ಪ್ರೀತಿಸಿದವರು ಕೈ ಕೊಟ್ಟು ಹೋದರೆ, ಬದುಕು ಕಟ್ಟಿ ಕೊಳ್ಳಲು ಇಲ್ಲಿವೆ ಸೊಲ್ಯೂಷನ್ಸ್

First Published | Nov 30, 2023, 2:53 PM IST

ಜಗತ್ತಿನ ಶೇಷ್ಠ ಪ್ರೀತಿ ನಮ್ಮದೇ ಎನ್ನುವಂತೆ, ಪ್ರೀತಿಸಿದವರು ನಿಮ್ಮನ್ನು ಬಿಟ್ಟು ಹೋಗಿ, ನಿಮ್ಮ ಪ್ರೀತಿಗೆ ಮೋಸ ಮಾಡಿದಾಗ, ಉಂಟಾಗುವ ನೋವು ಅಷ್ಟಿಷ್ಟಲ್ಲ. ಈ ನೋವಲ್ಲೇ ಜೀವನ ಸಾಗಿಸುವ ಬದಲಾಗಿ, ಆ ನೋವಿನಿಂದ ಹೊರ ಬರೋದು ಮುಖ್ಯ. 
 

ಅವನೇ ಅಥವಾ ಅವಳೇ ನನ್ನ ಪ್ರಪಂಚ ಎಂದು ಪ್ರಿತಿಸಿದ ಹುಡುಗ ಕೈಕೊಟ್ಟು ಹೋದಾಗ ಆಗುವ ನೋವಿಗಿಂತ ದೊಡ್ಡ ನೋವು ಇನ್ನೊಂದಿಲ್ಲ. ಆದರೆ ಯಾರಾದ್ರೂ ನಮ್ಮನ್ನು ಬಿಟ್ಟು ಹೋದರೆ ಜೀವನ ನಿಲ್ಲೋದಿಲ್ಲ, ನಿಮ್ಮ ದುಃಖವನ್ನು ಕಂಟ್ರೋಲ್ ಮಾಡೋ ಮೂಲಕ ನೀವು ಜೀವನದಲ್ಲಿ ಮುಂದುವರಿಯಬೇಕು. ಆದರೆ ಮುಂದುವರಿಯೋದು ಸುಲಭವಲ್ಲ. ಆದರೆ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಬ್ರೇಕ್ ಅಪ್ (breakup pain) ನೋವಿನಿಂದ ಹೊರ ಬರಬಹುದು. 
 

ಪ್ರತಿಯೊಬ್ಬ ವ್ಯಕ್ತಿಯೂ ತಾನು ಪ್ರೀತಿಸುವ ಜೀವ ಯಾವಾಗಲೂ ತನ್ನೊಂದಿಗೆ ಇರಬೇಕು ಎಂದು ಬಯಸುತ್ತಾರೆ. ಪ್ರತಿಯೊಂದು ತೊಂದರೆಯ ವಿರುದ್ಧ ಹೋರಾಡುವ ಮೂಲಕ ಮತ್ತು ದುಃಖದಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಯಿಂದ ಬದುಕುವ ಜೀವ ಜೊತೆಯಾಗಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಆದರೆ ಪ್ರೀತಿಸಿದವರ ಜೊತೆ ಎಲ್ಲಾರೂ, ಎಲ್ಲಾ ಕ್ಷಣದಲ್ಲೂ ಸಂತೋಷವಾಗಿರಲು ಸಾಧ್ಯಾನ? ಇಲ್ಲ. ಏಕೆಂದರೆ ಜೀವನದಲ್ಲಿ ಎಲ್ಲವನ್ನೂ ನಾಶಮಾಡುವ ಕ್ಷಣಗಳೂ ಬರುತ್ತವೆ. ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೀತಿ ಮತ್ತು ಸಂಬಂಧವು ನಿಮಿಷಗಳಲ್ಲಿ ಮರಳಿನ ಕೋಟೆಯಂತೆ ಕುಸಿಯುತ್ತದೆ. ಇಲ್ಲಿಯವರೆಗೆ ನಾವು ಜಗತ್ತನ್ನು ಮರೆತು ಬದುಕುತ್ತಿದ್ದ ವ್ಯಕ್ತಿಯನ್ನು ಮರೆತು ಮುಂದೆ ಸಾಗಬೇಕು.
 

Latest Videos


ಜೀವನದಲ್ಲಿ ಮುಂದೆ ಸಾಗಬೇಕು ಅಂದ್ರೆ, ಬ್ರೇಕ್ ಅಪ್ ನೋವನ್ನು ಮರೆತು ಮುಂದೆ ಸಾಗಲೇಬೇಕು. ಈ ಪ್ರಕ್ರಿಯೆಯ ಮೂಲಕ ಹೋಗುವುದು ಅವಶ್ಯಕ. ಅಂತಹ ಪರಿಸ್ಥಿತಿಯಲ್ಲಿ, ಈ ಕಷ್ಟದ ಸಮಯದಲ್ಲಿ ನಿಮ್ಮನ್ನು ಹೇಗೆ ನಿಭಾಯಿಸುವುದು ಮತ್ತು ನಿಮ್ಮ ಹಿಂದಿನ ಸಂಬಂಧದಿಂದ (relationship) ಹೊರಬರುವುದು ಹೇಗೆ?  ಅನ್ನೋದನ್ನು ತಿಳಿಯಿರಿ.

