ವಿಚ್ಛೇದನದ ನಂತರವೂ ಮುಂದುವರಿದ ಅಪ್ಪ ಅಮ್ಮನ ಕಿತ್ತಾಟ: ತನ್ನ ಹೆಸರಲ್ಲಿದ್ದ ಅಪ್ಪನ ಹೆಸರು ಕೈಬಿಟ್ಟ ನಟನ ಪುತ್ರಿ

Published : Jan 08, 2024, 03:28 PM ISTUpdated : Jan 08, 2024, 03:35 PM IST

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಈಗ ಗಂಡ ಹೆಂಡತಿ ಜಗಳ ಶುರುವಾದರೆ ಕೆಲವೊಂದು ಕೋರ್ಟ್ ಕಟ್ಟಳೆಯಲ್ಲಿ ಮುಗಿದು ಬಿಡುತ್ತದೆ. ಆದರೆ ಈ ಸೆಲಬ್ರಿಟಿ ಕಪಲ್‌ಗಳ ಜಗಳ ವಿಚ್ಛೇದನದ ನಂತರವೂ ಮುಂದುವರೆದಿದೆ. 

PREV
115
ವಿಚ್ಛೇದನದ ನಂತರವೂ ಮುಂದುವರಿದ ಅಪ್ಪ ಅಮ್ಮನ ಕಿತ್ತಾಟ:  ತನ್ನ ಹೆಸರಲ್ಲಿದ್ದ ಅಪ್ಪನ ಹೆಸರು ಕೈಬಿಟ್ಟ ನಟನ ಪುತ್ರಿ

 ಹೌದು ಹಾಲಿವುಡ್ ನಟಿ ಅಂಜೆಲೀನಾ ಜೋಲಿ ಹಾಗೂ ಅಮೆರಿಕನ್ ನಟ ನಿರ್ಮಾಪಕ ಬ್ರಾಡ್ ಫಿಟ್ ಕಿತ್ತಾಟ ವಿಚ್ಛೇದನದ ನಂತರವೂ ಮುಂದುವರೆದಿದೆ. 

215

ಇತ್ತ ಅಪ್ಪ ಅಮ್ಮನ ಕಲಹದಿಂದ ಅಪ್ಪನ ಮೇಲೆ ಸಿಟ್ಟಿಗೆದ್ದ ಅಂಜೆಲೀನಾ ಪುತ್ರಿ ಜಹರಾ ಮರ್ಲೇ ಜೋಲಿ ಪಿಟ್ ಎಂದಿದ್ದ ತನ್ನ ಹೆಸರಿನಿಂದ ಅಪ್ಪನ ಸರ್‌ನೇಮ್ ಆಗಿದ್ದ ಪಿಟ್‌ನ್ನು ಕೈ ಬಿಟ್ಟಿದ್ದಾಳೆ. 

315

ಜಹರಾ ಇತ್ತೀಚೆಗೆ ಸ್ಪೆಲ್‌ಮ್ಯಾನ್ ಕಾಲೇಜಿನಲ್ಲಿ ಆಲ್ಫಾ ಕಪ್ಪಾ ಆಲ್ಫಾ ಸೊರೊರಿಟಿಗೆ ( ಸಾಮಾಜಿಕ ಕಾರ್ಯಕ್ಕಾಗಿ ದುಡಿಯುವ ಮಹಿಳಾ ವಿದ್ಯಾರ್ಥಿಗಳ ಸಂಘ) ಸೇರಿದ್ದು, ಇಲ್ಲಿ ಆಕೆ ತನ್ನನ್ನು ಜೋಲೀ ಪಿಟ್ ಎಂದು ನೋಂದಾಯಿಸುವ ಬದಲು  ತನ್ನ ದತ್ತು ತಂದೆಯ ಉಪನಾಮವನ್ನು ಕೈಬಿಟ್ಟು ನನ್ನ ಹೆಸರು ಜಹಾರಾ ಮಾರ್ಲಿ ಜೋಲೀ' ಎಂದು ಹೇಳುವ ಮೂಲಕ ತನ್ನನ್ನು ಪರಿಚಯಿಸಿಕೊಂಡಿದ್ದಾಳೆ.

415

48 ವರ್ಷದ ನಟಿ ಅಂಜೆಲೀನಾ ಜೋಲಿ 2016ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು. 2004 ರಲ್ಲಿ ಸಿನೆಮಾ ಸೆಟೊಂದರಲ್ಲಿ ಪರಸ್ಪರ ಭೇಟಿಯಾಗಿದ್ದ ಅಂಜೆಲೀನಾ ಜೋಲಿ ಹಾಗೂ ಬ್ರಾಡ್ ಪಿಟ್ ಮದುವೆಗೂ ಮೊದಲು 10 ವರ್ಷ ಡೇಟಿಂಗ್‌ನಲ್ಲಿದ್ದರು. 

