬರು ಒಬ್ಬರಿಗೊಬ್ಬರು ಸಮಯ ಕೊಡುವುದು ಮುಖ್ಯ. ಪ್ರತಿದಿನ ದೂರ ಪ್ರಯಾಣ ಮಾಡುವ ಅಗತ್ಯವಿಲ್ಲ. ಬದಲಾಗಿ ಊಟದ ನಂತರ ವಾಕಿಂಗ್ ಮಾಡುವುದು ಸಹ ಪ್ರೀತಿಯ ಸುಂದರ ಕ್ಷಣವನ್ನಾಗಿ ಪರಿವರ್ತಿಸಬಹುದು.
undefined
ದಿನ ಪೂರ್ತಿ ಅದೆಷ್ಟೋ ಸಮಸ್ಯೆ, ಒತ್ತಡಗಳನ್ನು ಹೊಂದಿರಬಹುದು. ಆದರೆ ಜೊತೆಯಾಗಿ ಕಳೆಯುವ ಸಮಯದಲ್ಲಿ ಎಲ್ಲವನ್ನು ಮರೆತು, ಆ ದಿನದ ಬಗ್ಗೆ ಮಾತನಾಡಿ, ಎಲ್ಲಾ ಟೆನ್ಶನ್ ದೂರ ಮಾಡಿ ಮನಸ್ಸನ್ನು ಮತ್ತಷ್ಟು ಹತ್ತಿರವಾಗಿಸಿ.
undefined
ಮಾತನಾಡಿ ಸಮಸ್ಯೆ ಬಗೆಹರಿಸಿಹೆಚ್ಚಾಗಿ ನಾವು ಮನಸು ಬಿಚ್ಚಿ ಸಂಗಾತಿ ಜೊತೆ ಮಾತನಾಡದ ಹಿನ್ನೆಲೆಯಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ನಮ್ಮ ಸಮಸ್ಯೆಗಳನ್ನು ಪರಸ್ಪರ ಹಂಚಿಕೊಳ್ಳದೇ ಇರುವ ಕಾರಣವೂ ಜೀವನ ಬೋರಿಂಗ್ ಆಗುತ್ತದೆ.
undefined
ಬೋರಿಂಗ್ ಎಂದು ಎನಿಸುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಇದರಿಂದ ಸಂಬಂಧ ಸುಧಾರಿಸಲು ಸಾಧ್ಯವಾಗುತ್ತದೆ. ಒಟ್ಟಾಗಿ ಕುಳಿತು ಮಾತನಾಡಿದಾಗ ಬಗೆಹರಿಯದ ಸಮಸ್ಯೆಗಳೇ ಇಲ್ಲ.
undefined
ಪ್ರಾಮುಖ್ಯತೆ ನೀಡಿಸಂಗಾತಿ ತಮಗೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಡಬೇಕೆಂದು ಬಯಸುತ್ತಾನೆ ಮತ್ತು ಅವನು ಅದಕ್ಕೆ ಅರ್ಹನಾಗಿದ್ದಾನೆ. ಆದ್ದರಿಂದ ಅದಕ್ಕೆ ಏಕೆ ಪ್ರಾಮುಖ್ಯತೆ ನೀಡಬಾರದು. ಎಷ್ಟೋ ಸಲ, ನಾವು ನಮ್ಮ ಪ್ರೀತಿಪಾತ್ರರಿಗೆ ಪ್ರಾಮುಖ್ಯತೆ ನೀಡದೆ ಸಂಬಂಧಗಳನ್ನುನಿರ್ಲಕ್ಷಿಸುತ್ತೇವೆ. ಹಾಗೆ ಮಾಡಬಾರದು.
undefined
ಪ್ರತಿಯೊಂದು ಸಂದರ್ಭಗಳಲ್ಲೂ ಸಂಗಾತಿಗೆ ಪ್ರಾಮುಖ್ಯತೆ ನೀಡಬೇಕು. ಪ್ರಾಮುಖ್ಯತೆಯನ್ನು ನೀಡುವುದು ಮಾತ್ರವಲ್ಲದೇ, ಪ್ರತಿದಿನವನ್ನೂ ಸ್ಪೆಷಲ್ ಆಗಿ ಫೀಲ್ ಮಾಡಿಸಬೇಕು. ಪತಿಗೆ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ ಎಂದರೆ, ಅದಕ್ಕೆ ನೀವು ಸಹ ಕಾರಣವಾಗಿರಬಹುದು. ಆದುದರಿಂದ ಪ್ರತಿ ನಿಮಿಷವನ್ನು ಸ್ಪೆಷಲ್ ಆಗಿಸುವುದು ಮುಖ್ಯ.
undefined
ಲಾಂಗ್ ಜರ್ನಿ ಮಾಡಿಪ್ರತಿದಿನವೂ ಅದೇ ದಿನಚರಿ ಮತ್ತು ಮಾಡುವ ಕೆಲಸವು ಜೀವನದಲ್ಲಿ ವಿಶೇಷವಲ್ಲವೆಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದುದರಿಂದ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ದೀರ್ಘ ಪ್ರವಾಸಕ್ಕೆ ಹೋಗಿ ಬನ್ನಿ. ಹೊಸ ವಾತಾವರಣವು ಹೊಸ ದೃಶ್ಯ ಮತ್ತು ನಿಮ್ಮಿಬ್ಬರ ನಡುವಿನ ಸಂಬಂಧಕ್ಕೆ ಬೆಚ್ಚನೆಯ ವಾತಾವರಣವನ್ನು ತರುತ್ತದೆ.
undefined
ಕಿಸ್, ಹಗ್ ಮಾಡಲು ಮರೆಯಬೇಡಿಸಂಬಂಧ ಎಷ್ಟೇ ಹಳೆಯದಾಗಿರಲಿ, ಖುಷಿಯಾದಾಗ, ಸಂಗಾತಿಯ ಮೂಡ್ ಸರಿ ಇಲ್ಲ ಎಂದಾದಾಗ ಕಿಸ್ ಮತ್ತು ಹಗ್ ಮಾಡಲು ಮರೆಯಬೇಡಿ. ಒಂದು ಬಿಸಿ ಅಪ್ಪುಗೆ ಮನದ ಎಲ್ಲಾ ನೋವನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ.
undefined
click me!