Happy Fathers Day 2023: ಪ್ರೀತಿಯ ಅಪ್ಪನಿಗೆ ಈ ರೀತಿ ಶುಭಾಶಯ ತಿಳಿಸಿ

First Published | Jun 18, 2023, 9:37 AM IST

ಜೀವನದಲ್ಲಿ ನಾವೆಷ್ಟೇ ಎತ್ತರಕ್ಕೆ ಬೆಳೆದರೂ ಅಥವಾ ಎಷ್ಟೇ ಸಾಧಿಸಿದರೂ, ಎಲ್ಲವನ್ನೂ ತ್ಯಾಗ ಮಾಡಿ ನಮ್ಮನ್ನು ಬೆಳೆಸಿದ ಅಪ್ಪ ನಮ್ಮ ಲೈಫ್‌ನ್ಲಿ ತುಂಬಾ ಸ್ಪೆಷಲ್ ಆಗಿರುತ್ತಾರೆ. ಇವತ್ತು ವಿಶ್ವ ಅಪ್ಪಂದಿರ ದಿನ. ನಿಮ್ಮ ಪ್ರೀತಿಯ ಅಪ್ಪನಿಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ.

ಆತ್ಮೀಯ ಅಪ್ಪಾ..ಜೀವನದಲ್ಲಿ ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಎಂದಿಗೂ ನಿಮ್ಮ ಪ್ರೀತಿಯ ಮಕ್ಕಳು. ತಂದೆಯ ದಿನಾಚರಣೆಯ ಶುಭಾಶಯಗಳು

ನೀವು ನಮ್ಮ ಸೂಪರ್ ಹೀರೋ, ಜೀವನದಲ್ಲಿ ಅದ್ಭುತ ತಂದೆಯಾಗಿದ್ದಕ್ಕಾಗಿ ಧನ್ಯವಾದಗಳು. ತಂದೆಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಅಪ್ಪಾ..

Tap to resize

ತಂದೆ, ಮಗನ ಜೀವನದ ಮೊದಲ ಹೀರೋ ಮತ್ತು ಮಗಳ ಜೀವನದಲ್ಲಿ ಮೊದಲ ಪ್ರೀತಿ. ತಂದೆಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಅಪ್ಪಾ..

ಅಪ್ಪ ಅಂದ್ರೆ ನನ್ನ ಪಾಲಿನ ಹೀರೋ… ನನ್ನ ಅಪ್ಪನ ಪುಟ್ಟ ಪ್ರಪಂಚ ನಾನಾದರೆ ನನ್ನ ವಿಶಾಲವಾದ ಪ್ರಪಂಚ ನನ್ನಪ್ಪ...ನನ್ನ ಜೀವನದಲ್ಲಿ ಯಾವಾಗಲು ಮೊದಲ ಹಿರೋ ನೀವಾಗಿರುತ್ತೀರಾ ಅಪ್ಪ.   'ವಿಶ್ವ ತಂದೆಯರ ದಿನ'ದ ಈ ಶುಭ ಗಳಿಗೆಯಂದು ನಿಮಗೆ ಶುಭಾಶಯಗಳು ಅಪ್ಪಾ. 

ಜಗತ್ತಿನ ಶ್ರೇಷ್ಠ ತಂದೆಗೆ ತಂದೆಯ ದಿನದ ಶುಭಾಶಯಗಳು. ನಿಮ್ಮ ನಿಸ್ವಾರ್ಥತೆ, ದಯೆ ಮತ್ತುಪ್ರೀತಿ ನನ್ನ ಜೀವನದಲ್ಲಿ ಎಲ್ಲಾ ಬದಲಾವಣೆಗಳನ್ನು ಮಾಡಿದೆ.

ಈ ಜಗತ್ತಿನಲ್ಲಿ ಹೇಗೆ ಬದುಕಬೇಕು ಎಂಬುದನ್ನು ನನಗೆ ಕಲಿಸಿಕೊಟ್ಟ ವ್ಯಕ್ತಿಗೆ, ಅಪ್ಪನಿಗೆ ತಂದೆಯ ದಿನದ ಹಾರ್ದಿಕ ಶುಭಾಶಯಗಳು. 

ದಿನವಿಡೀ ದುಡಿಯುವ ಮತ್ತು ನಮ್ಮೊಂದಿಗೆ ಬಿಡುವಿನ ವೇಳೆಯನ್ನು ಕಳೆಯುವ ತಂದೆಗೆ ವಿಶ್ವ ಅಪ್ಪಂದಿರ ದಿನಾಚರಣೆಯ ಶುಭಾಶಯಗಳು.

ಅಪ್ಪಾ, ನಾನು ಮಾಡುವ ಎಲ್ಲಾ ಕೆಲಸಗಳಲ್ಲಿ ಯಾವಾಗಲೂ ನನ್ನ ಬೆಂಬಲದ ಆಧಾರಸ್ತಂಭವಾಗಿದ್ದಕ್ಕಾಗಿ ಧನ್ಯವಾದಗಳು. ಹ್ಯಾಪಿ ಫಾದರ್ಸ್ ಡೇ.

ನನ್ನ ಜೀವನದ ಹೀರೋ ಮತ್ತು ನನ್ನ ರೋಲ್ ಮಾಡೆಲ್‌ಗೆ ತಂದೆಯ ದಿನದ ಶುಭಾಶಯಗಳು. ನಮ್ಮ ಕುಟುಂಬಕ್ಕಾಗಿ ನೀವು ಮಾಡಿದ ಎಲ್ಲದಕ್ಕೂ ಧನ್ಯವಾದಗಳು.

ಜಗತ್ತಿನ ಶ್ರೇಷ್ಠ ತಂದೆಗೆ, ನಿಮ್ಮ ದಿನವು ಸಂತೋಷದಿಂದ ತುಂಬಿರಲಿ ಎಂದು ನಾನು ಬಯಸುತ್ತೇನೆ. ತಂದೆಯ ದಿನಾಚರಣೆಯ ಶುಭಾಶಯಗಳು.

Latest Videos

click me!