ಇದನ್ನೆಲ್ಲಾ ಮಾಡೋದು ಬಿಟ್ರೆ ಪತ್ನಿಯಾಗಿ ನೀವು ಹ್ಯಾಪಿಯಾಗಿರಲು ಸಾಧ್ಯ!

First Published | Jul 15, 2023, 4:45 PM IST

ನೀವು ಯಾವಾಗಲೂ ಹ್ಯಾಪಿಯಾಗಿರಲು ಬಯಸಿದ್ರೆ ನಿಮ್ಮ ಸಂಗಾತಿಗಾಗಿ ನೀವು ಮಾಡಬೇಕಾದ ಕೆಲವು ವಿಷಯಗಳಿವೆ.  ಇವುಗಳನ್ನು ನೀವು ತಪ್ಪದೇ ಮಾಡಿದ್ರೆ ಖಂಡಿತವಾಗಿಯೂ ಹ್ಯಾಪಿ ವೈಫ್ ಆಗೋದ್ರಲ್ಲಿ ಸಂಶಯವೇ ಇಲ್ಲ.
 

ವೈವಾಹಿಕ ಜೀವನದಲ್ಲಿ (married life) ಸಂಘರ್ಷಗಳು ಸಹ ಹೆಚ್ಚಾಗಿಯೇ ಇರುತ್ತೆ. ಕೆಲವೊಮ್ಮೆ ಮಹಿಳೆಯರು ತಮ್ಮ ಗಂಡ, ಮನೆ, ಮಕ್ಕಳಿಗಾಗಿ ಎಲ್ಲವನ್ನು ಮಾಡಿ ತಮ್ಮ ಜೀವನದ ನೆಮ್ಮದಿಯನ್ನೇ ಕಳೆದುಕೊಂಡು ಬಿಡ್ತಾರೆ. ಈ ಸಮಸ್ಯೆ ನಿಮಗೆ ಬಾರದಿರಲು, ಹ್ಯಾಪಿ ವೈಫ್ ನೀವಾಗ ಬಯಸಿದ್ರೆ ನೀವು ಏನನ್ನ ಮಾಡಬೇಕು ಅನ್ನೋದನ್ನ ನೊಡೋಣ. 
 

ನಿಮ್ಮ ಬಗ್ಗೆ ಕೇರ್ ತೆಗೆದುಕೊಳ್ಳೋದು: ಯಾವಾಗಲೂ ಇನ್ನೊಬ್ಬರ ಬಗ್ಗೆ ಕೇರ್ ತೆಗೆದುಕೊಳ್ಳುವ ನೀವು ಈ ಬಾರಿ ನಿಮ್ಮ ಬಗ್ಗೆ ಕೇರ್ ತೆಗೆದುಕೊಳ್ಳೋದನ್ನು ಕಲಿಯಿರಿ.ನಿಮ್ಮ ಅಗತ್ಯಗಳ ಬಗ್ಗೆ ಗಮನ ಹರಿಸೋದು, ಹೆಂಡತಿಯಾಗಿ ಇತರರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ, ನಿಮ್ಮ ಆರೋಗ್ಯ ಬ್ಯಾಲೆನ್ಸ್ ಆಗಿರುವಂತೆ ನೋಡಿಕೊಳ್ಳೋದು, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಆರೋಗ್ಯವಾಗಿರಲು ಸಾಧ್ಯವಿರುವ ಎಲ್ಲವನ್ನೂ ಮಾಡಿ.  

Tap to resize

ವೈವಾಹಿಕ ಜೀವನವನ್ನು ಹೋಲಿಕೆ ಮಾಡಬೇಡಿ: ನಾವು ಯಾವಾಗ ನಮ್ಮ ವೈವಾಹಿಕ ಜೀವನವನ್ನು, ಇತರರ ಜೀವನಕ್ಕೆ ಹೋಲಿಕೆ ಮಾಡುತ್ತೇವೆಯೋ ಆವಾಗ ಜೀವನ ಹಾಳಾಗುತ್ತೆ. ಕಂಪೇರ್ ಮಾಡೋದನ್ನು ನಿಲ್ಲಿಸಿ, ಅದರ ಬದಲಾಗಿ, ನಿಮ್ಮ ವೈವಾಹಿಕ ಜೀವನ ಸಂತೋಷ, ನೆಮ್ಮದಿಯಾಗಿರಲು ಏನೆಲ್ಲಾ ಮಾಡಬೇಕು ಅದನ್ನ ಮಾಡಿ.    

ಕೋಪ, ಹಗೆತನ ದೂರ ಮಾಡಿ: ಗಂಡ, ಹೆಂಡತಿ ಅಂದ ಮೇಲೆ ಜಗಳ, ಗಲಾಟೆ ಎಲ್ಲವೂ ಸಾಮಾನ್ಯ. ಆದರೆ ಪತಿಯ ಮೇಲೆ ಕೋಪ ಹಗೆತನ ಸಾಧಿಸೋದರಿಂದ ಏನೂ ಪಡೆದುಕೊಳ್ಳೋದಿಲ್ಲ. ಹಾಗಾಗಿ ಕೋಪ ಬಿಡಿ, ಕ್ಷಮೆ ಕೇಳೋದನ್ನು ರೂಢಿ ಮಾಡಿ, ಇದರಿಂದ ಸಂಬಂಧ ಗಟ್ಟಿಯಾಗುತ್ತೆ.

