ಗಂಡಸ್ರೆ ಈ ಕೆಲಸ ಮಾಡಿ ನೋಡಿ… ಹೆಂಡ್ತಿ ಯಾವತ್ತೂ ನಿಮ್ಮ ಮೇಲೆ ಕೋಪ ಮಾಡೋದೆ ಇಲ್ಲ!

First Published | Feb 2, 2024, 6:26 PM IST

ಮಹಿಳೆಯರನ್ನು ಸಂತೋಷವಾಗಿಡುವುದು ಅಸಾಧ್ಯ ಎಂದು ಭಾವಿಸುವ ಪುರುಷರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಲೇಖನ ನಿಮಗಾಗಿ. ಪ್ರತಿಯೊಬ್ಬ ಮಹಿಳೆ ತನ್ನ ಸಂಗಾತಿಯಿಂದ ಬಯಸುವ ಕೆಲವು ವಿಷಯಗಳ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ.
 

ನೀವು ಮಹಿಳೆಯರನ್ನು ಅರ್ಥಮಾಡಿಕೊಳ್ಳದಿದ್ದರೆ, ಅವರನ್ನು ಸಂತೋಷಪಡಿಸಲು ಅವರಿಗಾಗಿ ಏನಾದರು ಮಾಡೋಕೆ ಸಾಧ್ಯಾನೆ ಇಲ್ಲ. ಹೆಚ್ಚಿನ ಪುರುಷರ ಮಾತು ಇದೇನೆ… ಅದೇನಂದ್ರೆ ಯಪ್ಪಾ ಹೆಂಗಸ್ರನ್ನ ಸಂತೋಷವಾಗಿಡೋದು ಸಾಧ್ಯಾನೆ ಇಲ್ಲಪ್ಪಾ ಎಂದು. ನೀವು ಸಹ ಹಾಗೇನೆ ಯೋಚ್ನೆ ಮಾಡೋ ಗಂಡಸು ಆಗಿದ್ರೆ, ಇವತ್ತಿಂದ ಅದನ್ನ ಬದಲಾಯಿಸಿ. 

ಹೌದು ಸಾಮಾನ್ಯವಾಗಿ ತಮ್ಮ ಸಂಗಾತಿಯನ್ನು ಸಂತೋಷವಾಗಿಡಲು (make your partner happy) ಬಯಸುವ ಪುರುಷರು ಸಹ ವಿಫಲರಾಗುತ್ತಾರೆ. ಏಕೆಂದರೆ ಅವರ ಸಂಗಾತಿ ಏನು ಇಷ್ಟಪಡುತ್ತಾರೆಂದು ಅವರಿಗೆ ತಿಳಿದೇ ಇರೋದಿಲ್ಲ. ಅವರಿಗೆ ಏನು ಇಷ್ಟ, ಕಷ್ಟ ಅಂತ ತಿಳಿದುಕೊಳ್ಳೋ ಮುನ್ನ ನೀವು, ನಿಮ್ಮವರಿಗಾಗಿ ಈ ಕೆಳಗೆ ತಿಳಿಸಿರುವ ಕೆಲಸಗಳನ್ನ ಮಾಡಿದ್ರೆ, ಖಂಡಿತವಾಗಿಯೂ ನಿಮ್ಮ ಹೆಂಡ್ತಿ ನಿಮ್ಮ ಮೇಲೆ ಕೋಪ ಮಾಡೋದೆ ಇಲ್ಲ. ಆ ಕೆಲಸಗಳು ಯಾವುವು ನೋಡೋಣ. 

