ಮೆಕ್ಸಿನ್ ಮಾಡೆಲ್ ಜೊತೆ ಜೊಮೆಟೋ ಸಿಇಒ ದೀಪಿಂದರ್ 2ನೇ ಮದುವೆ, ಭಾರತ ನನ್ನ ತವರು ಎಂದ ನಟಿ!

First Published | Mar 22, 2024, 1:46 PM IST

ಜೊಮೆಟೋ ಆನ್‌ಲೈನ್ ಫುಡ್ ಡೆಲವರಿ ಮೂಲಕ ಅತೀದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿರುವ ಸಿಇಒ ದೀಪಿಂದರ್ ಗೋಯಲ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಸಸ್ಯಾಹಾರಿಗಳಿಗೆ ವಿಶೇಷ ಫ್ಲೀಟ್ ಆರಂಭಿಸಿದ ದೀಪಿಂದರ್ ಇದೀಗ ಮೆಕ್ಸಿಕನ್ ಮಾಡೆಲ್ ಜೊತೆ 2ನೇ ಮದುವೆಯಾಗಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಇದಕ್ಕೆ ಇವರಿಬ್ಬರ ಸಾಮಾಜಿಕ ಮಾಧ್ಯಮ ಖಾತೆ ಪುಷ್ಠಿ ನೀಡುತ್ತಿದೆ.
 

ಜೊಮೆಟೋ ಫುಡ್ ಡೆಲಿವರಿ ಆ್ಯಪ್ ಸಿಇಒ ದೀಪಿಂದರ್ ಗೋಯಲ್ 2ನೇ ಮದುವೆಯಾಗಿದ್ದಾರೆ. 41 ವರ್ಷದ ಗೊಯೆಲ್ ಮೆಕ್ಸಿಕೋ ಮಾಡೆಲ್, ಉದ್ಯಮಿ ಗ್ರೇಸಿಯಾ ಮುನೋಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ.
 

ಇತ್ತೀಚೆಗೆ ಸಸ್ಯಾರಿ ಫ್ಲೀಟ್ ಡೆಲಿವರಿ ಆರಂಭಿಸಿ ಭಾರಿ ಸಂಚಲನ ಸೃಷ್ಟಿಸಿದ ದೀಪಿಂದರ್ ಗೋಯಲ್ ಸೈಲೆಂಟ್ ಆಗಿ 2ನೇ ಮದುವೆ ಮಾಡಿಕೊಂಡಿದ್ದಾರೆ. ಇದೀಗ ಈ ಮಾಹಿತಿ ಹೊರಬಂದಿದೆ.
 

Tap to resize

ಮೂಲಗಳ ಪ್ರಕಾರ ಗೋಯೆಲ್ ಹಾಗೂ ಗ್ರೇಸಿಯಾ ಫೆಬ್ರವರಿ ತಿಂಗಳಲ್ಲಿ ಮದುವೆಯಾಗಿ ಹನಿಮೂನ್ ಕೂಡ ಮುಗಿಸಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ.
 

ಈ ಕುರಿತು ದೀಪಿಂದರ್ ಗೋಯಲ್ ಅಥವಾ ಗ್ರೇಸಿಯಾ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲೂ ಪ್ರಕಟಿಸಿಲ್ಲ. ಆದರೆ ಕೆಲ ಸೂಚನೆಗಳನ್ನು ನೀಡಿದ್ದಾರೆ.
 

ಗ್ರೇಸಿಯಾ ಮುನೋಜ್ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ, ಹುಟ್ಟಿದ್ದು ಮೆಕ್ಸಿಕೋದಲ್ಲಿ, ಇದೀಗ ಭಾರತದ ನನ್ನ ತವರು ಎಂದು ಬದಲಾಯಿಸಿದ್ದಾರೆ. 
 

ದೆಹಲಿಯ ಕುತುಬ್ ಮಿನಾರ್, ಕೆಂಪು ಕೋಟೆಗೆ ಸೇರಿದಂತೆ ಹಲವು ಸ್ಥಳಗಳಿಗೆ ಬೇಟಿ ನೀಡಿರುವ ಗ್ರೇಸಿಯಾ, ದಿಲ್ಲಿ ದರ್ಶನ, ನನ್ನ ಹೊಸ ಮನೆಯ, ಹೊಸ ಜೀವನದ ನೋಟಗಳು ಎಂದು ಬರೆದುಕೊಂಡಿದ್ದಾರೆ. 
 

ಮೆಕ್ಸಿಕೋದಲ್ಲಿ ಹುಟ್ಟಿ ಮಾಡೆಲ್ ಆಗಿ ಭಾರಿ ಜನಪ್ರಿಯವಾಗಿರುವ ಗ್ರೇಸಿಯಾ ಇದೀಗ ಐಷಾರಾಮಿ ಗ್ರಾಹಕ ಉತ್ಪನ್ನ ಉದ್ಯಮ ಆರಂಭಿಸಿ ಮೆಕ್ಸಿಕೋದಲ್ಲಿ ಪ್ರಭಾವಿ ಮಹಿಳೆ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
 

deepinder goyal

ಐಐಟಿ ದೆಹಲಿಯಲ್ಲಿ ವ್ಯಾಸಾಂಗದ ವೇಳೆ ಆಪ್ತರಾಗಿದ್ದ ಕಾಂಚನ್ ಜೋಶಿಯನ್ನು ಮದುವೆಯಾಗಿದ್ದ, ದೀಪಿಂದರ್ ಗೋಯಲ್ ಬಳಿಕ ವಿಚ್ಚೇದನ ಪಡೆದಿದ್ದರು. ಇದೀಗ ಗ್ರೇಸಿಯಾ ಜೊತೆ 2ನೇ ಮದುವೆಯಾಗಿದ್ದಾರೆ.
 

Latest Videos

click me!