ಟೀಕಿಸೋದನ್ನು ನಿಲ್ಲಿಸಿ, ಆಕ್ಸೆಪ್ಟ್ ಮಾಡಿ: ಸಂಗಾತಿಯನ್ನು ಯಾವಾಗಲೂ ಟೀಕಿಸುವುದು ದಾಂಪತ್ಯದಲ್ಲಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತೆ. ಪ್ರತಿಯೊಂದಕ್ಕೂ ಟೀಕಿಸೋದನ್ನು ನಿಲ್ಲಿಸಿ, ಅವರು ಇದ್ದ ಹಾಗೆ ಸ್ವೀಕರಿಸೋದನ್ನು ಕಲಿಯಿರಿ. ಜೀವನ ನೆಮ್ಮದಿಯಾಗಿರುತ್ತೆ.

ಮನಸ್ಸು ಬಿಚ್ಚಿ ಮಾತನಾಡಿ: ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮುಕ್ತವಾಗಿ ಮಾತನಾಡೋದರಿಂದ ಸಂಬಂಧ ತುಂಬಾನೆ ಸ್ಟ್ರಾಂಗ್ ಆಗುತ್ತೆ. ಹಾಗಾಗಿ ದಿನದಲ್ಲಿ ಒಂದು ಅರ್ಧ ಗಂಟೆಯಾದ್ರೂ ಇಬ್ಬರು ಜೊತೆಯಾಗಿ ಕುಳಿತು ಮಾತನಾಡಿ. 

ಒಟ್ಟಿಗೆ ಸಮಯ ಕಳೆಯಿರಿ: ನಾವು ಜೀವನದಲ್ಲಿ ಎಷ್ಟು ಬ್ಯುಸಿಯಾಗಿದ್ದೇವೆ ಅಂದ್ರೆ ಪತಿ -ಪತ್ನಿ ಜೊತೆಯಾಗಿ ಕಳೆಯಲು ಸಹ ಸಮಯ ಇರೋದಿಲ್ಲ. ಇದರಿಂದಲೇ ಜೀವನ ನರಕವಾಗುತ್ತೆ. ನೆಮ್ಮದಿಯ ಜೀವನಕ್ಕಾಗಿ ಇಬ್ಬರಿಗಾಗಿ ಸಮಯ ಮೀಸಲಿಡಿ, ಜೊತೆಯಾಗಿ ಊಟ, ಔಟಿಂಗ್ ಮಾಡಿ. 

ಓವರ್ಲೋಡ್ ಜವಾಬ್ದಾರಿಗಳು: ಎಲ್ಲವನ್ನೂ ನಾವೇ ಮಾಡಲು ಪ್ರಯತ್ನಿಸುವುದರಿಂದ ಜವಾಬ್ಧಾರಿಗಳು ಓವರ್ ಲೋಡ್ ಆಗಿ, ನೆಮ್ಮದಿ ಹಾಳಾಗುತ್ತೆ. ಆದ್ದರಿಂದ, ಸಂಗಾತಿಯೊಂದಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿ, ಇದರಿಂದ ಕೆಲಸವೂ ಬೇಗ ಬೇಗ ಆಗುತ್ತೆ, ನೆಮ್ಮದಿಯೂ ಇರುತ್ತೆ. 

ಟೇಕನ್ ಫಾರ್ ಗ್ರಾಂಟೆಡ್: ನಿಮ್ಮ ಸಂಗಾತಿ ನಿಮ್ಮ ಜೊತೆಗೆ ಬೆನ್ನೆಲುಬಾಗಿ ನಿಲ್ಲೋದನ್ನು ಈಸಿಯಾಗಿ ತೆಗೆದುಕೊಳ್ಳಬೇಡಿ. ಇದಕ್ಕಾಗಿ ಅವರಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಇದರಿಂದ ಇಬ್ಬರೂ ಹ್ಯಾಪಿಯಾಗಿರಲು ಸಾಧ್ಯವಾಗುತ್ತೆ. 

ವೈಯಕ್ತಿಕ ಬೆಳವಣಿಗೆ ಬಗ್ಗೆ ಗಮನ ಹರಿಸಿ: ವೈಯಕ್ತಿಕ ಬೆಳವಣಿಗೆ ಮತ್ತು ಅಭಿವೃದ್ಧಿ ನಿಮ್ಮ ಜೀವನದುದ್ದಕ್ಕೂ ಮುಂದುವರಿಯಬೇಕು.  ನಿಮ್ಮ ಗುರಿ ಮತ್ತು ಬೆಳವಣಿಗೆ ಬಗ್ಗೆ ಸಹ ಹೆಚ್ಚು ಗಮನ ಹರಿಸಿ. ಇದರಿಂದ ನಿಮಗೂ ಮಾನಸಿಕ ನೆಮ್ಮದಿ ಸಿಗುತ್ತೆ, ಸಂತೋಷವಾಗಿರಲು ಸಾಧ್ಯವಾಗುತ್ತೆ. 

Latest Videos

click me!