Happy Fathers Day 2023: ಅಪ್ಪಂದಿರ ದಿನದ ಇತಿಹಾಸ, ಮಹತ್ವದ ಕುರಿತು ಮಾಹಿತಿ

First Published Jun 18, 2023, 8:32 AM IST

ಅಪ್ಪನ ಪ್ರೀತಿ, ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 18ರಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವವೇನು ಎಂಬುದನ್ನು ತಿಳಿಯೋಣ.

ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವು ತುಂಬಾ ವಿಶೇಷವಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಅಪ್ಪ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಈ ವಿಶೇಷ ಸಂಬಂಧವನ್ನು ಆಚರಿಸಲು ಪ್ರತಿ ವರ್ಷ ಜೂನ್‌ 18ರಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. 1910ರಲ್ಲಿ ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಲಾಗಿತ್ತು. 

ತಾಯಂದಿರ ದಿನದಿಂದ ಪ್ರೇರಣೆಗೊಂಡು ಅಪ್ಪಂದಿರ ದಿನದ ಆಚರಣೆಯನ್ನು ಆರಂಭಿಸಲಾಗಿತ್ತು. 1908 ರಿಂದ ಈ ದಿನವನ್ನು ಅಧಿಕೃತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 1914ರಲ್ಲಿ ವುಡ್ರೊ ವಿಲ್ಸನ್‌ ಈ ದಿನದ ಆಚರಣೆಯನ್ನು ಅಧಿಕೃತಗೊಳಿಸಿದರು. 

Latest Videos


ಪ್ರತಿಯೊಬ್ಬರೂ ತಂದೆಯ ದಿನವನ್ನು ಆಚರಿಸುತ್ತಾರೆ, ಆದರೆ ಕೆಲವೇ ಜನರಿಗೆ ಅದರ ಹಿಂದಿನ ಕಾರಣ ತಿಳಿದಿದೆ. ಯುನೈಟೆಡ್​ ಸ್ಟೇಟ್​ನಲ್ಲಿ ಭೀಕರವಾದ ಅಪಘಾತ ನಡೆಯಿತು. 1908 ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಾದರು. ಇಲ್ಲೋರ್ವರ ಮಗಳು ಗ್ರೇಸ್​ ಗೋಲ್ಡನ್​ ಕ್ಲೇಟನ್​, ಅಪಘಾತದಲ್ಲಿ ಮರಣಹೊಂದಿದವರ ನೆನಪಿಗಾಗಿ ಭಾನುವಾರ ಗೌರವ ಸೂಚಿಸಿದರು. 

ಕೆಲವು ವರ್ಷಗಳ ನಂತರ ಸೋನೋರ ಸ್ಮಾರ್ಟ್​ ಡಾಡ್​ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ಅಪ್ಪಂದಿರ ದಿನಾಚರಣೆಯನ್ನು ಪ್ರಾರಂಭಿಸಿದರು. 1972ರಲ್ಲಿ ಅಧ್ಯಕ್ಷ ರಿಚರ್ಡ್​ ನಿಕ್ಸನ್​ ತಂದೆಯ ದಿನಾಚರಣೆ ಆಚರಿಸುವ ಘೋಷಣೆ ಹೊರಡಿಸಿದ ಬಳಿಕ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.

ತಂದೆಯ ದಿನದ ಥೀಮ್ 2023 ಈ ವರ್ಷದ ತಂದೆಯ ದಿನದ ಥೀಮ್ 'ನಮ್ಮ ಜೀವನದ ಶ್ರೇಷ್ಠ ವೀರರನ್ನು ಆಚರಿಸುವುದು'. ಥೀಮ್ ನಮ್ಮ ಜೀವನದಲ್ಲಿ ತಂದೆ ಮತ್ತು ಅವರ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.
 

ತಂದೆಯ ದಿನದ ಪ್ರಾಮುಖ್ಯತೆ ನಿತ್ಯ ನಮ್ಮ ತಂದೆಯೊಂದಿಗೆ ಸಮಯ ಕಳೆಯಬೇಕಾಗಿದ್ದರೂ, ಉದ್ಯೋಗ-ಅಧ್ಯಯನದಂತಹ ಹಲವಾರು ಕಾರಣಗಳಿಂದ ನಮಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ತಂದೆಯ ದಿನವು ಬಹಳ ಮುಖ್ಯವಾಗಿದೆ. ಆದರೆ ನಿಮ್ಮ ತಂದೆಯ ಗೌರವ ಮತ್ತು ತ್ಯಾಗವನ್ನು ನೆನಪಿಸಿಕೊಳ್ಳಲು ಈ ದಿನವು ತುಂಬಾ ವಿಶೇಷವಾಗಿದೆ.
 

ಫಾದರ್ಸ್​ ಡೇ ವರ್ಷದಿಂದ ವರ್ಷಕ್ಕೆ ಬದಲಾಗುತ್ತದೆ. ಹಲವೆಡೆ ಈ ದಿನವನ್ನು ಜೂನ್​ 3ನೇ ಭಾನುವಾರದಂದು ಆಚರಿಸಲಾಗುತ್ತದೆ. ಸ್ಪೇನ್​ ಮತ್ತು ಪೋರ್ಚುಗಲ್​ನಂತಹ ದೇಶಗಳು ಮಾರ್ಚ್​ 19ರಂದು ಸೇಂಟ್​ ಜೋಸೆಫ್​ ದಿನದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ

click me!