ರೊಮ್ಯಾಂಟಿಕ್, ಕೇರಿಂಗ್, ಸೆಕ್ಸುವಲ್…. ಹೀಗೆಲ್ಲಾ ಕಿಸ್ ಮಾಡ್ತಾರಾ?

First Published | Jun 17, 2023, 3:41 PM IST

ಚುಂಬನವನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದ್ದರೂ, ಎಲ್ಲಾ ರೀತಿಯ ಚುಂಬನ ಅರ್ಥವನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಯಾಕೆಂದ್ರೆ ನಿಮಗೆ ಸಂಗಾತಿ ನೀಡುವ ಕಿಸ್ ಯಾವ ರೀತಿಯದ್ದು ಅನ್ನೋದು ನಿಮಗೂ ತಿಳಿಯುತ್ತೆ… 

ಸಂಗಾತಿಗೆ ಕಿಸ್ ಮಾಡೋದು ರೋಮ್ಯಾಂಟಿಕ್ (romantic) ಅನುಭವ ನೀಡುತ್ತೆ ಅಲ್ವಾ?, ಆದರೆ ಸಂಗಾತಿಗೆ ನೀಡುವಂತಹ ಕಿಸ್ ಯಾವ ರೀತಿಯದ್ದಾಗಿರುತ್ತೆ ಅನ್ನೋದು ಗೊತ್ತ? ಉದಾಹರಣೆಗೆ, ಹಣೆಯ ಮೇಲೆ ಕೊಟ್ಟ ಮುತ್ತನ್ನು ನಾನ್ ಸೆಕ್ಸುವಲ್ ಕಿಸ್ ಎಂದು ಕರೆಯಲಾಗುತ್ತದೆ. ನಾವು ದೇಶ, ವಿದೇಶಗಳಲ್ಲಿ ನೋಡಿದ್ರೆ ಕಿಸ್ ಮಾಡೋದರ ಅರ್ಥ ಒಂದೊಂದು ದೇಶದಲ್ಲಿ ಒಂದೊಂದು ರೀತಿಯಾಗಿರುತ್ತೆ. ಕೆಲವು ದೇಶಗಳಲ್ಲಿ ಇದನ್ನು ಕೇವಲ ವಿಶ್ ಮಾಡುವ ಮಾರ್ಗವೆಂದು ಪರಿಗಣಿಸಲಾಗಿದೆ, ಇತರ ದೇಶಗಳಲ್ಲಿ ಇದನ್ನು ಅಶ್ಲೀಲತೆ ಎಂದೂ ಕರೆಯಬಹುದು. 

ನಿಮ್ಮ ಸಂಗಾತಿ ಅಥವಾ ಹತ್ತಿರ ವ್ಯಕ್ತಿಯನ್ನು ಕಿಸ್ ಮಾಡೋದು ಸಾಮಾನ್ಯ ಎಂದು ನಿಮಗೆ ಅನಿಸಬಹುದು, ಆದರೆ ಇದರಲ್ಲಿ ಬೇರೆ ಬೇರೆ ರೀತಿ ಇದೆ. ಯಾರಿಗಾದರೂ ಪ್ರೀತಿಯನ್ನು ತೋರಿಸಲು, ರೋಮ್ಯಾಂಟಿಕ್ ಆಗಿ, ಯಾರಿಗಾದರೂ ಗೌರವವನ್ನು ತೋರಿಸಲು, ಯಾರನ್ನಾದರೂ ಕೇರ್ ಮಾಡಲು ಬೇರೆ ಬೇರೆ ರೀತಿಯಾಗಿ ಕಿಸ್ ಮಾಡಲಾಗುತ್ತೆ.

Tap to resize

ಯಾವ ಕಿಸ್ ಗಳು ನಿಮಗೆ ಗೊತ್ತು ಅಂದ್ರೆ ಸಾಮಾನ್ಯವಾಗಿ ಜನರು ಫ್ರೆಂಚ್ ಕಿಸ್ ಅಥವಾ ಪೆಕ್ ಕಿಸ್ ಗಳ ಬಗ್ಗೆ ಹೇಳುತ್ತಾರೆ… ಆದರೆ ಇವು ವಿವಿಧ ದೇಶಗಳಲ್ಲಿ ಮಾಡಿದ ಚುಂಬನಗಳು ಮಾತ್ರ. ಇಲ್ಲಿ ಯಾವ ಸಂದರ್ಭದಲ್ಲಿ ಕೊಡುವ ಕಿಸ್ (types of kiss), ಮತ್ತು ಯಾವ ಭಾಗಕ್ಕೆ ಕೊಡುವ ಕಿಸ್ ಏನು ಅರ್ಥವನ್ನು ಸೂಚಿಸುತ್ತೆ ಅನ್ನೋದನ್ನು ತಿಳಿಯೋಣ. 

