ಜಗಳ, ಮನಸ್ಥಾಪದಿಂದ ಮಾತ್ರವಲ್ಲ, ಖಾಸಗಿ ಅಂಗ ಸೇರಿ ದೇಹದ ಬೇರೆ ಭಾಗದ ವಾಸನೆಯೂ ಬ್ರೇಕಪ್, ಡೀವೋರ್ಸ್ ಆಗುತ್ತೆ!

First Published | Jul 31, 2024, 9:05 PM IST

ಸಂಬಂಧದಲ್ಲಿ ಪ್ರೀತಿಯನ್ನು ಹೆಚ್ಚಿಸಲು ಮತ್ತು ಬಲಪಡಿಸೋ ಕೆಲಸವನ್ನ ಅನ್ಯೋನ್ಯತೆ ಮಾಡುತ್ತದೆ, ಆದರೆ ನಿಮ್ಮ ದೇಹವು ಬೆವರುತ್ತಿದ್ದರೆ ಅಥವಾ ಬಾಯಿ ಮತ್ತು ಪಾದಗಳಿಂದ ಕೆಟ್ಟ ವಾಸನೆ ಬರ್ತಿದ್ರೆ, ಅದು ನಿಮ್ಮ ಸಂಬಂಧದ ಮೇಲೂ ಪರಿಣಾಮ ಬೀರಬಹುದು.  
 

ದೇಹದಿಂದ ಬರುವ (body smell) ಸುಗಂಧವು ಜೋಡಿಗಳ ನಡುವೆ ಇಂಟಿಮೆಸಿಗೆ ಕಾರಣವಾಗುತ್ತೆ, ಆದರೆ ಯಾವುದೇ ರೀತಿಯ ವಾಸನೆ ಇದ್ರೆ ಮಾತ್ರ ಅದು ಸಂಬಂಧವನ್ನೇ ದೂರ ಮಾಡೊದಕ್ಕೆ ಕಾರಣವಾಗುತ್ತೆ. ದೇಹದ ವಾಸನೆಗಳು ದೈಹಿಕ ಅನ್ಯೋನ್ಯತೆಯನ್ನು ಹೆಚ್ಚಿಸಲು ಮತ್ತು ಅದನ್ನು ಕಡಿಮೆ ಮಾಡುವ ಕೆಲಸವನ್ನೂ ಮಾಡುತ್ತೆ. ಲೈಂಗಿಕ ತೃಪ್ತಿಯಲ್ಲಿ (Sexual Satisfaction) ದೇಹದ ವಾಸನೆ ದೊಡ್ಡ ಪಾತ್ರ ವಹಿಸುತ್ತದೆ. ಸುಗಂಧವು ನಮ್ಮ ಮನಸ್ಥಿತಿಯನ್ನು ಸುಧಾರಿಸಲು ಮಾತ್ರ ಕೆಲಸ ಮಾಡುವುದಿಲ್ಲ, ಜೊತೆಗೆ ಇದು ನಮ್ಮ ಮನಸ್ಥಿತಿಯನ್ನು ಹಾಳೂ ಕೂಡ ಮಾಡುತ್ತೆ. ಸಂಗಾತಿಯ ಪರಿಮಳವು ಒಟ್ಟಿಗೆ ಕಳೆದ ಸುಂದರ ಕ್ಷಣಗಳನ್ನು ನೆನಪಿಸುತ್ತದೆ. ಸಂಬಂಧದಲ್ಲಿ ಸುಗಂಧದ ಪಾತ್ರ ನಿಮಗೆ ಈಗಾಗಲೇ ತಿಳಿದಿರಬೇಕು ಅಲ್ವಾ?.
 

