30ನೇ ವಯಸ್ಸಿನಲ್ಲಿ ಡೇಟಿಂಗ್ ಮಾಡೋರಿಗೆ ಸೂಪರ್ ಟಿಪ್ಸ್

First Published | Jul 19, 2023, 4:14 PM IST

ಮೂವತ್ತನೇ ವಯಸ್ಸಿನಲ್ಲಿ ಡೇಟಿಂಗ್ ಮಾಡೊ ಬಗ್ಗೆ ಯೋಚಿಸುತ್ತಿದ್ದೀರಾ? ಅದಕ್ಕೂ ಮೊದಲು, ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ, ಇದರಿಂದ ನೀವು ಸಂಗಾತಿಯನ್ನು ಸುಲಭವಾಗಿ ಹುಡುಕಬಹುದು. ಹೇಗೆ ಅಂತೀರಾ? 
 

ಯೌವನದ ದಿನಗಳಲ್ಲಿ ನಾವು ಹೊಂದಿರುವ ಕನಸುಗಳು ಮತ್ತು ಪ್ರೀತಿಯ ಬಗ್ಗೆ ನಮ್ಮ ಆಲೋಚನೆಗಳಿಗೂ, ಮೂವತ್ತರ ಹರೆಯದಲ್ಲಿನ ಪ್ರೀತಿಯ ಬಗೆಗಿನ ಅರ್ಥ ವಿಭಿನ್ನವಾಗಿದೆ. ಯಾಕಂದ್ರೆ ಈ ಸಮಯದಲ್ಲಿ ನಮ್ಮ ಮನಸ್ಥಿತಿಯೇ ಬದಲಾಗುತ್ತೆ. ಜೀವನದ ಬಗ್ಗೆ ಕ್ಲಾರಿಟಿ ಇರುತ್ತೆ. ಆದರೂ ಸಹ 30 ರ ನಂತರ ಡೇಟಿಂಗ್ (dating after 30) ಮಾಡೋದಾದ್ರೆ ಈ ನಿಯಮ ಅನುಸರಿಸಿ. 

ಮೂವತ್ತನೇ ವಯಸ್ಸಿಗೂ ಮೊದಲೇ ನೀವು ಸ್ನೇಹ, ಪ್ರೀತಿ ಮತ್ತು ಬ್ರೇಕಪ್ ಎನ್ನುವ ಎಲ್ಲಾ ಸಾಗರಗಳನ್ನು ದಾಟಿ ಬಂದಿರುತ್ತಿರಿ. ಅಷ್ಟೇ ಅಲ್ಲ ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಮೊದಲಿಗಿಂತ ಹೆಚ್ಚು ಪ್ರಬುದ್ಧವಾಗಿರುತ್ತೆ. ನೀವು ನಿಮ್ಮ ಸ್ವಂತ ನಿಯಮಗಳ ಪ್ರಕಾರ ಜೀವನ ನಡೆಸುವ ಧೈರ್ಯ ಹೊಂದಿದ್ದರೆ ಮತ್ತು ಸಮಾಜದ ಒತ್ತಡದಿಂದ (pressure from the society) ದೂರವಿರಲು ಬಯಸಿದ್ರೆ ನಿಮಗಾಗಿ ಸರಿಯಾದ ವಿಷಯಗಳನ್ನು ಆಯ್ಕೆ ಮಾಡೋದು ಮುಖ್ಯ. 
 

Tap to resize

ಬಹಳ ಸಮಯದ ನಂತರ, 30ನೇ ವಯಸ್ಸಿನಲ್ಲಿ ಮತ್ತೆ ಯಾರನ್ನಾದರೂ ಲವ್ ಮಾಡುವ ಮೊದಲು , ಅನೇಕ ಆಲೋಚನೆಗಳು, ಅನೇಕ ವಿಷಯಗಳು ಮನಸ್ಸಿನಲ್ಲಿ ಸುತ್ತುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಅವಸರ ಮಾಡೊದಕ್ಕಿಂತ, ಹೆಚ್ಚಿನ ಸಮಯ ತೆಗೆದುಕೊಂಡು ಯೋಚನೆ ಮಾಡೋದು ಮುಖ್ಯ. ನೀವು 30ರಲ್ಲಿ ಡೇಟಿಂಗ್ ಮಾಡಲು ಬಯಸಿದ್ರೆ, ಈ ವಿಷ್ಯಗಳನ್ನು ನೆನಪಿಡಿ.