515

 ಇದೇ ವೇಳೆ ಜೊತೆಯಾಗಿ ಮಕ್ಕಳನ್ನು ದತ್ತು ಪಡೆದಿದ್ದರು. ನಂತರ 2014ರಲ್ಲಿ ಮದುವೆಯಾದ ಈ ಜೋಡಿಗೆ ಅದೇನಾಯ್ತೋ ಏನೋ ದಾಂಪತ್ಯದಲ್ಲಿ ಕಲಹವೇ ಹೆಚ್ಚಾಗಿ 2016ರಲ್ಲಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರವೂ ಈಗ ಮಕ್ಕಳ ಹಕ್ಕುಗಾರಿಕೆಗೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ವೈಮನಸ್ಸಿದೆ. 

615

ಪ್ರಸ್ತುತ ಅಂಜೆಲೀನಾ ಜೋಲಿ ಹಾಗೂ 60 ವರ್ಷದ ಬ್ರಾಡ್ ಫಿಟ್ ಮಕ್ಕಳಾದ 22 ವರ್ಷದ ಮ್ಯಾಡಾಕ್ಸ್, 20 ವರ್ಷದ ಪ್ಯಾಕ್ಸ್, 18 ವರ್ಷದ ಜಹಾರಾ, 17 ವರ್ಷದ ಶಿಲೋ ಹಾಗೂ ಅವಳಿ ಮಕ್ಕಳಾದ 15 ವರ್ಷದ ನಾಕ್ಸ್ ಹಾಗೂ ವಿವಿಯೇನ್‌ಗೆ ಪೋಷಕರಾಗಿದ್ದಾರೆ. 

715

ಇವರಲ್ಲಿ ಮೊದಲ ಮಗು ಮ್ಯಾಡಾಕ್ಸ್‌ನನ್ನು ತಾವು ಡೇಟಿಂಗ್ ಶುರು ಮಾಡುವ ಮೂರು ವರ್ಷಗಳ ಮೊದಲೇ ಕಾಂಬೋಡಿಯಾದಿಂದ ನಟಿ ಜೋಲಿ ದತ್ತು ಪಡೆದಿದ್ದರು. ಇದಾದ ನಂತರ ನಟಿ ಬಾಳಲ್ಲಿ ಬ್ರಾಡ್ ಪಿಟ್ ಸಂಗಾತಿಯಾಗಿ ಬಂದಿದ್ದರು. 

815

ನಂತರ ಇಬ್ಬರು ಜೊತೆಯಾಗಿ ಇಥಿಯೋಪಿಯಾದಿಂದ ಜೆಹಾರಾ ಎಂಬ ಹೆಣ್ಣು ಮಗುವನ್ನು 2005ರಲ್ಲಿ ದತ್ತು ಪಡೆದಿದ್ದರು. ಜೋಲಿ ದತ್ತು ಪಡೆದಿದ್ದ ಈ ಇಬ್ಬರೂ ಮಕ್ಕಳನ್ನು ಬ್ರಾಡ್‌ಪಿಟ್ ಕಾನೂನಾತ್ಮಕವಾಗಿ ದತ್ತು ಪಡೆದಿದ್ದರು. 

915

ನಂತರ ಶಿಲೋ ಹೆಸರಿನ ತಮ್ಮದೇ ಮಗುವಿಗೆ 2006ರಲ್ಲಿ ಜನ್ಮ ನೀಡಿದ್ದರು ಈ ದಂಪತಿ. ಅಮ್ಮನ ಪಡಿಯಚ್ಚಿನಂತಿರುವ ಶಿಲೋ ಹಾಲಿವುಡ್‌ನ ಮುಂದಿನ ಐಕಾನ್ ಆಗುವ ನಿರೀಕ್ಷೆ ಇದೆ. 

1015

. ಇದಾದ ನಂತರ 2007ರಲ್ಲಿ ವಿಯೆಟ್ನಾಂನಿಂದ ಪ್ಯಾಕ್ಸ್‌ನನ್ನು ದತ್ತು ಪಡೆದಿದ್ದರು. ಬಳಿಕ ತಮ್ಮದೇ ಅವಳಿ ಮಕ್ಕಳಾದ ನಾಕ್ಸ್ ಹಾಗೂ ವಿವಿಯೇನ್‌ಗೆ ಜನ್ಮ ನೀಡಿದ್ದರು ಈ ದಂಪತಿ. ಈ ಅವಳಿಗಳು ಅಪ್ರಾಪ್ತರಾಗಿದ್ದಾರೆ.  ನಂತರ 2014ರ ಆಗಸ್ಟ್‌ನಲ್ಲಿ ಮದ್ವೆಯಾದ ಈ ಜೋಡಿ 2016ರಲ್ಲಿ ವಿಚ್ಛೇದನವನ್ನು ಘೋಷಿಸಿದ್ದರು. 

