ಶ್...ಗಂಡನೊಟ್ಟಿಗೆ ಸಂಬಂಧ ಚೆನ್ನಾಗಿರ್ಬೇಕಂದ್ರೆ ಈ ಗುಟ್ಟನ್ನು ಅಪ್ಪಿತಪ್ಪಿಯೂ ಹೇಳ್ಬೇಡಿ!

First Published | Dec 1, 2023, 5:25 PM IST

ನೀವು ನಿಮ್ಮ ಸಂಗಾತಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರೂ, ನಿಮ್ಮಿಬ್ಬರ ನಡುವೆ ಯಾವುದೇ ಮುಚ್ಚುಮರೆ ಇಲ್ಲದಿದ್ದರೂ, ಕೆಲವೊಂದು ವಿಷಯಗಳನ್ನು ನಿವು ಸಂಗಾತಿಯಿಂದ ಮುಚ್ಚಿಡಲೇಬೇಕು. ಅಂತಹ ವಿಷಯಗಳು ಯಾವುವು? ಅಷ್ಟಕ್ಕೂ ಹೇಳಿ ಕೊಂಡರೆ ಆಗುವುದೇನು? ಹೇಗೆ ಇನ್ನೊಬ್ಬರ ಭಾವನೆಗೆ ಹಾಗೂ ಅಹಂಗೆ ಚ್ಯುತಿ ಬರುತ್ತೆ?

ನಿಮ್ಮ ಥೆರಪಿ ಸೆಶನ್ (Therapy Session) ಬಗ್ಗೆ
ಕಪಲ್ ಥೆರಪಿ (couple therapy) ಬದಲಾಗಿ, ಪರ್ಸನಲ್ ಥೆರಪಿ ಮಾತ್ರ ಮಾಡೋದಕ್ಕೆ ಹಲವಾರು ಕಾರಣಗಳಿವೆ. ನಿಮ್ಮ ಸಂಬಂಧ ಚೆನ್ನಾಗಿರಬೇಕು ಅನ್ನೋದಾದ್ರೆ ನಿಮ್ಮ ಪರ್ಸನಲ್ ಥೆರಪಿ ಬಗ್ಗೆ ಸಂಗಾತಿಗೆ ಹೇಳದೇ ಇದ್ದರೆ ಉತ್ತಮ. ಇದು ನಿಮ್ಮ ಮತ್ತು ಥೆರಪಿಸ್ಟ್ ನಡುವೆ ಇರೋದು ಬೆಸ್ಟ್. 

ಸಂಗಾತಿ ದೇಹದಲ್ಲಿ ನಿಮಗೆ ಇಷ್ಟವಾಗದ ವಿಷಯಗಳ ಬಗ್ಗೆ
ಒಂದು ವೇಳೆ ನೀವು ಸಂಗಾತಿಗೆ ಅವರ ದೇಹದಲ್ಲಿ ನಿಮಗೆ ಇಷ್ಟವಾಗದೇ ಇರುವ ವಿಷಯಗಳ ಬಗ್ಗೆ ಹೇಳಿದ್ರೆ, ಅದರಿಂದ ಸಂಗಾತಿಗೆ ನಿಮ್ಮ ಜೊತೆ ಮುಕ್ತವಾಗಿ ಬೆರೆಯಲು ಭಯ ಅಥವಾ ಮುಜುಗರ ಕಾಡಬಹುದು. ಇದರಿಂದ ಸಂಬಂಧಕ್ಕೆ ತೊಂದರೆಯಾಗುತ್ತೆ. 

Latest Videos


ಕೆಲಸದ ಕುರಿತಾದ ಕೆಲವೊಂದು ಮಹತ್ವದ ಮಾಹಿತಿ
ಕಛೇರಿಯಲ್ಲಿ ಕೆಲವೊಂದು ನಿಯಮಗಳು ಮತ್ತು ಮಹತ್ವದ ಮಾಹಿತಿಗಳು ಇರುತ್ತವೆ. ಅಂತಹ ಕೆಲವೊಂದು ಆಫೀಸಿನಿಂದ ಹೊರಗಡೆ ಯಾರ ಜೊತೆಯೂ ಶೇರ್ ಮಾಡಬಾರದು ಎಂಬ ನಿಯಮ ಇದೆ. ಅಂತಹ ವಿಷಯಗಳನ್ನು (work secrets) ನಿಮ್ಮ ಸಂಗಾತಿ ಜೊತೆ ಸಹ ಶೇರ್ ಮಾಡೋದು ತಪ್ಪು. 