ಪಾಸ್ಟ್ ಲೈಫ್ ಮರೆತುಬಿಡಿ (forget about past)
ಹಿಂದೆ ನಿಮಗೆ ಬಹಳ ನೋವು, ಬ್ರೇಕಪ್ ಆಗಿರಬಹುದು, ಆದರೆ ನೀವು ಇವುಗಳಿಂದ ಚೇತರಿಸಿಕೊಳ್ಳಬೇಕು. ಹಳೆಯ ನೋವಲ್ಲೇ ಮೈಮರೆತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ಹಿಂದಿನ ಜೀವನದ ಕಹಿ ಘಟನೆಗಳನ್ನು ಮೆಟ್ಟಿ ನಿಂತರೆ  ಜೀವನ ಸಾಗಿಸೋದು ಸುಲಭ. ಮೇಲ್ನೋಟಕ್ಕೆ, ಈ ಅನುಭವಗಳು ಸಂಬಂಧದಿಂದ ನಮಗೆ ಏನು ಬೇಕು ಮತ್ತು ಏನು ಬೇಡ ಎಂದು ಕಲಿಸುತ್ತವೆ. 

ನಿಮ್ಮ ಪಾಸ್ಟ್ ಲೈಫ್‌ನಿಂದ ಕಲಿಯಿರಿ, ಆದರೆ ಅದರಲ್ಲಿ ಸಿಲುಕಿಕೊಳ್ಳಬೇಡಿ. ಹೊಸ ಬಂಧವನ್ನು ರೂಪಿಸುವಾಗ ಹಿಂದಿನ ಅನುಭವಗಳು ಮಧ್ಯಪ್ರವೇಶಿಸಲು ಬಿಡಬೇಡಿ. ಸಂಬಂಧದಲ್ಲಿ ಸಂತೋಷವಾಗಿರುವುದು ಪ್ರಮುಖ ಅಂಶವಾಗಿದೆ. ಹಾಗಾಗಿ ಲೈಫನ್ನು ಎಂಜಾಯ್ ಮಾಡಲು ಕಲಿಯಿರಿ. 

ನಿಮ್ಮನ್ನು  ನೀವು ಅರ್ಥ ಮಾಡಿಕೊಳ್ಳೋದು ಮುಖ್ಯ
ಮೊದಲು ನೀವು ನಿಮ್ಮನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗುರುತಿಸಬೇಕು. ನೀವು ಯಾರು, ನಿಮ್ಮ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ಯಾವುವು ಮತ್ತು ನೀವು ಏನು ಯೋಚಿಸುತ್ತೀರಿ ಎಂಬ ಬಗ್ಗೆ ನಿಮಗೆ ತಿಳಿದಿರೋದಿಲ್ಲ. ನಿಮಗೆ ಏನು ಬೇಕು ಎಂದು ನೀವೇ ತಿಳಿದುಕೊಂಡಾಗ ಮಾತ್ರ ಇತರ ವ್ಯಕ್ತಿಯು ನಿಮ್ಮ ಬಗ್ಗೆ ಗಮನ ಹರಿಸುತ್ತಾನೆ. ಯಾರೊಂದಿಗಾದರೂ ಡೇಟಿಂಗ್ ಮಾಡುವ ಮೊದಲು ನಿಮ್ಮನ್ನು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. 

ಉದ್ದೇಶ ಒಳ್ಳೆಯದಾಗಿರಲಿ
ಮೊದಲಿನಿಂದಲೂ ನಿಮಗೆ ಏನು ಬೇಕೋ ಅದರೊಂದಿಗೆ ಪ್ರಾಮಾಣಿಕರಾಗಿರಿ. ನಿಮ್ಮ ಉದ್ದೇಶಗಳನ್ನು ಮುಂಚಿತವಾಗಿ ಸಂಗಾತಿ ಜೊತೆ ಹೇಳಿ, ಇದರಿಂದ ನಿಮ್ಮ ಹೃದಯ ಮತ್ತೆ ಒಡೆಯುವುದಿಲ್ಲ. ನಿಮ್ಮ ಆದ್ಯತೆ ಮದುವೆಯಾಗಿದ್ದರೆ, ಮೊದಲಿನಿಂದಲೂ ಅದರ ಬಗ್ಗೆ ಗಮನ ಹರಿಸಿ. 