1115

ಡಿವೋರ್ಸ್ ಸುದ್ದಿಯ ಸಮಯದಲ್ಲೇ ಮಿಸ್ಟರ್ & ಮಿಸೆಸ್ ಸ್ಮಿತ್ ಸಿನಿಮಾದ ಈ ನಟ ನಟಿ ಖಾಸಗಿ ಜೆಟ್‌ನಲ್ಲಿದ್ದಾಗಲೇ ಮಕ್ಕಳ ಮುಂದೆಯೇ ಕಿತ್ತಾಟ ನಡೆಸಿದ್ದರು ಎಂದು ಸುದ್ದಿಯಾಗಿತ್ತು. ಇನ್ನು 2022ರ ಆಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ದಾಖಲೆಗಳ ಪ್ರಕಾರ, ಬ್ರಾಡ್ ಪಿಟ್ ವಿರುದ್ದ ಹೆಂಡತಿ ಮಕ್ಕಳ ಮೇಲೆ ಕೈ ಮಾಡಿದ ಆರೋಪವಿದೆ.

1215

ಈ 'ಬುಲೆಟ್ ಟ್ರೈನ್' ನಟ ತಮ್ಮ ಮಕ್ಕಳಲ್ಲಿ ಒಬ್ಬನನ್ನು ಹಿಡಿದು ಉಸಿರುಗಟ್ಟಿಸಲು ನೋಡಿದ್ದರು ಜೊತೆಗೆ ಮತ್ತೊಂದು ಮಗುವಿನ ಮುಖಕ್ಕೆ ಹೊಡೆದಿದ್ದರು  ಅಲ್ಲದೇ ನಂತರ ಪತ್ನಿ ಜೋಲಿಯ ತಲೆಯನ್ನು ಹಿಡಿದು ಜೋರಾಗಿ ಅಲುಗಾಡಿಸಿದ್ದರು. ಒಂದು ಹಂತದಲ್ಲಂತೂ ಅವರು ಜೋಲಿ ಹಾಗೂ ಮಕ್ಕಳ ಮೇಲೆ ಬೀಯರ್ ಎರಚಿ ದೌರ್ಜನ್ಯ ನಡೆಸಿದ್ದರು ಎಂಬ ಮಾಹಿತಿ ಇದೆ.

1315

ಈ ಆರೋಪಗಳಲ್ಲಿ ಕೆಲವನ್ನು ಬ್ರಾಡ್ ಪಿಟ್ ಒಪ್ಪಿಕೊಂಡಿದ್ದರು. ಮಕ್ಕಳ ವಿರುದ್ಧ ಧ್ವನಿ ಏರಿಸಿದ್ದು ನಿಜ, ಆದರೆ ದೈಹಿಕ ಹಲ್ಲೆ ಮಾಡಿಲ್ಲ ಎಂದು ಬ್ರಾಡ್ ಪಿಟ್ ಹೇಳಿದ್ದರು. ಆದರೆ ವಿಚ್ಛೇದನದ ನಂತರವೂ ಸಹ ಪೋಷಕರಾಗಿ ಇಬ್ಬರೂ  ಮಕ್ಕಳ ಪಾಲನೆ ಮಾಡಬೇಕು ಎಂದು 2021ರಲ್ಲಿ ಕೋರ್ಟ್ ಆದೇಶ ನೀಡಿತ್ತು. 

1415

ಆದರೂ ಜೋಲಿ ಹಾಗೂ ಪಿಟ್ ಅವರ ಅಪ್ರಾಪ್ತ ಅವಳಿ ಮಕ್ಕಳ ಪಾಲನೆಯ ಸುಪರ್ದಿ ವಿಚಾರ ಇನ್ನು ಬಗೆಹರಿದಿಲ್ಲ. ಇದರ ನಡುವೆ ಅಂಜೆಲೀನಾ ಜೋಲಿ ಹಾಲಿವುಡ್ ತೊರೆಯುತ್ತಾರೆ ಎಂಬ ಸುದ್ದಿಯೂ ದಟ್ಟವಾಗಿ ಹರಡಿದೆ. 

1515

ಮಕ್ಕಳ ಕಾರಣಕ್ಕೆ ಹಾಗೂ ನೆಮ್ಮದಿಯ ಜೀವನ ಅರಸಿ ಅವರು ಅವರು ಲಾಸ್ ಏಂಜಲಿಸ್ ತೊರೆದು ಕಾಂಬೋಡಿಯಾದಲ್ಲಿ ನೆಲೆಸಲು ನಿರ್ಧಾರಿಸಿದ್ದಾರೆ ಎಂಬ ವಿಚಾರ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇತ್ತ ಅಂಜೆಲೀನಾ ಜೊಲಿ ಅವರು ಸಿನಿಮಾ ಮಾತ್ರವಲ್ಲದೇ ಹಲವು ಮಾನವೀಯ ಕಾರ್ಯಗಳಲ್ಲಿ ಕೈ ಜೋಡಿಸಿದ್ದು ಕೊಡುಗೈ ದಾನಿ ಎನಿಸಿದ್ದಾರೆ.
 

Read more Photos on
click me!

Recommended Stories