ಲೈಂಗಿಕ ಆರೋಗ್ಯ ಚೆನ್ನಾಗಿರ್ಬೇಕಾ? ಹಾಗಿದ್ರೆ ಈ ಐದು Pಗಳನ್ನು ಮರೆಯಲೇಬೇಡಿ

First Published | Mar 23, 2024, 6:04 PM IST

ಲೈಂಗಿಕ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನೀವು ಈ ಐದು ಪಿ ಗಳ ಬಗ್ಗೆ ನೆನಪಿಟ್ಟುಕೊಳ್ಳೋದು ಮುಖ್ಯ, ಅದಕ್ಕಾಗಿ ನೀವು ಏನ್ ಮಾಡ್ಬೇಕು ಗೊತ್ತಾ? 
 

ಸೆಕ್ಸ್ ಲೈಫ್ (sex life) ಎಂಜಾಯ್ ಮಾಡಬೇಕೂಂದ್ರೆ ಲೈಂಗಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ನಿಮ್ಮ ಲೈಂಗಿಕ ಆರೋಗ್ಯವನ್ನು ನೀವು ನಿರ್ಲಕ್ಷಿಸಿದರೆ, ಅದು ನಿಮ್ಮ ಲೈಂಗಿಕ ಅನುಭವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಸುಲಭ, ನೀವು 5 ಪಿಗಳನ್ನು ಮಾತ್ರ ಅನುಸರಿಸಿದ್ರೆ ಸಾಕು. ಈಗ ನೀವು ಈ 5 ಪಿಗಳು ಯಾವುವು ಎಂದು ಯೋಚಿಸುತ್ತಿರಬಹುದು ಅಲ್ವಾ? ಇಲ್ಲಿದೆ ಆ ಬಗ್ಗೆ ಸಂಪೂರ್ಣ ವಿವರಣೆ. 
 

ಲೈಂಗಿಕ ಆರೋಗ್ಯಕ್ಕಾಗಿ 5 ಪ್ರಮುಖ Pಗಳ ಬಗ್ಗೆ ಇಲ್ಲಿ ತಿಳಿಯಿರಿ 
ಸಂಗಾತಿ (Partner)

ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಪ್ರಮುಖ ಪಾತ್ರವನ್ನು ಹೊಂದಿದ್ದೀರಿ. ನಿಮ್ಮ ಸಂಗಾತಿಯನ್ನು ನೀವು ಚೆನ್ನಾಗಿ ತಿಳಿದುಕೊಳ್ಳುವುದು, ಅವರನ್ನು ನಂಬುವುದು ಮತ್ತು ನಿಮ್ಮಿಬ್ಬರ ನಡುವೆ ಪರಸ್ಪರ ಗೌರವ ಹೊಂದಿರುವುದು ಬಹಳ ಮುಖ್ಯ. ಅದೇ ಸಮಯದಲ್ಲಿ, ನೀವಿಬ್ಬರೂ ನಿಮ್ಮ ಗಡಿಗಳು ಯಾವುವು, ನಿಮ್ಮ ಆಸೆಗಳು ಏನು ಮತ್ತು ನಿಮ್ಮ ಕಾಳಜಿಗಳು ಯಾವುವು ಎಂಬುದನ್ನು ಮುಕ್ತವಾಗಿ ಮಾತನಾಡಬೇಕು. ಗರ್ಭಧಾರಣೆ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮುಕ್ತ ಸಂವಹನ (Free Communication) ನಡೆಯುವುದು ಮುಖ್ಯ.
 

Tap to resize

ಇದಲ್ಲದೆ, ಲೈಂಗಿಕ ಚಟುವಟಿಕೆ (sex activity) ಯಾವಾಗಲೂ ಕ್ರಿಯೇಟಿವ್ ಆಗಿರಬೇಕು, ಆಗ ಮಾತ್ರ ಅದನ್ನು ಎಂಜಾಯ್ ಮಾಡಲು ಸಾಧ್ಯ. ನಿಮ್ಮ ಸಂಗಾತಿಯ ಆರೋಗ್ಯ ಮತ್ತು ಇಬ್ಬರ ನಡುವೆ ಭಾವನಾತ್ಮಕ ಸಂಬಂಧ (Emotional Relationship) ಸಹ ಇದಕ್ಕೆ ಮುಖ್ಯವಾಗಿದೆ. 
 

