ಸೆಕ್ಸ್ ಮೇಲೆ ಆಸಕ್ತಿಯೇ ಮೂಡದಿರಲು ಇವೆಲ್ಲಾ ಕಾರಣಗಳು

First Published Mar 23, 2024, 5:50 PM IST

ಉತ್ತಮ ಲೈಂಗಿಕ ಜೀವನಕ್ಕೆ ಲೈಂಗಿಕ ಬಯಕೆ ಅಥವಾ ಸೆಕ್ಸುವಲ್ ಡಿಸೈರ್ ತುಂಬಾನೆ ಮುಖ್ಯ. ಆದರೆ ಕಾಲಾನಂತರದಲ್ಲಿ ಹೆಚ್ಚಿನ ಜನರು ಲೈಂಗಿಕ ಬಯಕೆಯ ಕೊರತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಸುತ್ತಲಿನ ಈ 6 ವಿಷಯಗಳು ಇದಕ್ಕೆ ಕಾರಣವಾಗಬಹುದು.
 

ಒಬ್ಬರ ಲೈಂಗಿಕ ಜೀವನ (sex life) ಚೆನ್ನಾಗಿರಬೇಕು ಅಂದ್ರೆ ಅವರ ಜೀವನದಲ್ಲಿ ಗೌರವ, ಸುರಕ್ಷತೆ ಮತ್ತು ತಾರತಮ್ಯ ಮತ್ತು ಹಿಂಸೆಯಿಂದ ಮುಕ್ತ ಲೈಂಗಿಕತೆ ಅತ್ಯಗತ್ಯ. ಲೈಂಗಿಕ ಆರೋಗ್ಯವು ವ್ಯಕ್ತಿಯ ಇಡೀ ಜೀವನದ ಮೇಲೆ ಪರಿಣಾಮ ಬೀರಬಹುದು. ಇದು ಸಂತಾನೋತ್ಪತ್ತಿ ವರ್ಷಗಳಲ್ಲಿ ಮಾತ್ರವಲ್ಲ, ಯುವಕರು ಮತ್ತು ವೃದ್ಧರು ಇಬ್ಬರಿಗೂ ಅವಶ್ಯಕ. ಉತ್ತಮ ಲೈಂಗಿಕ ಜೀವನಕ್ಕಾಗಿ ಲೈಂಗಿಕ ಬಯಕೆ ಅಥವಾ ಕಾಮಾಸಕ್ತಿಯನ್ನು ಹೊಂದಿರುವುದು ಮುಖ್ಯ. ಆದರೆ ಲೈಂಗಿಕ ಬಯಕೆಗೆ ಅಡ್ಡಿಯಾಗುವ ಕೆಲವು ಅಂಶಗಳಿವೆ. ಇವು ಕಾಮಾಸಕ್ತಿಯನ್ನು ಕೊಲ್ಲುತ್ತವೆ ಮತ್ತು ವ್ಯಕ್ತಿಯ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ.
 

ಲೈಂಗಿಕ ಬಯಕೆ ಎಂದರೇನು?
ಇಡೀ ದೇಹದ ಆರೋಗ್ಯವನ್ನು ರಕ್ಷಿಸಲು ಮತ್ತು ಸಂಗಾತಿಗಳ ನಡುವೆ ಸಕಾರಾತ್ಮಕ ಸಂಬಂಧವನ್ನು ಬೆಳೆಸಲು ದೀರ್ಘಕಾಲೀನ ಆರೋಗ್ಯಕ್ಕೆ ಲೈಂಗಿಕ ಆರೋಗ್ಯ (sexual health) ರಕ್ಷಣೆ ಅತ್ಯಗತ್ಯ. ಲೈಂಗಿಕ ಬಯಕೆ ಅಥವಾ ಕಾಮಾಸಕ್ತಿ ಎಂದರೆ ಲೈಂಗಿಕ ಪ್ರಚೋದನೆ ಅಥವಾ ಲೈಂಗಿಕ ಬಯಕೆಯನ್ನು ಹೊಂದಿರುವುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ವ್ಯಕ್ತಿಯ ಆದ್ಯತೆಗಳು ಮತ್ತು ಜೀವನದ ಸಂದರ್ಭಗಳನ್ನು ಅವಲಂಬಿಸಿ ಇದು ಬದಲಾಗಬಹುದು. ಲೈಂಗಿಕ ಬಯಕೆಯು ವೈದ್ಯಕೀಯ ಪರಿಸ್ಥಿತಿಗಳು, ಹಾರ್ಮೋನ್ ಲೆವೆಲ್, ಔಷಧಿಗಳು (Medicines), ಜೀವನಶೈಲಿ (Lifestyle) ಮತ್ತು ಸಂಬಂಧದ ಸಮಸ್ಯೆಗಳಿಂದ (Relationship Issues) ಪ್ರಭಾವಿತವಾಗಬಹುದು.