ಆಕ್ಸೆಪ್ಟ್ ಮಾಡಿ
ಪ್ರೀತಿಸಿ ಮೋಸ ಮಾಡಿ ಹೋದ ವ್ಯಕ್ತಿಯನ್ನು ಮರೆಯುವ ಮೊದಲ ಹೆಜ್ಜೆ ಈ ಸಂಬಂಧ ಮುಗಿದಿದೆ ಎಂದು ಒಪ್ಪಿಕೊಳ್ಳುವುದು. ಸತ್ಯದಿಂದ ದೂರ ಸರಿಯುವ ಮೂಲಕ ಅಥವಾ ನಿಮಗೆ ಸುಳ್ಳು ಭರವಸೆಯನ್ನು ನೀಡುವ ಮೂಲಕ ನೋವಿನಲ್ಲಿ ಜೀವನ ಸಾಗಿಸುವ ಬದಲು, ಸಂಬಂಧದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಗಮನಿಸಿ, ಸರಿಯಾದದನ್ನು ಅಳವಡಿಸಿಕೊಳ್ಳುವುದು ಮುಖ್ಯ.

ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳೋದು ಮುಖ್ಯ.
ದುಃಖ, ಬೇಸರ, ಕೋಪ ಮತ್ತು ಗೊಂದಲದಂತಹ ಬ್ರೇಕಪ್ ಗೆ ಸಂಬಂಧಿಸಿದ ಭಾವನೆಗಳನ್ನು ನೀವೇ ಅನುಭವಿಸಿ. ಇದರೊಂದಿಗೆ, ಸಂಬಂಧದಿಂದ ಕಲಿತ ಪಾಠಗಳು (lesson for life) ಮತ್ತು ತಪ್ಪುಗಳನ್ನು ಪರಿಗಣಿಸಿ ಮತ್ತು ಅದರಿಂದ ನಿಮ್ಮನ್ನು ಸುಧಾರಿಸಲು ಪ್ರಯತ್ನಿಸಿ.

ಬಾರ್ಡರ್ ಹಾಕಿ
ನಿಮ್ಮನ್ನು ಆರೋಗ್ಯವಾಗಿಡಲು, ನೀವು ನಿಮಗಾಗಿ ಬಾರ್ಡರ್ ನಿಗದಿಪಡಿಸಬೇಕು. ಇದು ಮುಖ್ಯವಾಗಿ ನಿಮ್ಮ ಸಂಗಾತಿಯೊಂದಿಗೆ ಸಂಪರ್ಕದಲ್ಲಿರುವುದು, ಸಾಮಾಜಿಕ ಮಾಧ್ಯಮದಲ್ಲಿ ಅವರನ್ನು ಫಾಲೋ ಮಾಡುವುದು ಮತ್ತು ಅನ್ಫಾಲೋ ಮಾಡುವುದು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಎಲ್ಲ ಕೆಲಸಗಳನ್ನು ಮಾಡುವುದನ್ನು ತಡೆಯುವುದು ಸುಲಭವಲ್ಲ. ಆದರೆ ನಿಮ್ಮ ಸ್ವಂತ ಭಾವನಾತ್ಮಕ ಯೋಗಕ್ಷೇಮಕ್ಕೆ ಇದು ಅವಶ್ಯಕ.

ಆಗಿರೋದಕ್ಕೆ ಥಾಂಕ್ಸ್ ಹೇಳಿ
ಜೀವನದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸಿ ಮತ್ತು ಜೀವನವು ನೀಡುವ ಒಳ್ಳೆಯ ವಿಷಯಗಳಿಗೆ ಥ್ಯಾಂಕ್ಸ್ ಹೇಳಿ. ಕಲಿತ ಪಾಠಗಳ ಜೊತೆಗೆ, ನಿಮ್ಮ ಬೆಳವಣಿಗೆಗೆ ಏನೆಲ್ಲಾ ಸಾಧ್ಯವೋ ಅವುಗಳ ಬಗ್ಗೆ ಗಮನ ಹರಿಸಿ.  ಬ್ರೇಕ್ ಅಪ್ ಬಗ್ಗೆ ಕೊರಗುವ ಬದಲಾಗಿ, ಜೀವನದ ಈ ಬದಲಾವಣೆಯನ್ನು ಬಿಚ್ಚು ಮನಸಿನಿಂದ ಸ್ವಾಗತಿಸಿ. ನೀವು ಪ್ರೀತಿಸುವ ಜನರ ಬಗ್ಗೆ ಯೋಚನೆ ಮಾಡೋದನ್ನು ಬಿಟ್ಟುಬಿಡುವುದು ನಿಮಗೆ ಬೆಳವಣಿಗೆಯ ಹೊಸ ಬಾಗಿಲುಗಳನ್ನು (new opportunities) ಮತ್ತು ಸಾಧ್ಯತೆಗಳನ್ನು ತೆರೆಯುತ್ತದೆ ಎಂಬುದನ್ನು ನೆನಪಿಡಿ.

ನಿಮ್ಮ ಪ್ರೀತಿಪಾತ್ರರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ
ಕೆಲವೊಮ್ಮೆ ನಾವು ನಮ್ಮನ್ನು ನಿಭಾಯಿಸುವಷ್ಟು ಶಕ್ತಿಯನ್ನು ಹೊಂದಿರೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬ, ಸ್ನೇಹಿತರು ಮಾತ್ರ ಸಹಾಯಕ್ಕೆ ಬರುತ್ತಾರೆ. ನಿಮ್ಮ ಬ್ರೇಕಪ್ ಅನ್ನು ಏಕಾಂಗಿಯಾಗಿ ನಿಭಾಯಿಸಲು ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ನಿಮಗೆ ಅನಿಸಿದರೆ ನಿಮ್ಮ ಕ್ಲೋಸ್ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜೊತೆ ಹಂಚಿಕೊಂಡು, ಹೃದಯ ಹಗುರ ಮಾಡಿ. 

click me!