ಅಭ್ಯಾಸಗಳು (Practices)
ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳಲು, ಸುರಕ್ಷಿತ ಲೈಂಗಿಕ ಅಭ್ಯಾಸಗಳನ್ನು ಅನುಸರಿಸಬೇಕು, ಅಂದರೆ, ಯೋನಿ ಲೈಂಗಿಕತೆಗೆ ಕಾಂಡೋಮ್ ಗಳನ್ನು ಯಾವಾಗಲೂ ಬಳಸಬೇಕು. ನೀವು ಓರಲ್ ಸೆಕ್ಸ್ ನಡೆಸುತ್ತಿದ್ದರೆ, ಅದಕ್ಕಾಗಿ ನೀವು ಡೆಂಟಲ್ ಡ್ಯಾಮ್ ಬಳಸಬೇಕು. ನೀವು ಯಾವುದೇ ವಿಧಾನ ಬಳಸಿದರೂ ಅದು ಸುರಕ್ಷಿತವಾಗಿದೆಯೇ ಅನ್ನೋದನ್ನು ತಿಳಿಯಬೇಕು.

ಆಲ್ಕೋಹಾಲ್ (Alcohol) ಮತ್ತು ಮಾದಕವಸ್ತುಗಳ ಸೇವನೆ ನಂತರ ಲೈಂಗಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿ, ಮತ್ತು ಸೂಜಿ ಹಂಚಿಕೆಯನ್ನು ತಪ್ಪಿಸಿ. ಲೈಂಗಿಕವಾಗಿ ಹರಡುವ ಸೋಂಕುಗಳನ್ನು (Sexually Transmitted Infection) ತಡೆಗಟ್ಟಲು ಪುರುಷ ಮತ್ತು ಸ್ತ್ರೀ ಕಾಂಡೋಮ್ ಎರಡನ್ನೂ ಬಳಸಿ.  
 

ಎಸ್ಟಿಐಗಳಿಂದ ರಕ್ಷಣೆ (Protection from STI)
ಯಾವುದೇ ರೀತಿಯ ಸೆಕ್ಸ್ ಮಾಡೋ ಮುನ್ನ ಪ್ರೊಟೆಕ್ಷನ್ ಬಳಕೆ ಮಾಡೋದನ್ನು ಖಾತರಿಪಡಿಸಿ. ನಿಮ್ಮ ಆಯ್ಕೆಯ ಪ್ರಕಾರ ನೀವು ಯಾವುದೇ ಸುರಕ್ಷಿತ ಪ್ರೊಟೆಕ್ಷನ್ ಬಳಕೆ ಮಾಡಬಹುದು . ವೈದ್ಯರ ಬಳಿ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ, ಸೋಂಕಿನ ತಪಾಸಣೆ ಮಾಡಬಹುದು. ಲೈಂಗಿಕವಾಗಿ ಸಕ್ರಿಯರಾದ ನಂತರ, ನೀವು ಪ್ರತಿ ವರ್ಷ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಅದೇ ಸಮಯದಲ್ಲಿ, ನೀವು ಎಚ್‌ಪಿವಿ ವೈರಸ್ ಮತ್ತು ಗರ್ಭಕಂಠದ ಕ್ಯಾನ್ಸರ್‌ನಿಂದ (Cervical Cancer) ರಕ್ಷಿಸುವ ಎಚ್ ಪಿವಿ ಲಸಿಕೆ ಮತ್ತು ಹೆಪಟೈಟಿಸ್ ಬಿ ಲಸಿಕೆಯಂತಹ ಅಗತ್ಯ ಲಸಿಕೆಯನ್ನು ಸಹ ತೆಗೆದುಕೊಳ್ಳಬೇಕು.

