ಪ್ರೀತಿ, ಸ್ನೇಹ ಅನ್ನೋದೆಲ್ಲಾ ತುಂಬಾನೆ ಸ್ಟ್ರಾಂಗ್ ಆಗಿರೋದು, ಅದನ್ನ ತಮ್ಮ ಪ್ರೇಮಿಯಿಂದ ಪಡೆದರೆ ಇನ್ನೂ ಚೆಂದ. ಎಲ್ಲಾ ಕಡೆ ಪ್ರೇಮಿಗಳೇ ಓಡಾಡಿಕೊಂಡಿರೋ ಈ ಕಾಲದಲ್ಲಿ ಸಿಂಗಲ್ ಆಗಿ ಉಳಿಯೋದು ಸುಲಭದ ಮಾತಲ್ಲ. ಯಾಕಂದ್ರೆ ಸಿಂಗಲ್ ಆಗಿ ಇರೋರಿಗೆ ತಾವು ಬಯಸಿದಂತೆ ಏನೂ ಮಾಡೋದಕ್ಕೂ ಆಗಲ್ಲ. ಹಾಗಾಗಿ ತಮ್ಮ ಫ್ರೆಂಡ್ಸ್ ನೋಡಿ ಹೊಟ್ಟೆಕಿಚ್ಚು ಪಡಬೇಕು ಅಷ್ಟೇ. ಸಿಂಗಲ್ ಯುವಕರ ಒಂಟಿತನವನ್ನ ಓಡಿಸಲು ಚೀನಾದಲ್ಲಿ ಇದೀಗ ಆರಂಭವಾಗಿ ಹೊಸ ಟ್ರೆಂಡ್, ಇಲ್ಲಿ ಪ್ರೀತಿಯನ್ನೂ ಮಾರಾಟ ಮಾಡಲಾಗುತ್ತೆ.
ಹೌದು, ಚೀನಾದಲ್ಲಿ ಗರ್ಲ್ ಫ್ರೆಂಡ್‌ಗಳನ್ನ ಬಾಡಿಗೆಗೆ ಪಡೆಯುವ ಇಂಟ್ರೆಸ್ಟಿಂಗ್ ಮತ್ತು ವಿವಾದಾತ್ಮಕ ಟ್ರೆಂಡ್ ತುಂಬಾ ವೇಗವಾಗಿ ಬೆಳಿತಿದೆ. ಈ ವಿಲಕ್ಷಣ ಟ್ರೆಂಡ್ ಹೆಚ್ಚುತ್ತಿರೋದಕ್ಕೆ ಮುಖ್ಯ ಕಾರಣವೆಂದರೆ ಸಿಂಗಲ್ ಜನರ ಒಂಟಿತನದ ಭಾವನೆಯನ್ನು ತೆಗೆದು ಹಾಕುವುದು. ಶೆನ್ಜೆನ್ ನಗರದ ಬೀದಿಗಳಲ್ಲಿ, ಹುಡುಗಿಯರು 'ಸ್ಟ್ರೀಟ್ ಗರ್ಲ್ ಫ್ರೆಂಡ್' (street girlfriend service) ಸೇವೆಗಳನ್ನು ನೀಡುವ ಮಳಿಗೆಗಳನ್ನ ತೆರೆದಿರೋದನ್ನ ಕಾಣಬಹುದು. ಈ ಅಭ್ಯಾಸವು ಟ್ರೆಂಡ್ ತುಂಬಾ ಜನಪ್ರಿಯವಾಗುತ್ತಿದೆ, ವಿಶೇಷವಾಗಿ ಯುವಕರರಿಗಂತೂ ಈ ಟ್ರೆಂಡ್ ಸಖತ್ ಇಷ್ಟವಾಗಿದೆ.