Tap to resize

ಸಹಾಯ: ವೈವಾಹಿಕ ಜೀವನದಲ್ಲಿ (married life) ಗಂಡ ಹೆಂಡತಿ ಜೊತೆಯಾಗಿ ಅರ್ಥ ಮಾಡಿಕೊಂಡು ಬಾಳೋದು ಮುಖ್ಯ. ಇನ್ನು ಮನೆಯ ಜವಾಬ್ಧಾರಿ ಅಂದ್ರೆ, ಅದು ಕೇವಲ ಹೆಂಡತಿಯ ಪಾಲಾಗಬಾರದು, ಮನೆಯ ಎಲ್ಲಾ ಕೆಲಸದಲ್ಲೂ ಪತ್ನಿಗೆ ಸಹಾಯ ಮಾಡುತ್ತಾ ಬಂದ್ರೆ ಅವರಿಗೂ ಖುಷಿಯಾಗುತ್ತೆ, ಕೆಲಸವೂ ಬೇಗವಾಗುತ್ತೆ. ಇದರಿಂದ ಅವರಿಗೆ ನಿಮ್ಮ ಮೇಲೆ ಪ್ರೀತಿಯೂ ಹೆಚ್ಚುತ್ತೆ. 

ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು: ಅನೇಕ ಪುರುಷರು ತಮ್ಮ ಕೋಪವನ್ನು ತಮ್ಮ ಸಂಗಾತಿಯ ಮೇಲೆ ಹೊರಹಾಕುತ್ತಾರೆ, ಆದರೆ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಅವರು ತುಂಬಾ ನಾಚಿಕೆಪಡುತ್ತಾರೆ. ನೀವು ಸಹ ಈ ತಪ್ಪನ್ನು ಮಾಡುತ್ತಿದ್ದರೆ, ಅದನ್ನು ಈಗಲೇ ಸರಿಪಡಿಸಿ. ಏಕೆಂದರೆ ಇದು ಸಂಬಂಧದಲ್ಲಿ ನಿಮ್ಮ ಹೆಂಡತಿಯನ್ನು ತೃಪ್ತಿಪಡಿಸುವ ಒಂದು ಮಾರ್ಗವಾಗಿದೆ.

ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು: ನೀವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ, ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯವನ್ನು ಏಕಾಂಗಿಯಾಗಿ ಕಳೆಯಲು (spend quality time) ಸಮಯ ತೆಗೆದುಕೊಳ್ಳಿ. ಅವರ ದಿನ ಹೇಗಿತ್ತು ಎಂದು ತಿಳಿದುಕೊಳ್ಳಿ, ಅವರ ಸಮಸ್ಯೆಗಳು ಮತ್ತು ಕಾಳಜಿಗಳನ್ನು ಅರ್ಥಮಾಡಿಕೊಳ್ಳಿ. ಈ ಒಂದು ವಿಷಯವು ನಿಮ್ಮ ಸಂಬಂಧದ ಬೇರುಗಳನ್ನು ಹೆಚ್ಚು ಬಲಪಡಿಸುತ್ತದೆ.

ಸರ್ ಪ್ರೈಸ್ ನೀಡೋದನ್ನು ಮರೆಯಬೇಡಿ: ಹೆಂಗಸರಿಗೆ ಸರ್ ಪ್ರೈಸ್ (surprise) ಅಂದ್ರೆ ತುಂಬಾನೆ ಇಷ್ಟ. ಹಾಗಾಗಿ, ಅವರಿಗೆ ತಿಂಗಳಿಗೊಮ್ಮೆಯಾದ್ರೂ ಸರ್ ಪ್ರೈಸ್ ನೀಡೋದನ್ನು ಮರೆಯಬೇಡಿ. ಇದರಿಂದ ಅವರಿಗೂ ತುಂಬಾನೆ ಖುಷಿಯಾಗುತ್ತೆ.  

ಪತ್ನಿಯ ಇಷ್ಟಗಳನ್ನು ತಿಳಿದುಕೊಳ್ಳಬೇಕು ನಿಜಾ. ಆದರೆ ನೀವು ಇಲ್ಲಿ ತಿಳಿಸಿದಂತೆ ಮಾಡ್ತಿದ್ರೆ, ಸಂಗಾತಿಗೆ ಯಾವತ್ತೂ ನಿಮ್ಮ ಮೇಲೆ ಕೋಪ ಬರೋದೇ ಇಲ್ಲ. ನಿಮ್ಮೊಂದಿಗೆ ಖುಷಿ ಖುಷಿಯಾಗಿ ಇರ್ತಾರೆ ಅವರು. 
 

Latest Videos

click me!