ಸೆಕ್ಸ್ ಚಟುವಟಿಗಳನ್ನು ಹೋಲಿಸಬೇಡಿ 
ಸಂಗಾತಿ ಸದ್ಯ ನಿಮ್ಮ ಜೊತೆ ಇದ್ದಾರೆ ಎಂದರೆ ಅದಕ್ಕೊಂದು ಕಾರಣ ಇದ್ದೆ ಇದೆ ಅಲ್ವಾ? ಎಲ್ಲರೂ ಬೆಡ್ ಅಲ್ಲಿ ಒಂದೇ ತರ ಇರೋದಿಕ್ಕೆ ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ರೊಮ್ಯಾಂಟಿಕ್ (romantic) ಆಗಿರುತ್ತಾರೆ. ಹಾಗಾಗಿ ಹೋಲಿಕೆ ಮಾಡಿ, ಸಂಬಂಧ ದೂರ ಆಗುವಂತೆ ಮಾಡಬೇಡಿ. 

ಅಸಮಾಧಾನಕರ ಆಲೋಚನೆಗಳು
ಸಂಗಾತಿ ಬಗ್ಗೆ ನಿಮಗೆ ಸಮಾಧಾನ ಇಲ್ಲದೇ ಇದ್ದರೆ, ಅದರ ಬಗ್ಗೆ ಅವರ ಬಳಿ ಹೇಳಬೇಡಿ. ನಿಮಗೂ ಆ ಆಲೋಚನೆಗಳು ಹಿಂಸೆ ನೀಡುತ್ತಿವೆ ಅನ್ನೋದಾದ್ರೆ ಮಾತ್ರ ಅವರಿಗೆ ತಿಳಿಸಿ. ಆದರೆ ಕೋಪದಲ್ಲಿ ಮಾತ್ರ ಹೇಳಬೇಡಿ, ಸಮಾಧಾನವಾಗಿ ಯಾಕೆ ಸಂಗಾತಿ ಮೇಲೆ ಅಸಮಾಧಾನ ಇದೆ ಅನ್ನೋದನ್ನು ತಿಳಿಸಿ,

ಹಳೆಯ ಸಂಬಂಧ (old relationship)
ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಮುಗಿದು ಹೋದ ಅಧ್ಯಾಯ (Closed Chapter) ಅಥವಾ ಹಳೆಯ ಪ್ರೇಮ ಕಥೆ ಇದ್ದೇ ಇರುತ್ತೆ. ಕೆಲವರು ಒಂದು ರಿಲೇಶನ್ ನಲ್ಲಿದ್ದರೆ, ಮತ್ತೆ ಕೆಲವರು ಹಲವು ರಿಲೇಶನ್ ಶಿಪ್ ನಲ್ಲಿ ಇರುತ್ತಾರೆ. ಅದಕ್ಕೆ ಅದರದೇ ಆದ ಕಾರಣಗಳೂ ಇರುತ್ತವೆ. ಆದರೆ ಈಗ ಯಾರು ನಿಮ್ಮ ಜೊತೆ ಇರುತ್ತಾರೋ ಅದೇ ಮುಖ್ಯ. ಹಳೆ ಸಂಬಂಧದ ಬಗ್ಗೆ ಮಾತನಾಡೋದು ಬೇಡ. 

ಪಾಸ್ ವರ್ಡ್ (Password), ಪಿನ್ ಗಳನ್ನು ನೀಡೋದು
ಎಲ್ಲವನ್ನೂ ಸಂಗಾತಿಯಿಂದ ಮುಚ್ಚಿಡಲೇಬೇಕು ಎಂದು ನಾವು ಹೇಳೊದಿಲ್ಲ. ಆದರೆ ಸಂಬಂಧದಲ್ಲಿ ನಿಮ್ಮದೇ ಆದ ಗಡಿಗಳು ಇರುತ್ತವೆ. ಹಾಗಾಗಿ ಸೋಶಿಯಲ್ ಮೀಡೀಯಾ ಪಾಸ್ ವರ್ಡ್, ಎಟಿಎಂ ಪಿನ್ ಗಳನ್ನುನೀಡೋದು ಬೇಡ.

ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬದವರಿಗೆ ನಿಮ್ಮ ಸಂಗಾತಿ ಇಷ್ಟವಾಗದೇ ಇದ್ದರೆ
ಎಲ್ಲರಿಗೂ ಎಲ್ಲರೂ ಇಷ್ಟವಾಗಬೇಕೆಂದೇನೂ ಇಲ್ಲ, ಒಂದು ವೇಳೆ ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ನಿಮ್ಮ ಸಂಗಾತಿ ಇಷ್ಟವಾಗದೇ ಇದ್ದರೆ, ಅದನ್ನು ಅವರ ಬಳಿ ಹೇಳಬೇಡಿ. ಬದಲಾಗಿ ಸಂಗಾತಿ ಮುಂದೆ ತಾಳ್ಮೆಯಿಂದ ನಡೆದುಕೊಳ್ಳುವಂತೆ ಸ್ನೇಹಿತರಿಗೆ ತಿಳಿಸಿ. ಇಲ್ಲವಾದರೆ ಸಂಬಂಧದಲ್ಲಿ ಬಿರುಕು ಮೂಡಬಹುದು. 
 

click me!