ರೊಮ್ಯಾಂಟಿಕ್ ಅಲ್ಲದ ಚುಂಬನ: ಫ್ರೆಂಡ್ಸ್ ಗಳು ಭೇಟಿಯಾದಾಗ ನಾನ್ ರೋಮ್ಯಾಂಟಿಕ್ ಕಿಸ್ ಮಾಡಲಾಗುತ್ತದೆ? ಈ ರೀತಿಯ ಚುಂಬನವನ್ನು ಕೆನ್ನೆ ಅಥವಾ ಹಣೆಯ ಮೇಲೆ ಮಾಡಬಹುದು. ಈ ಸಮಯದಲ್ಲಿ, ವಯಸ್ಸು, ಸಂಬಂಧ, ಸಂಸ್ಕೃತಿ ಇತ್ಯಾದಿಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 

ಯುಎಸ್, ಯುಕೆ ಇತ್ಯಾದಿಗಳಲ್ಲಿ, ಮಹಿಳೆಯರು ಮತ್ತು ಪುರುಷರು ಸಹ ಈ ರೀತಿಯ ಕಿಸ್ ಮಾಡುತ್ತಾರೆ, ಆದರೆ ಭಾರತ ಅಥವಾ ಅರಬ್ ದೇಶಗಳಲ್ಲಿ ಇದನ್ನ ಮಾಡಲ್ಲ. ಇಲ್ಲಿ ಮಹಿಳೆಯರು ಒಬ್ಬರಿಗೊಬ್ಬರು ಗ್ರೀಟ್ ಮಾಡಲು ಹೀಗೆ ಕೆನ್ನೆ ಮೇಲೆ ಕಿಸ್ ಮಾಡ್ತಾರೆ, ಆದರೆ ಪುರುಷರು ಇದನ್ನ ಸಾಮಾನ್ಯವಾಗಿ ಮಾಡಲ್ಲ.

ನಾನ್ ಸೆಕ್ಸುವಲ್ ಕಿಸ್: ಪ್ರೀತಿಯನ್ನು ತೋರಿಸಲು ಇದನ್ನು ಮಾಡಬಹುದು, ಆದರೆ ಅದನ್ನು ಸೆಕ್ಸುವಲ್ ಎಂದು ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ ಹಣೆ ಅಥವಾ ಕೆನ್ನೆಯ ಮೇಲೆ ಕಿಸ್ ಮಾಡೋದು ನಾನ್ ಸೆಕ್ಸುವಲ್ ಕಿಸ್. ಕೆಲವು ಸಂದರ್ಭಗಳಲ್ಲಿ, ಇದನ್ನು ಕಾಳಜಿಯನ್ನು ತೋರಿಸುವ ಮಾರ್ಗವೆಂದು ಸಹ ಹೇಳಬಹುದು.

ನಾನ್ ಸೆಕ್ಸುವಲ್ ಕಿಸ್ ಹೆಚ್ಚಾಗಿ ಹತ್ತಿರದ ಸಂಬಂಧಿಕರು ಅಥವಾ ಫ್ರೆಂಡ್ಸ್ ಗೆ ನೀಡಲಾಗುತ್ತೆ. ಆದರೆ, ಈ ರೀತಿಯ ಕಿಸ್ ರೊಮ್ಯಾಂಟಿಕ್ ರಿಲೇಶನ್ ಶಿಪ್ ನಲ್ಲೂ (romantic relationship) ಇರುತ್ತೆ. ಈ ರೀತಿಯ ಕಿಸ್ ರೋಮ್ಯಾಂಟಿಕ್ ಆಗಿರಬಹುದು ಅಥವಾ ಇಲ್ಲದಿರಬಹುದು. ಇದರರ್ಥ ನೀವು ನಿಮ್ಮ ಸಂಗಾತಿಗೆ ಮತ್ತು ಸ್ನೇಹಿತ ಅಥವಾ ಸಂಬಂಧಿಕರಿಗೆ ಈ ಕಿಸ್ ನೀಡಬಹುದು.