ನಿಮಗೆ ಮದುವೆ (marriage) ಆಗುವ ಆಲೋಚನೆ ಬಂದ್ರೆ ಅದರ ಬಗ್ಗೆ ಎಲ್ಲರನ್ನೂ ಕೇಳಬೇಡಿ. ಮೊದಲು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ನಿಮ್ಮ ಆಲೋಚನೆಗಳನ್ನು ಸ್ಪಷ್ಟ ರೀತಿಯಲ್ಲಿ ವ್ಯಕ್ತಪಡಿಸಿ. ಯಾವ ವ್ಯಕ್ತಿಯ ಆಲೋಚನೆಗಳು ನಿಮ್ಮ ಜೊತೆ ಸರಿಯಾಗಿ ಕನೆಕ್ಟ್ ಆಗುತ್ತದೆ ಅನ್ನೋದನ್ನು ಚೆಕ್ ಮಾಡಿ. 

ಪ್ರತಿಯೊಬ್ಬರ ಪರ್ಸನಲ್ ಸ್ಪೇಸ್ ಗೆ ಗೌರವ ಕೊಡಿ
ಹದಿಹರೆಯದಲ್ಲಿ ಸಂಗಾತಿಯೊಂದಿಗೆ ಫೋನ್ ನಲ್ಲಿ ಗಂಟೆಗಟ್ಟಲೆ ಮಾತನಾಡೋದು, ಮೆಸೇಜ್ ಮಾಡುತ್ತಲೇ ಇರೋದು ಇದೆಲ್ಲ ಸಾಮಾನ್ಯ ಮತ್ತು ಒಳ್ಳೆಯದು. ಆದರೆ ವಯಸ್ಸಾಗುತ್ತಾ ಬಂದ ಹಾಗೆ ಪ್ರತಿ ಸಂಬಂಧದಲ್ಲಿ ಸ್ಪೇಸ್ (personal space) ಅನ್ನೋದು ಬೇಕೇ ಬೇಕು. ನೀವು ಯಾರೊಂದಿಗಾದರೂ ಸಂಬಂಧ ಹೊಂದಿದ್ರೆ ಇಬ್ಬರ ನಡುವೆ ಒಂದು ಗಡಿ ಅನ್ನೋದು ಇರಲೇಬೆಕು. 

ಮೂವತ್ತರ ನಂತರ ಯಾವುದೇ ವಿಷಯದ ಕಡೆಗೆ ಆತುರದ ನಿರ್ಧಾರ ತೆಗೆದುಕೊಳ್ಳುವ ಬದಲು ನಿಮಗೆ ಮತ್ತು ಅವರಿಗೂ ಸಮಯ ನೀಡಿ. ಪರಸ್ಪರರ ಸ್ಪೇಸ್ ನೀಡಿ. ಮತ್ತು ಇಬ್ಬರ ಪ್ರೈವೆಟ್ ಲೈಫ್ ಅನ್ನು ಗೌರವಿಸಿ. ಇತರ ವ್ಯಕ್ತಿಯ ಪರ್ಸನಲ್ ಸ್ಪೇಸಿಗೆ ಪ್ರವೇಶಿಸಬೇಡಿ, ಅಷ್ಟೇ ಅಲ್ಲ ಅವರು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಬೇಡಿ. ಇಬ್ಬರಿಗೂ ಸ್ವಂತ ಐಡೆಂಟಿಟಿ (own identity) ಬೇಕು ಅನ್ನೋದನ್ನು ನೆನಪಿನಲ್ಲಿಡಿ.
 

ಕೆಲವೊಮ್ಮೆ ಏನಾಗುತ್ತೆ ಅಂದ್ರೆ ಯಾರೊಂದಿಗಾದರೂ ಕೆಲವು ದಿನಗಳವರೆಗೆ ಮಾತನಾಡಿದ ನಂತರ, ನೀವಿಬ್ಬರೂ ತುಂಬಾ ಭಿನ್ನರಾಗಿದ್ದೀರಿ ಅನ್ನೋದು ಗೊತ್ತಾಗುತ್ತೆ.. ನಿಮ್ಮ ನಡುವೆ ಹೊಂದಾಣಿಕೆ ಸಾಧ್ಯವಾಗದೇ ಇದ್ದರೆ, ಅದಕ್ಕಾಗಿ ಸಂಗಾತಿ ಜೊತೆ ಜಗಳ ಮಾಡಬೇಡಿ, ಬದಲಾಗಿ ಸಮಯ ನೀಡಿ ಎಲ್ಲವೂ ಸರಿಯಾಗುತ್ತೆ. 

Latest Videos

click me!