ನೀವು ತಿನ್ನೋ ಸ್ಟೈಲ್ ನಿಮ್ಮ ಪರ್ಸನಾಲಿಟಿ ಹೆಂಗಿದೆ ಅಂತ ಹೇಳುತ್ತೆ!

First Published | Jul 12, 2023, 4:26 PM IST

ಒಬ್ಬರ ವ್ಯಕ್ತಿತ್ವ ಹೇಗಿದೆ ಅನ್ನೋದನ್ನು ಆ ವ್ಯಕ್ತಿಯು ಯಾವ ರೀತಿ ತಿಂಡಿ ತಿನ್ನುತ್ತಾನೆ ಅನ್ನೋದನ್ನು ನೋಡಿ ತಿಳಿದುಕೊಳ್ಳಬಹುದಂತೆ. ನಿಮಗೂ ಯಾರ ಬಗ್ಗೆಯಾದರೂ ತಿಳಿದುಕೊಳ್ಳಬೇಕೆ? ಹಾಗಿದ್ರೆ ಇನ್ನು ಮುಂದೆ ಆ ವ್ಯಕ್ತಿ ಹೇಗೆ ತಿಂತಾರೆ ನೋಡಿ. 
 

ಕಡಿಮೆ ತಿನ್ನೋ ಜನ: ಯಾರೂ ಕಡಿಮೆ ತಿನ್ನುತ್ತಾರೋ (less eater) ಅವರು ತಮ್ಮನ್ನು ತಾವು ಕಂಟ್ರೋಲ್ ನಲ್ಲಿ ಇಟ್ಟಿರುತ್ತಾರೆ. ತಮ್ಮನ್ನು ನಿಯಂತ್ರಿಸುವ ಬಗ್ಗೆ ಕೂಡ ಅವರಿಗೆ ಚೆನ್ನಾಗಿ ತಿಳಿದಿರುತ್ತೆ. ಇಂತಹ ಜನರು ತಮ್ಮ ಕೋಪ, ಭಾವನೆ, ಬೇಸರವನ್ನು ಕಂಟ್ರೋಲ್ ಮಾಡ್ತಾರೆ. 

ಬೇಗ ತಿನ್ನುವ ಜನರು: ಬೇಗ ಬೇಗ ತಿಂಡಿ, ಊಟ ತಿಂದು ಮುಗಿಸುವ ಜನರು ಅಸಹನೆ ಹೊಂದಿರುವ ಜನರಾಗಿರ್ತಾರೆ. ಅಷ್ಟೇ ಅಲ್ಲ ಇವರು ಹೆಚ್ಚಿನ ಮಹಾತ್ವಕಾಂಕ್ಷೆಯನ್ನು ಹೊಂದಿರುವ ಜನರು ಕೂಡ ಆಗಿರ್ತಾರೆ. 

Tap to resize

ದಿನವಿಡೀ ತಿನ್ನೋ ಜನ: ಯಾವ ವ್ಯಕ್ತಿಗೆ ದಿನಪೂರ್ತಿ ತಿನ್ನುತ್ತಲೇ ಇರಬೇಕು ಅಥವಾ ತಿಂದ ಸ್ವಲ್ಪ ಹೊತ್ತಲ್ಲಿ ಮತ್ತೆ ತಿನ್ನಬೇಕೆನ್ನುವ ಬಯಕೆ ಉಂಟಾಗುತ್ತೋ ಅವರು ತುಂಬಾನೆ ತುಂಟ, ಮೋಜು ಮಾಡುವ ವ್ಯಕ್ತಿಯಾಗಿರ್ತಾರೆ. 

ನಿಧಾನವಾಗಿ ತಿನ್ನುವ ಜನರು: ಯಾವ ವ್ಯಕ್ತಿ ತುಂಬಾ ನಿಧಾನವಾಗಿ ತಿನ್ನುತ್ತಾನೋ (eating slowley) ಅವರು ತುಂಬಾನೇ ಸಹನೆ ಹೊಂದಿರುವ ಜನರು. ಜೊತೆಗೆ ಯಾವುದೇ ಕೆಲಸವನ್ನು, ನಿರ್ಧಾರ ಮಾಡಬೇಕಾದರೂ ಸಹ ತುಂಬಾ ಯೋಚನೆ ಮಾಡಿ ಮಾಡುತ್ತಾರೆ. 

ಚೆನ್ನಾಗಿ ತಿನ್ನುವ ಜನರು: ಚೆನ್ನಾಗಿ ಮತ್ತು ಉತ್ತಮ ರೀತಿಯಲ್ಲಿ ತಿನ್ನೋ ಜನರು ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಮತ್ತು ಪ್ರತಿ ಕೆಲಸವನ್ನು ಪೂರ್ಣಗೊಳಿಸಿದ ನಂತರವೇ ಅವರು ಹಿಂದೆ ಸರಿಯೋದು.  

ವಿಶೇಷ ಆಹಾರವನ್ನು ಸೇವಿಸೋ ಜನರು: ಎಲ್ಲಾ ಸಮಯದಲ್ಲೂ ತಿನ್ನಲು ಏನಾದರೂ ವಿಶೇಷವಾದದ್ದನ್ನು ಬಯಸುವ ಜನರು ತುಂಬಾ ಚಿಂತೆ ಮಾಡುತ್ತಾರೆ.  ಆದರೆ ತಮ್ಮ ಮನಸ್ಸಿನ ಮಾತುಗಳನ್ನು ಹೇಳಲು ಅವರು ಎಂದಿಗೂ ಹಿಂದೆ ಸರಿಯೋದಿಲ್ಲ

ಸಿಹಿತಿಂಡಿಗಳನ್ನು ತಿನ್ನುವ ಜನರು: ಹೆಚ್ಚು ಸಿಹಿತಿಂಡಿಗಳನ್ನು (eating sweets) ತಿನ್ನುವ ಜನರು ಯಾವಾಗಲೂ ಇತರ ಸಂತೋಷ, ಇತರರ ಸಹಾಯ, ಇನ್ನೊಬ್ಬರ ಖುಷಿಯಲ್ಲೇ ತಮ್ಮ ಖುಷಿಯನ್ನು ಕಾಣುತ್ತಾರೆ. ಅವರು ತಮಗಿಂತ ಹೆಚ್ಚಾಗಿ ಇನ್ನೊಬ್ಬರ ಬಗ್ಗೆ ಯೋಚನೆ ಮಾಡ್ತಾರೆ. 

Latest Videos

click me!