ಫಾರ್ಮಲ್ ಕಿಸ್:  ಫಿಲಂಗಳಲ್ಲಿ ನಾಯಕನು ನಾಯಕಿಯ ಕೈಯನ್ನು ಚುಂಬಿಸುವುದನ್ನು ನೀವು ನೋಡಿರೀರಾ ಅಲ್ವ? ಇದು ಬ್ರಿಟಿಷ್ ನಾಗರಿಕತೆಯ ಒಂದು ಭಾಗವಾಗಿದೆ. ಯಾರನ್ನಾದರೂ ಫಾರ್ಮಲ್ ಆಗಿ ಸ್ವಾಗತಿಸುವಾಗ ಈ ರೀತಿಯ ಕಿಸ್ ಮಾಡಲಾಗುತ್ತೆ. ಹೆಚ್ಚಿನ ಸಮಯ, ಹೆಚ್ಚಾಗಿ ಪುರುಷರು ಮಹಿಳೆಗೆ ಈ ರೀತಿ ಕಿಸ್ ಮಾಡ್ತಾರೆ. ಮಹಿಳೆಯರು ಸಹ ಇದನ್ನು ಮಾಡುತ್ತಾರೆ, ಆದರೆ ಮಹಿಳೆಯರು ಯಾರ ಕೈಗೆ ಹೀಗೆ ಕಿಸ್ ಮಾಡ್ತಾರೆ ಅವರ ಸ್ಥಾನವು ಉನ್ನತಮಟ್ಟದ್ದಾಗಿರುತ್ತೆ. 

ಕೇರಿಂಗ್ ಕಿಸ್: ಕೂದಲಿನ ಮೇಲೆ ಅಥವಾ ಹಣೆಯ ಮೇಲೆ ಚುಂಬಿಸುವುದು ಕಾಳಜಿಯನ್ನು ಸೂಚಿಸುತ್ತದೆ. ಇದರರ್ಥ ನೀವು ಇತರ ವ್ಯಕ್ತಿಯ ಬಗ್ಗೆ ಚಿಂತಿತರಾಗಿದ್ದೀರಿ ಮತ್ತು ಅದರ ಮೂಲಕ ನಿಮ್ಮ ಕಾಳಜಿಯನ್ನು ತೋರಿಸುತ್ತಿದ್ದೀರಿ ಎಂದು. ಅನೇಕ ಬಾರಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿರುವಾಗಲೂ ಈ ರೀತಿಯಾಗಿ ಕಿಸ್ ಮಾಡ್ತಾರೆ. ಈ ರೀತಿಯ ಕಿಸ್ ಬಹಳ ಆಳವಾದ ಭಾವನಾತ್ಮಕ ಸಂಬಂಧವನ್ನು ತೋರಿಸುತ್ತದೆ. 

ಕಾಮಪ್ರಚೋದಕ ಚುಂಬನ: ಲೈಂಗಿಕ ಆನಂದವನ್ನು ನಿಡುವ ಯಾವುದೇ ಚುಂಬನವನ್ನು ಎರಾಟಿಕ್ ಕಿಸ್ ಎಂದು ಕರೆಯಲಾಗುತ್ತದೆ. ಈ ರೀತಿಯ ಕಿಸ್ ಫ್ರೆಂಚ್ ಕಿಸ್, ಎಸ್ಕಿಮೊ ಕಿಸ್, ಪೆಕ್ ಕಿಸ್, ನೆಕ್ ಕಿಸ್ ಯಾವುದೇ ಆಗಿರಬಹುದು. ಇದನ್ನು ಯಾವಾಗಲೂ ರೊಮ್ಯಾಂಟಿಕ್ ಕಿಸ್ ಎನ್ನಲಾಗುತ್ತೆ. ಇದನ್ನು ತುಟಿಗಳ ಮೇಲೆ ಮಾಡುವ ಅಗತ್ಯವಿಲ್ಲ. ಗಂಟಲಿನ ಮೇಲೆ ಚುಂಬಿಸುವುದು, ಕಿವಿಯ ಮೇಲೆ ಚುಂಬಿಸುವುದು ಇತ್ಯಾದಿಗಳು ಸಹ ಎರಾಟಿಕ್ ಕಿಸ್ ಗಳಾಗಿವೆ.

Latest Videos

click me!