ಪ್ರೀತಿ ಮಾಡೋರು ಯಾವಾಗ್ಲೂ ತಮ್ಮ ಸಂಬಂಧ (Relationship) ಯಾವಾಗ್ಲೂ ಸ್ಟ್ರಾಂಗ್ ಆಗಿರ್ಬೇಕು, ನನ್ನ ಹುಡುಗ ಯಾವಾಗ್ಲೂ ನನ್ನನ್ನ ಪ್ರೀತಿ ಮಾಡ್ಬೇಕು, ತುಂಬಾನೆ ಪ್ರೀತಿ ಮಾಡ್ಬೇಕು ಅಂತ ಬಯಸ್ತಾರೆ. ಅಷ್ಟೇ ಅಲ್ಲದೇ ಪ್ರೀತಿ ಸ್ಟ್ರಾಂಗ್ ಆಗಿರೋಕೆ ಇಬ್ಬರ ನಡುವೆ ನಂಬಿಕೆ ತುಂಬಾನೆ ಮುಖ್ಯ ಅಂತಾನೂ ನಾವು ಅಂದುಕೊಂದಿದ್ದೀವಿ.
ಆದ್ರೆ ಇದೀಗ ಹೊಸ ಅಧ್ಯಯನವೊಂದು ವಿಚಿತ್ರವಾದ ಮಾಹಿತಿಯನ್ನ ಹೊರ ಹಾಕಿದೆ. ನಿಮ್ಮ ಬಾಯ್ ಫ್ರೆಂಡ್ ಗೆ ಗಡ್ಡ ಇದ್ರೆ ಖಂಡಿತವಾಗಿಯೂ ಇದು ನಿಮಗೆ ತುಂಬಾನೆ ಖುಷಿ ಕೊಡುವ ಸುದ್ದಿ. ಯಾಕಂದ್ರೆ ಗಡ್ಡ ಇರೋ ಹುಡುಗರು (bearded man) ಯಾವತ್ತೂ ಮೋಸ ಮಾಡೋದಿಲ್ವಂತೆ.
ಹೌದು ಗಡ್ಡ ಹೊಂದಿರುವ ಪುರುಷರು ರೋಮ್ಯಾಂಟಿಕ್ ರಿಲೇಶನ್ ಶಿಪ್’ನಲ್ಲಿ (romantic relationship) ಹೆಚ್ಚು ಸ್ಥಿರವಾಗಿರುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ಗಡ್ಡ ಇರೋ ಹುಡುಗರು ಖಂಡಿತವಾಗಿಯೂ ಒಬ್ಬ ಉತ್ತಮ ಲೈಫ್ ಪಾರ್ಟ್ನರ್ ಆಗ್ತಾರೆ ಅನ್ನೋದನ್ನು ಸಹ ಅಧ್ಯಯನ ತಿಳಿಸಿದೆ.
ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗಡ್ಡಧಾರಿ ಪುರುಷರು ಸಂಬಂಧದಲ್ಲಿದ್ದರೆ ಹೊಸ ಸಂಗಾತಿಯನ್ನು ಹುಡುಕುವ ಸಾಧ್ಯತೆ ಕಡಿಮೆ. ಅವರು ತಮ್ಮ ಗೆಳತಿಯರಿಗೆ ಮೋಸ ಮಾಡೋದಿಲ್ವಂತೆ. ಅವರು ಒಂದು ಸಲ ಲವ್ ಮಾಡಿದ್ರೆ, ಆ ಹುಡುಗೀರ ಜೊತೆ ಪ್ರಾಮಾಣಿಕವಾಗಿ ಕಮೀಟ್ ಆಗಿರ್ತಾರೆ ಅನ್ನೋದು ತಿಳಿದು ಬಂದಿದೆ.
ಗಡ್ಡ ಇರೋ ಗಂಡಸರಿಗೆ ಹೋಲಿಕೆ ಮಾಡಿದ್ರೆ ಕ್ಲೀನ್ ಶೇವ್ (clean shaved) ಮಾಡಿದ ಪುರುಷರು ಸಂಗಾತಿಗೆ ಮೋಸ ಮಾಡೊ ಚಾನ್ಸ್ ಹೆಚ್ಚಿದೆ ಅಧ್ಯಯನದಲ್ಲಿ ವರದಿಯಾಗಿದೆ. ಮತ್ತೊಂದೆಡೆ, ಗಡ್ಡಧಾರಿ ಪುರುಷರು ಹೊಸ ಸಂಗಾತಿಯನ್ನು ಹುಡುಕೋ ಸಾಹಸ ಮಾಡೋದು ಕಡಿಮೆ, ಅವರು ತಮ್ಮ ಪ್ರಸ್ತುತ ಸಂಗಾತಿಯನ್ನು ಉಳಿಸಿಕೊಳ್ಳಲು ಮತ್ತು ಸಂಬಂಧವನ್ನು ಮತ್ತಷ್ಟು ಸ್ಟ್ರಾಂಗ್ ಆಗಿಟ್ಟುಕೊಳ್ಳಲು ತುಂಬಾನೆ ಪ್ರಯತ್ನಿಸ್ತಾರಂತೆ
ಈ ಅಧ್ಯಯನವನ್ನು 18 ರಿಂದ 40 ವರ್ಷದೊಳಗಿನ 414 ಪುರುಷರ ಮೇಲೆ ನಡೆಸಲಾಯಿತು. ಅದರಲ್ಲಿ ಗಡ್ಡ ಹೊಂದಿರೋ ಪುರುಷರು ಪ್ರಣಯ ಸಂಬಂಧಗಳು ಮತ್ತು ಕುಟುಂಬವನ್ನು ಹೆಚ್ಚು ಇಷ್ಟ ಪಡ್ತಾರೆ. ಅವರು ಯಾವುದೇ ಕಾರಣಕ್ಕೂ ತಮ್ಮ ಸಂಗಾತಿಗೆ ಮೋಸ ಮಾಡಲ್ಲ, ಮೋಸ ಮಾಡೋ ಚಾನ್ಸ್ ತುಂಬಾನೆ ಕಡಿಮೆ ಎಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.
ವಾರ್ಸಾದ ಕಾರ್ಡಿನಲ್ ಸ್ಟೀಫನ್ ವಿಜಿನ್ಸ್ಕಿ ವಿಶ್ವವಿದ್ಯಾಲಯದ ಪ್ರೊಫೆಸರ್ ಪೀಟರ್ ಜೊನಾಸನ್ ಈ ಅಧ್ಯಯನದ ಬಗ್ಗೆ ಬರೆದಿದ್ದಾರೆ. ಗಡ್ಡ ಹೊಂದಿರುವ ಪುರುಷರು ಅನೇಕ ಸಂಗಾತಿಗಳನ್ನು ಕಂಡುಕೊಳ್ಳುವ ಸಾಧ್ಯತೆ ಕಡಿಮೆ. ಬದಲಾಗಿ, ಅವರು ಲವ್, ಫ್ಯಾಮಿಲಿ, ರಿಲೇಶನ್ ಶಿಪ್ ನ್ನು ಉಳಿಸಿಕೊಳ್ಳುವತ್ತೆ ಹೆಚ್ಚಾಗಿ ಯೋಚನೆ ಮಾಡ್ತಾರೆ, ಜೊತೆಗೆ ಈ ಗಡ್ಡ ಹೊಂದಿರೋ ಪುರುಷರು ಇತರರಿಗೆ ಗೌರವ ಕೊಡೋದು ಕೂಡ ಹೆಚ್ಚು ಎಂದು ಹೇಳಿದ್ದಾರೆ.