ತಮಗೂ ಕೂಡ ಗರ್ಲ್ ಫ್ರೆಂಡ್ಸ್ ಇರಬೇಕೆಂದು ಬಯಸುವ ಅನೇಕ ಯುವಕರು ಇದ್ದಾರೆ. ಅಂತಹ ಸಿಂಗಲ್ ಹುಡುಗರ (single boys) ಬೇಸರ ನಿವಾರಿಸಲು, ಬಾಡಿಗೆ ಗೆಳತಿಯರ ಟ್ರೆಂಡ್ ಚೀನಾದಲ್ಲಿ ವೇಗವನ್ನು ಪಡೆಯುತ್ತಿದೆ, ಅಲ್ಲಿ ಯುವತಿಯರು ಬೀದಿಗಳಲ್ಲಿ ಮಳಿಗೆಗಳನ್ನು ಹಾಕುವ ಮೂಲಕ ಲವ್, ಕಿಸ್, ಹಗ್ ಎಲ್ಲವನ್ನೂ ಮಾರುತ್ತಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಚೀನಾದಲ್ಲಿ ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್ ವೇಗವಾಗಿ ಹೆಚ್ಚಾಗಿದೆ. ವಿಶೇಷವಾಗಿ ಒಂಟಿ ಯುವಕರು ಅದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಸ್ಟ್ರೀಟ್ ಗರ್ಲ್‌ಫ್ರೆಂಡ್ ಸೇವೆಗಳಲ್ಲಿ ತಬ್ಬಿಕೊಳ್ಳುವುದು (hugging), ಒಟ್ಟಿಗೆ ಚಲನಚಿತ್ರವನ್ನು ನೋಡುವುದು, ಚುಂಬಿಸುವುದು ಮತ್ತು ಮನೆಕೆಲಸಗಳಲ್ಲಿ ಸಹಾಯ ಮಾಡುವುದು ಎಲ್ಲವೂ ಸೇರಿವೆ.
ವರದಿ ಪ್ರಕಾರ, ಸ್ಟ್ರೀಟ್ ಗರ್ಲ್‌ಫ್ರೆಂಡ್ ಹಗ್ ಮಾಡೋದಕ್ಕೆ 1 ಯುವಾನ್ (11.59 ರೂ.), ಕಿಸ್ ಮಾಡೋದಕ್ಕೆ 10 ಯುವಾನ್ (119 ರೂ.) ಮತ್ತು ಸಿನಿಮಾ ವೀಕ್ಷಿಸಲು 15 ಯುವಾನ್ (173.89 ರೂ.) ಶುಲ್ಕ ವಿಧಿಸುತ್ತಾರೆ. ಇಷ್ಟೇ ಅಲ್ಲ ಯಾರಾದರೂ ಬಾಡಿಗೆ ಗರ್ಲ್ ಫ್ರೆಂಡ್ ಜೊತೆ ಮನೆಕೆಲಸ ಮಾಡೋದಕ್ಕೆ ಬಯಸಿದರೆ, ಅವರು ಗಂಟೆಗೆ 40 ಯುವಾನ್ (463.71 ರೂ.) ಪಾವತಿಸಬೇಕಾಗುತ್ತದೆ.
ಈ ಟ್ರೆಂಡ್ ಚೀನಾದಲ್ಲಿ (trending in China) ಮಾತ್ರವಲ್ಲ, ಇತರ ದೇಶಗಳಲ್ಲಿಯೂ ಜನರ ಗಮನವನ್ನು ಸೆಳೆಯುತ್ತಿದೆ. ಈ ವಿಚಿತ್ರ ಟ್ರೆಂಡ್ ಬಗ್ಗೆ ಅನೇಕ ನೈತಿಕ ಮತ್ತು ಸಾಮಾಜಿಕ ಪ್ರಶ್ನೆಗಳು ಉದ್ಭವಿಸುತ್ತವೆ. ಕೆಲವರು ಇದನ್ನು ಆರ್ಥಿಕ ಅಸಮಾನತೆ ಮತ್ತು ಮಹಿಳೆಯರ ಸ್ಥಾನಮಾನದ ದೃಷ್ಟಿಯಿಂದ ಆತಂಕಕಾರಿ ಎಂದು ಹೇಳುತ್ತಿದ್ದರೆ, ಇತರರು ಇದನ್ನು ಒಂಟಿತನವನ್ನು ನಿಭಾಯಿಸುವ ಪ್ರಾಯೋಗಿಕ ಮಾರ್ಗವೆಂದು ನೋಡುತ್ತಾರೆ.
ಈಗಂತೂ, ಸ್ಟ್ರೀಟ್ ಗರ್ಲ್ಫ್ರೆಂಡ್ನ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ (social media) ಹೆಚ್ಚು ವೈರಲ್ ಆಗುತ್ತಿದೆ. ಎಲ್ಲಾ ಆಯ್ತು ಈಗ ಪ್ರೀತಿಯೂ ಮಾರಾಟಕ್ಕಿರೋದನ್ನ ಯೋಚಿಸಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಪ್ರಪಂಚದಲ್ಲಿ ಇನ್ನು ನೋಡೋದಕ್ಕೆ ಏನು ಉಳಿದಿದೆ ಎಂದು ಕೇಳ್ತಿದ್ದಾರೆ ಜನ.