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ 6 ಸೆಕ್ಸ್ ಡ್ರೈವ್ ಕಿಲ್ಲರ್ ಗಳ ಬಗ್ಗೆ ತಿಳಿಯೋಣ
ಒತ್ತಡವು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುತ್ತದೆ

ಕೆಲವರು ಹೆಚ್ಚನ ಒತ್ತಡವನ್ನು (stress)ಅನುಭವಿಸುತ್ತಾರೆ. ಈ ಒತ್ತಡವೂ ಕೂಡ ಲೈಂಗಿಕ ಬಯಕೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಮನೆ ಕೆಲಸ ಅಥವಾ ಸಮಸ್ಯೆಗಳಿಂದ ಒತ್ತಡ, ಆರ್ಥಿಕ ಒತ್ತಡ, ಕೆಲಸದ ಒತ್ತಡ, ಸಂಬಂಧದಲ್ಲಿನ ಒತ್ತಡ ಇವೆಲ್ಲವೂ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಬೀರುತ್ತೆ. ಅದನ್ನು ಆರೋಗ್ಯಕರ ರೀತಿಯಲ್ಲಿ ನಿರ್ವಹಿಸುವುದು ಮತ್ತು ನಿರ್ವಹಿಸಲು ಕಲಿಯುವುದು ಉತ್ತಮ. ಲೈಂಗಿಕ ಬಯಕೆಯನ್ನು ಹೆಚ್ಚಿಸಲು ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ.  ಇದಕ್ಕಾಗಿ ನಾವು ವೈದ್ಯಕೀಯ ಸಲಹೆಯನ್ನು ಸಹ ಪಡೆಯಬಹುದು.

ಸಂಗಾತಿ ಸಮಸ್ಯೆ
ಸಂಗಾತಿಯೊಂದಿಗಿನ ಸಮಸ್ಯೆ ಸೆಕ್ಸ್ ಡ್ರೈವ್ ಹಾಳು ಮಾಡುವ ಪ್ರಮುಖ ಕಾರಣಗಳಲ್ಲೊಂದು. ಮಹಿಳೆಯರಿಗೆ, ಲೈಂಗಿಕ ಬಯಕೆಗೆ ಸಂಗಾತಿಯೊಂದಿಗೆ ಇಂಟಿಮೇಟ್ ಆಗಿರೋದು ಬಹಳ ಮುಖ್ಯ. ಜಗಳ, ಸರಿಯಾಗಿ ಮಾತುಕತೆ ಇಲ್ಲದೆ ಇರೋದು, ಮೋಸ ಅಥವಾ ಮೋಸದ ಭಾವನೆ ಎರಡೂ ಸಹ ಲೈಂಗಿಕ ಬಯಕೆಯನ್ನು ಕೊಲ್ಲುತ್ತದೆ. ನಿಮ್ಮಿಬ್ಬರ ನಡುವೆ ಸಮಸ್ಯೆ ಇದ್ದರೆ, ಮತ್ತೆ ಹಳಿಗೆ ಮರಳುವುದು ಕಷ್ಟ. ಇದಕ್ಕಾಗಿ, ವೈದ್ಯರು ಅಥವಾ ಚಿಕಿತ್ಸಕರನ್ನು ಸಂಪರ್ಕಿಸುವುದು ಅವಶ್ಯಕ.

ಆಲ್ಕೋಹಾಲ್ ಸೆ
ಆಲ್ಕೋಹಾಲ್ (alcohol intake) ಅನೇಕ ಆರೋಗ್ಯ ಸಮಸ್ಯೆಗಳಿಗೆ ನೇರವಾಗಿ ಕಾರಣವಾಗಿದೆ. ಡ್ರಿಂಕ್ಸ್ ಮಾಡೋದರಿಂದ ಖಂಡಿತವಾಗಿಯೂ ನಿಮ್ಮನ್ನು ಲೈಂಗಿಕತೆಗೆ ಹೆಚ್ಚು ಮುಕ್ತವಾಗಿಸುತ್ತದೆ. ಆದರೆ ಅತಿಯಾದ ಆಲ್ಕೋಹಾಲ್ ಸೆಕ್ಸ್ ಡ್ರೈವ್ ಅನ್ನು ನಾಶಪಡಿಸುತ್ತದೆ. ಕುಡಿದಿರುವುದು ಸಂಗಾತಿಗೆ ಸಮಸ್ಯೆಯಾಗಬಹುದು.  ಹಾಗಾಗಿ ಆಲ್ಕೋಹಾಲ್ ಕುಡಿಯೋ ಚಟವನ್ನು ಬಿಡಿಸಲು ಪ್ರಯತ್ನಿಸಿ.