ಹಿಂದಿನ ಇತಿಹಾಸ (Past History)
ಲೈಂಗಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ಇಬ್ಬರೂ ಸಂಗಾತಿಗಳು ಪರಸ್ಪರರ ಎಸ್ಟಿಐ ಇತಿಹಾಸವನ್ನು ತಿಳಿದುಕೊಳ್ಳುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನೀವು ಈ ಹಿಂದೆ ಎಂದಾದರೂ ಟ್ರಾನ್ಸ್ಮಿಟೆಂಟ್ ಸೋಂಕನ್ನು ಹೊಂದಿದ್ದರೆ, ನೀವು ನಿಮ್ಮ ಚಿಕಿತ್ಸೆ ಸರಿಯಾಗಿ ತೆಗೆದುಕೊಳ್ಳಬೇಕು. ಅದೇ ಸಮಯದಲ್ಲಿ, ನೀವು ಹೊಂದಿರುವ ಎಸ್ಟಿಐ ಅನುಭವವನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಮತ್ತು ಅವರ ಹಿಂದಿನ ಆರೋಗ್ಯದ ಬಗ್ಗೆ ದಾಖಲೆ ನೀಡುವಂತೆ ಹೇಳಿ. 

ನಿಮ್ಮ ಸ್ಥಿತಿಯ ಬಗ್ಗೆ ನೀವು ಪ್ರಾಮಾಣಿಕವಾಗಿ ನಿಮ್ಮ ಸಂಗಾತಿಗೆ ಹೇಳಬೇಕು ಮತ್ತು ನೀವಿಬ್ಬರೂ ನಿಯಮಿತ ಪರೀಕ್ಷೆಗಳನ್ನು ಮಾಡಬೇಕು. ಇದರೊಂದಿಗೆ, ಲೈಂಗಿಕತೆಯ ಸಮಯದಲ್ಲಿ ಪ್ರೊಟೆಕ್ಷನ್ ಬಳಕೆ ಮಾಡಬೇಕು. ಹಿಂದಿನ ಆರೋಗ್ಯ ಇತಿಹಾಸದ ಬಗ್ಗೆ ತಿಳಿದರೆ, ಸೆಕ್ಸ್ ಲೈಫ್ ಚೆನ್ನಾಗಿರುತ್ತೆ. 

ಗರ್ಭಧಾರಣೆಯ ಉದ್ದೇಶ (Pregnancy Intention)
ಲೈಂಗಿಕ ಆರೋಗ್ಯಕ್ಕೆ ಗರ್ಭಧಾರಣೆಯ ಯೋಜನೆ ಮುಖ್ಯ. ಗರ್ಭಧಾರಣೆಯ ಉದ್ದೇಶವನ್ನು ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ. ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡುವಾಗ ನಿಮ್ಮ ಭಾವನಾತ್ಮಕ ಸ್ಥಿತಿ ಏನು, ಆರ್ಥಿಕ ಪರಿಸ್ಥಿತಿ ಏನು, ನಿಮ್ಮ ಸಂಬಂಧದ ಸ್ಥಿರತೆ ಏನು ಮತ್ತು ಇದು ವೈಯಕ್ತಿಕ ಆಯ್ಕೆಯಂತಹ ಕೆಲವು ಅಂಶಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ.  

ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡುವ ಮೊದಲು ಯಾವಾಗಲೂ ಪೂರ್ವಭಾವಿ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಮತ್ತು ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳಿ, ಜೊತೆಗೆ ವೈದ್ಯರ ಸಲಹೆಯೊಂದಿಗೆ ಮಾತ್ರ ಗರ್ಭಧಾರಣೆಯನ್ನು ಪ್ಲ್ಯಾನ್ ಮಾಡಿ. ಗರ್ಭಧಾರಣೆಯ ಉದ್ದೇಶದಿಂದ ನೀವು ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರೆ, ನಿಮ್ಮ ಫರ್ಟಿಲಿಟಿ ಪಿರಿಯಡ್ (Fertility Periond) ಯಾವುದು ಎಂದು ನೀವು ತಿಳಿದುಕೊಳ್ಳಬೇಕು. ಆ ಸಮಯದಲ್ಲಿ ಸಂಬಂಧ ಹೊಂದುವುದರಿಂದ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚುತ್ತವೆ, ಮತ್ತು ಕೆಲವೊಮ್ಮೆ ಒತ್ತಡ ಮತ್ತು ಆತಂಕದಿಂದಾಗಿ  ಪ್ರೆಗ್ನೆಂಟ್ ಆಗೋದಿಲ್ಲ. ಹಾಗಾಗಿ ಈ ಬಗ್ಗೆ ಗಮನ ಹರಿಸಿ. 
 

Latest Videos

click me!