ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹೊಸ ಇಂಗಳಿಯ ಅರುಣ ಬಾಮನೆ ಮತ್ತು ಅವರು ಕುಟುಂಬದವರು ಮನೆಯಲ್ಲಿ ಪ್ರೀತಿಯಿಂದ ಸಾಕಿರುವ ಹುಸುವಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು, ವಿಶೇಷತೆ ಮೆರೆದಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂತ ತಮ್ಮ ಮನೆಯಲ್ಲಿ ಮುದ್ದಿನಿಂದ ಸಾಕಿರುವ ಹಸು ತುಂಬು ಗರ್ಭಿಣಿಯಾಗಿದ್ದು, ಹಿಂದೂ ಸಂಪ್ರದಾಯದಂತೆ ಸೀಮಂತ ಮಾಡಲಾಯಿತು.
ಮನೆಯ ಹೆಣ್ಣು ಮಗಳಿಗೆ ಮಾಡುವ ಸೀಮಂತ ಕಾರ್ಯವನ್ನು ಹಸುವಿಗೆ ಮಾಡಿ, ಗ್ರಾಮದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಸುವಿಗೆ ಹಸಿರು ಸೀರೆ ಉಡಿಸಿ, ಹೂವಿನ ಹಾರ ಹಾಕಿ ಶಾಸ್ತ್ರ ಮಾಡಲಾಯಿತು.
ಗ್ರಾಮದ ಎಲ್ಲ ಮುತ್ತೈದೆಯರು ಆಗಮಿಸಿ, ಹಸುವಿಗೆ ವಿಶೇಷ ಪೂಜೆ ಸಲ್ಲಿಸಿ, ನೈವ್ಯದ್ಯ ನೀಡಿ, ಉಡಿ ತುಂಬಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಗ್ರಾಮಸ್ಥರು ಸಾಕ್ಷಿಯಾದರು.
ಇಂಗಳಿ ಗ್ರಾಮದ ಬಾಮನೆ ಕುಟುಂಬದವರಿಂದ ನೆಚ್ಚಿನ ಹಸುವಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಮುತೈದೆಯರು ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದರು. ಆಗಮಿಸಿದ ಎಲ್ಲರಿಗೂ ಬಾಮನೆ ಕುಟುಂಬದವರು ಸಿಹಿ ಭೋಜನೆ ನೀಡಿದ್ದಾರೆ.
ಈ ವೇಳೆ ಆಶೋಕ್ ಬಾಮನೆ, ಮೋಹನ್ ಬಾಮನೆ, ಅರುಣ ಬಾಮನೆ, ಭೀಮಾ ಘೋಸರವಾಡೆ, ಮುರಾರಿ ಬಾಮನೆ, ಪೌರಸ್ ಬಾಮನೆ, ಕಿರಣ ಜತ್ರಾಟೆ, ಧನಂಜಯ್ ಬಾಮನೆ, ಯುವರಾಜ್ ಢೋನವಾಡೆ ಸೇರಿದಂತೆ ಅನೇಕ ಮುಖಂಡರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.