ದೇಹದಿಂದ ಬರುವ ದುರ್ವಾಸನೆಗೆ (bad smell) ನೈರ್ಮಲ್ಯದ ಕೊರತೆ ದೊಡ್ಡ ಕಾರಣವಾಗಿದೆ. ಇದಲ್ಲದೆ, ಹಾರ್ಮೋನುಗಳಲ್ಲಿನ ಬದಲಾವಣೆಗಳು ದೇಹದ ವಾಸನೆಗೆ ಕಾರಣವಾಗಬಹುದು. ಇಂದು ನಾವು ಅಂತಹ ಕೆಲವು ವಾಸನೆಗಳ ಬಗ್ಗೆ ಮಾತನಾಡುತ್ತೇವೆ, ಅವು ಸಾಮಾನ್ಯವಾಗಿವೆ, ಆದರೆ ಅವುಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಯಾಕಂದ್ರೆ ಈ ವಾಸನೆ ಸಂಬಂಧವನ್ನು ಹಾಳುಮಾಡುತ್ತದೆ, ಇದರಿಂದ ಪ್ರೇಮಿಗಳ ನಡುವೆ ಬ್ರೇಕ್ ಅಪ್ ಕೂಡ ಆಗಬಹುದು, ಗಂಡ ಹೆಂಡ್ತಿ ನಡುವೆ ಡಿವೋರ್ಸ್ ಕೂಡ ಆಗಬಹುದು. 

Latest Videos


ಕೂದಲಿನಿಂದ ಬರುವ ವಾಸನೆ
ಶಾಖ, ಬೆವರು, ಇದೆವೆಲ್ಲದ ಪರಿಣಾಮವಾಗಿ ಕೂದಲು ಚರ್ಮದೊಂದಿಗೆ ಅಂಟಿ ಕೊಳ್ಳಬಹುದು ಮತ್ತು ಕೂದಲನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಇದ್ದರೆ, ಇದು ವಿಚಿತ್ರ ವಾಸನೆಯನ್ನು ಉಂಟುಮಾಡುತ್ತದೆ. ಈ ವಾಸನೆಯು ಸಂಗಾತಿಯು ನಿಮ್ಮ ಹತ್ತಿರ ಬರದಂತೆ ತಡೆಯುತ್ತದೆ. 

ಕಂಕುಳಿನಿಂದ ವಾಸನೆ (smell armpit)
ಕೆಲವು ಜನರು ಹೆಚ್ಚು ಬೆವರೋಂದ್ರಿಂದ ಅಂಡರ್ ಆರ್ಮ್ ವಾಸನೆ ಬರುತ್ತೆ, ಇದ್ರಿಂದ ಅವರ ಬಳಿ ಕುಳಿತುಕೊಳ್ಳುವುದು ಕಷ್ಟ. ನಿಮ್ಮ ಬೆವರು ತುಂಬಾ ಕೆಟ್ಟ ವಾಸನೆಯನ್ನು ಹೊಂದಿದ್ದರೆ, ಅದು ನಿಮ್ಮ ಸಂಬಂಧದಲ್ಲಿ ಸ್ಪೆಷಲ್ ಕ್ಷಣಗಳಿಗೆ ಅಡ್ಡಿಯಾಗಬಹುದು. ನಿಯಮಿತವಾಗಿ ಸ್ನಾನ ಮಾಡುವ ಮೂಲಕ, ಡಿಯೋಡರೆಂಟ್ಸ್ ಅಥವಾ ಸುಗಂಧ ದ್ರವ್ಯಗಳನ್ನು ಬಳಸುವ ಮೂಲಕ, ವಾಸನೆ  ನಿಯಂತ್ರಿಸಬಹುದು.  

