Loyalty Test: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಟ್ರೆಂಡ್ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಜನರು ತಮ್ಮ ಸ್ನೇಹಿತ ಅಥವಾ ಸಂಗಾತಿಯ ಕೈಯನ್ನು ಶೇಕ್ ಹ್ಯಾಂಡ್ ಕೊಡುವ ರೀತಿ ಹಿಡಿದುಕೊಂಡು, ಕೈ ಮೇಲೆ ಬಿಸಿ ಚಹಾ ಚೆಲ್ಲುವ ಮೂಲಕ ಲಾಯಲ್ಟಿ ಟೆಸ್ಟ್ ಮಾಡ್ತಿದ್ದಾರೆ.
ಪ್ರತಿದಿನ, ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಟ್ರೆಂಡ್ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ಒಂದು ವಿಚಿತ್ರ ಟ್ರೆಂಡ್ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಪ್ರತಿಯೊಬ್ಬರೂ ತಮ್ಮ ಸಂಗಾತಿ ಅಥವಾ ಸ್ನೇಹಿತರು ತಮಗೆ ನಿಷ್ಠರಾಗಿರಬೇಕು ಎಂದು ಬಯಸುತ್ತಾರೆ. ಈ ಟ್ರೆಂಡ್ ಕೂಡ ನಿಮ್ಮ ಸಂಗಾತಿ ನಿಮಗೆ ನಿಷ್ಠರಾಗಿದ್ದಾರೆಯೇ ಅನ್ನೋದನ್ನು ಹೇಳುತ್ತೆ.
26
ಕೈ ಮೇಲೆ ಬಿಸಿ ಚಹಾ ಚೆಲ್ಲುವ ಟ್ರೆಂಡ್
ಹೇಗೆ ತಿಳಿಯುವುದು? ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ಒಂದು ಟ್ರೆಂಡ್ ವೈರಲ್ ಆಗುತ್ತಿದೆ, ಅಲ್ಲಿ ಜನರು ತಮ್ಮ ಸಂಗಾತಿಯ ಕೈ ಮೇಲೆ ಬಿಸಿ ಚಹಾ ಸುರಿಯುತ್ತಾರೆ, ಆ ಮೂಲಕ ಅವರ ನಿಷ್ಠೆಯನ್ನು ಪರೀಕ್ಷಿಸುತ್ತಾರೆ. ಈ ಟ್ರೆಂಡ್ ಈಗ Gen-Zಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
36
Loyalty Test ಮಾಡುವುದು ಹೇಗೆ?
ಇದು ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಜನರು ಇದನ್ನು ಭಾರಿ ಇಷ್ಟಪಟ್ಟು ಫಾಲೋ ಮಾಡ್ತಿದ್ದಾರೆ. ತಮ್ಮ ಸಂಗಾತಿ ಅಥವಾ ಸ್ನೇಹಿತನ ನಿಷ್ಠೆಯನ್ನು ಪರೀಕ್ಷಿಸಲು, ಅವರ ಕೈಯನ್ನು ಶೇಕ್ ಹ್ಯಾಂಡ್ ಕೊಡುವ ರೀತಿಯಲ್ಲಿ ಹಿಡಿದು, ಕೈಮೇಲೆ ಬಿಸಿ ಚಹಾವನ್ನು ಸುರಿಯುತ್ತಾರೆ. ಆ ಮೂಲಕ ತಮ್ಮ ಸಂಗಾತಿಯ ನಿಷ್ಠೆ ಪತ್ತೆ ಮಾಡ್ತಿದ್ದಾರೆ Gen-Z.
ಒಂದು ವೇಳೆ ಪ್ರೇಮಿ ಅಥವಾ ಫ್ರೆಂಡ್ ನೋವಿನ ನಡುವೆಯೂ ಇನ್ನೊಬ್ಬರ ಕೈ ಬಿಡದಿದ್ದರೆ, ಅವರನ್ನು ನಿಷ್ಠಾವಂತರೆಂದು ಪರಿಗಣಿಸಲಾಗುತ್ತದೆ. ಆದರೆ ಯಾರಾದರೂ ಬಿಸಿ ಎಂದು ಕೈ ಬಿಟ್ಟುಕೊಟ್ಟರೆ, ಸಂಬಂಧದಲ್ಲಿ ನಿಷ್ಠೆ ಇಲ್ಲ ಅನ್ನೋದು ಗೊತ್ತಾಗುತ್ತಂತೆ. ಈ ಟ್ರೆಂಡ್ ಪ್ರಸ್ತುತ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ನಲ್ಲಿ ಜನಪ್ರಿಯವಾಗಿದೆ.
56
ಚಾಲೆಂಜ್ ಆಗಿ ಸ್ವೀಕರಿಸುತ್ತಿರುವ ಜನ
ಈ ಟ್ರೆಂಡ್ ಕಪಲ್ಸ್ ಮತ್ತು ಸ್ನೇಹಿತರ ಗುಂಪುಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ, ಮತ್ತು ಜನರು ವೀಡಿಯೊಗಳನ್ನು ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಮೋಜಿನ ಚಾಲೆಂಜ್ ಎಂದರೆ, ಇನ್ನೂ ಕೆಲವರು ರೋಮ್ಯಾಂಟಿಕ್ ಟ್ರೆಂಡ್ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಇದನ್ನು ಅಪಾಯಕಾರಿ ಟ್ರೆಂಡ್, ಮೂರ್ಖತನ ಮತ್ತು ಸಂಬಂಧಗಳಿಗೆ ನಕಾರಾತ್ಮಕವೆಂದು ಪರಿಗಣಿಸುತ್ತಿದ್ದಾರೆ.
66
ನೀವು ಇದನ್ನ ಟ್ರೈ ಮಾಡಬೇಡಿ
ಈ ಟ್ರೆಂಡ್ ವೇಗವಾಗಿ ವೈರಲ್ ಆಗುತ್ತಿದ್ದರೂ, ಇದು ಆರೋಗ್ಯಕ್ಕೆ ಅಪಾಯಕಾರಿ. ಕುದಿಯುವ ಚಹಾವು ಸುಟ್ಟಗಾಯಗಳಿಗೆ ಕಾರಣವಾಗಬಹುದು ಮತ್ತು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳಬಹುದು. ಯಾರಾದರೂ ನಿಮ್ಮನ್ನು ಅಂತಹ ಪರೀಕ್ಷೆಗೆ ಒಳಪಡಿಸಿದರೆ, ಆ ಸಂಬಂಧವು ನಿಜವಾದದ್ದಲ್ಲ ಎಂದು ಅರ್ಥಮಾಡಿಕೊಳ್ಳಿ. ನಿಜವಾದ ಪ್ರೀತಿ ಮತ್ತು ಸ್ನೇಹವು ಪ್ರೀತಿಪಾತ್ರರಿಗೆ ನೋವುಂಟು ಮಾಡುವುದಿಲ್ಲ, ಬದಲಿಗೆ ಅವರ ಬಗ್ಗೆ ಸಂತೋಷ ಮತ್ತು ಕಾಳಜಿಯನ್ನು ತೋರಿಸುತ್ತದೆ ಅನ್ನೋದು ನೆನಪಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.