ಅನಾರೋಗ್ಯಕರ ನಿದ್ರೆ 
ಒತ್ತಡದಿಂದಾಗಿ ನಿಮಗೆ ಸಾಕಷ್ಟು ನಿದ್ರೆ ಸಿಗದಿರುವ (sleeplessness) ಸಾಧ್ಯತೆಯಿದೆ. ನೀವು ತುಂಬಾ ತಡವಾಗಿ ಮಲಗುತ್ತೀರಾ ಅಥವಾ ಬೇಗನೆ ಎಚ್ಚರಗೊಳ್ಳುತ್ತೀರಾ? ನಿದ್ರೆಯ ತೊಂದರೆ ಅಥವಾ ನಿದ್ರಾಹೀನತೆ, ಅಥವಾ ಸ್ಲೀಪ್ ಅಪ್ನಿಯಾದಂತಹ ಸ್ಥಿತಿಯಂತಹ ಸಮಸ್ಯೆಗಳಿವೆಯೇ? ರಾತ್ರಿಯ ಗಾಢ ನಿದ್ರೆಯನ್ನು ಹಾಳುಮಾಡುವ ಯಾವುದೇ ವಿಷಯವು ಲೈಂಗಿಕ ಬಯಕೆಯನ್ನು ಸಹ ಹಾಳುಮಾಡುತ್ತದೆ. ಆಯಾಸವು ಲೈಂಗಿಕ ಭಾವನೆಗಳನ್ನು ಕೊಲ್ಲುತ್ತದೆ. ನಿಮ್ಮ ನಿದ್ರೆಯ ಅಭ್ಯಾಸವನ್ನು ಸರಿ ಮಾಡಿ. ಇದು ಸಹಾಯ ಮಾಡದಿದ್ದರೆ, ವೈದ್ಯರೊಂದಿಗೆ ಮಾತನಾಡಿ.

ಮಗುವಿನ ಪರಿಣಾಮ
ಪೋಷಕರಾದ ನಂತರ ಸೆಕ್ಸ್ ಡ್ರೈವ್ ಕೊನೆಗೊಳ್ಳುವುದಿಲ್ಲ. ಪೋಷಕರ ದಿನಚರಿ ಖಂಡಿತವಾಗಿಯೂ ಸೆಕ್ಸ್ ಡ್ರೈವ್ ಮೇಲೆ ಪರಿಣಾಮ ಬೀರಬಹುದು. ಅವರ ನಿದ್ರೆಯ ಸಮಯವು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರಬಹುದು. ನೀವು ಅದನ್ನು ನಿಮ್ಮದೇ ಆದ ರೀತಿಯಲ್ಲಿ ನಿರ್ವಹಿಸಬಹುದು. ಮಗುವಿನ ಕಿರು ನಿದ್ದೆಯ ಸಮಯದಲ್ಲಿ ಲೈಂಗಿಕತೆಯನ್ನು ಪ್ರಯತ್ನಿಸಬೇಕು.

ಔಷಧವು ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ
ಕೆಲವು ಔಷಧಿಗಳು ಲೈಂಗಿಕ ಬಯಕೆಯನ್ನು ಕಡಿಮೆ ಮಾಡಬಹುದು. ಮುಖ್ಯವಾಗಿ ಇಲ್ಲಿ ನೀಡಿರುವ ಔಷಧಿಗಳು
ಖಿನ್ನತೆ ನಿವಾರಕ
ರಕ್ತದೊತ್ತಡದ ಔಷಧಿಗಳು (Blood Pressure Medicines)
ಜನನ ನಿಯಂತ್ರಣ ಮಾತ್ರೆಗಳು (Contraceptive Medicines)
ಕೀಮೋಥೆರಪಿ (Chemotherapy)
HIV ವಿರೋಧಿ ಔಷಧಿಗಳು
ಫಿನಾಸ್ಟರೈಡ್
 

click me!