ಬಾಯಿಯ ಕೆಟ್ಟ ವಾಸನೆ (smelly mouth)
ನೀವು ಬಯಸಿದರೂ ಬಾಯಿಯಿಂದ ಬರುವ ವಾಸನೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ಈ ದುರ್ವಾಸನೆ ವೈಯಕ್ತಿಕವಾಗಿ ಮಾತ್ರವಲ್ಲದೆ ವೃತ್ತಿಪರ ಜೀವನದಲ್ಲಿಯೂ ಮುಜುಗರಕ್ಕೆ ಕಾರಣವಾಗಬಹುದು. ಪೈರೋರಿಯಾ ಬಾಯಿಯಿಂದ ಬರುವ ಕೆಟ್ಟ ವಾಸನೆಗೆ ಕಾರಣವಾಗಬಹುದು, ಆದರೆ ಸಾಮಾನ್ಯವಾಗಿ ಈ ಸಮಸ್ಯೆ ಶುಚಿತ್ವದ ಕೊರತೆಯಿಂದ ಉಂಟಾಗುತ್ತದೆ. ನಿಮ್ಮ ಬಾಯಿಯಿಂದ ದುರ್ವಾಸನೆ ಬರ್ತಿದ್ರೆ, ಈಗಷ್ಟೆ ಶುರುವಾದ ಸಂಬಂಧವು ಅದೇ ಕಾರಣದಿಂದ ಕೊನೆಯಾಗಬಹುದು.

ಪಾದಗಳಿಂದ ಬರುವ ಕೆಟ್ಟ ವಾಸನೆ (smelly feet)
ಕೆಲವು ಜನರ ಪಾದಗಳು ವಿಚಿತ್ರ ವಾಸನೆಯನ್ನು ಹೊಂದಿರುತ್ತೆ. ಅವರು ತಮ್ಮ ಬೂಟುಗಳನ್ನು ತೆಗೆದು ಎಲ್ಲಿಯಾದರೂ ಕುಳಿತರೆ, ಅವರ ಸುತ್ತಲಿನ ಜನರಿಗೆ ಅಲ್ಲಿ ಉಸಿರಾಡೋದಕ್ಕೂ ಕಷ್ಟವಾಗುತ್ತದೆ. ಆತ್ಮೀಯ ಕ್ಷಣಗಳಲ್ಲಿ, ಪಾದಗಳಿಂದ ಬರುವ ವಾಸನೆ ನಿಮ್ಮಿಬ್ಬರನ್ನೂ ಹತ್ತಿರಕ್ಕೆ ತರುವುದಿಲ್ಲ ಮತ್ತು ಇದರಿಂದಲೇ ಮುಂದೆ ನಿಮ್ಮ ಲವ್ ಲೈಫಲ್ಲಿ ರೋಮ್ಯಾನ್ಸ್ ಕಡಿಮೆಯಾಗಿದೆ, ಇಬ್ಬರ ನಡುವಿನ ಅಂತರ ಹೆಚ್ಚಾಗಬಹುದು. 

ಖಾಸಗಿ ಭಾಗಗಳಿಂದ ಬರುವ ವಾಸನೆ (smelly private area)
ಅದರ ವಾಸನೆಯನ್ನು ತಡೆದುಕೊಳ್ಳುವುದು ತುಂಬಾ ಕಷ್ಟ. ಈ ಕಾರಣದಿಂದಾಗಿ, ಸಂಗಾತಿಗೆ ಆಪ್ತ ಕ್ಷಣಗಳ ಬಗ್ಗೆ ಯೋಚಿಸಲು ಸಾಧ್ಯವಾಗೋದಿಲ್ಲ. ಇದಕ್ಕೆ ದೊಡ್ಡ ಕಾರಣವೆಂದರೆ ನೈರ್ಮಲ್ಯದ ಕೊರತೆ. ದೇಹದ ಜೊತೆಗೆ, ಈ ಭಾಗದ ಸ್ವಚ್ಛತೆಯೂ ಬಹಳ ಮುಖ್ಯ. ಇದಲ್ಲದೆ, ಒಳ ಉಡುಪುಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಹತ್ತಿ ಬಟ್ಟೆಗಳ ಒಳ ಉಡುಪುಗಳನ್ನು ಆರಿಸಿ. ಇದು ವಾಸನೆಯನ್ನು ನಿಯಂತ್ರಿಸಲು ತುಂಬಾ ಸಹಾಯಕವಾಗಿದೆ.

click me!