ನಿಮ್ ಜೊತೆ ಮಾತನಾಡುತ್ತಿರುವವರು ಏನನ್ನೋ ಮುಚ್ಚಿಡುತ್ತಿದ್ದಾರಾ? ಹೀಗ್ ಕಂಡು ಹಿಡೀರಿ

First Published | Jan 31, 2024, 4:55 PM IST

ಮಾತನಾಡುವಾಗ ಯಾರಾದರೂ ಸುಳ್ಳು ಹೇಳಿದರೆ, ಅದನ್ನ ಪತ್ತೆ ಹಚ್ಚಲು ಸಾಧ್ಯವೇ ಇಲ್ಲ ಎಂದು ನೀವು ಅಂದುಕೊಂಡರೆ ಅದು ಸುಳ್ಳು. ಯಾಕಂದ್ರೆ ನಿಮ್ಮೆದುರಿಗಿನ ವ್ಯಕ್ತಿಯ ಕಣ್ಣು, ಕೈಗಳು, ತಲೆ ಮತ್ತು ಪಾದಗಳನ್ನು ನೋಡೋ ಮೂಲಕ ಅವರು ಹೇಳುತ್ತಿರೋ ಮಾತು ನಿಜವೇ ಅನ್ನೋದನ್ನು ತಿಳಿಯಬಹುದು. 
 

ನಾವು ಒಂದಲ್ಲ ಒಂದು ಕಾರಣಕ್ಕಾಗಿ ಇತರರ ಬಳಿ ಸುಳ್ಳು (lying to other) ಹೇಳಿರುತ್ತೇವೆ. ಕೆಲವರು ಸಣ್ಣಪುಟ್ಟ ಸುಳ್ಳು ಹೇಳಿದ್ರೆ, ಇನ್ನೂ ಕೆಲವರು ದೊಡ್ಡ ಸುಳ್ಳನ್ನೇ ಹೇಳ್ತಾರೆ. ಕೆಲವರು ನಾಜೂಕಾಗಿ ಸುಳ್ಳನ್ನು ಹೇಳಿದ್ರೆ, ಕೆಲವರು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಳ್ಳುತ್ತಾರೆ.  ನೀವು ಮಾತನಾಡುತ್ತಿರುವ ವ್ಯಕ್ತಿ ನಿಜ ಹೇಳ್ತಿದ್ದಾನೆಯೇ? ಅಥವಾ ಸುಳ್ಳು ಹೇಳ್ತಿರೋದಾ ಅನ್ನೋದನ್ನು ಹೇಗೆ ಚೆಕ್ ಮಾಡೋದು? 

ನಿಮ್ಮೆದುರಿನ ವ್ಯಕ್ತಿ ಸುಳ್ಳು ಹೇಳ್ತಿದ್ದಾನ? ಇಲ್ಲ ನಿಜಾ ಹೇಳ್ತಿರೋದಾ ಅನ್ನೋದನ್ನು ಸುಲಭವಾಗಿ ಪತ್ತೆ ಮಾಡಬಹುದು. ಅದಕ್ಕಾಗಿ ನೀವು ಅವರನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತೆ. ಕೆಲವು ಶಾರೀರಿಕ ಸಂಕೇತಗಳು ಸುಳ್ಳನ್ನು ಪತ್ತೆ (lie ditect) ಹಚ್ಚಲು ಸಹಾಯ ಮಾಡುತ್ತವೆ. 

Tap to resize

ಮಾತನಾಡುತ್ತಿರುವ ವ್ಯಕ್ತಿ ಇದ್ದಕ್ಕಿದ್ದಂತೆ ತಲೆಯನ್ನು ಅಲುಗಾಡಿಸಲು ಆರಂಭಿಸಿದರೇ ಅವಾಗಲೇ ತಿಳಿಯಿರಿ, ಆತ ಸುಳ್ಳು ಹೇಳುತ್ತಿದ್ದಾನೆ ಎಂದು. ಅವರ ಭಾವನೆಗಳು ಸಹ ಬದಲಾಗಿರುತ್ತವೆ. ಈ ಸಂದರ್ಭದಲ್ಲಿ ಆತನ ತಲೆ ಹಿಂದಕ್ಕೆ, ಎಡ, ಬಲಕ್ಕೆ ವಾಲುತ್ತಲೇ ಇರುತ್ತದೆ. 

ಇನ್ನು ಸುಳ್ಳು ಹೇಳುತ್ತಿರುವ ವ್ಯಕ್ತಿಯ ಒಳಗಿನಿಂದ ಒಂದು ಭಯ ಇದ್ದೇ ಇರುತ್ತೆ, ಇದರಿಂದಾಗಿ ಆತ ಒಂದೇ ಶಬ್ಧವನ್ನು ಪದೇ ಪದೇ ಹೇಳುತ್ತಲೇ (repeating words) ಇರುತ್ತಾನೆ. ನಿಮ್ಮೆದುರಿಗಿನ ವ್ಯಕ್ತಿಯೂ ಇದೇ ರೀತಿ ಯಾವುದೋ ಒಂದು ಶಬ್ಧವನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ ಅಲರ್ಟ್ ಆಗಿ. 

ಇದಲ್ಲದೇ ಮಾತನಾಡುವಾಗ ಯಾವುದೇ ವ್ಯಕ್ತಿ ಕೈ ಬಾಯಿಯ ಬಳಿ ಪದೇ ಪದೇ ಹೋಗುತ್ತಿದ್ದರೆ, ಅವರು ಏನನ್ನೋ ನಿಮ್ಮಿಂದ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ, ಅದಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಅನ್ನೋದನ್ನು ತಿಳಿಯಿರಿ. 
 

 ಇನ್ನು ನೀವು ಕೇಳುವ ಪ್ರಶ್ನೆಗಳಿಗೆ ಅವರು ಉತ್ತರ ಹೇಳಲು ತಡವರಿಸಿದರೆ, ಅವರು ನಿಮ್ಮಿಂದ ಮುಚ್ಚಿಡುತ್ತಿದ್ದಾರೆ ಅನ್ನೋದನ್ನು ತಿಳಿಯಿರಿ. ಯಾಕಂದ್ರೆ ನಿಜ ಹೇಳುವ ವ್ಯಕ್ತಿ ಎಂದಿಗೂ ತಡವರಿಸೋದಿಲ್ಲ. 

ಇನ್ನು ಎದುರಿಗಿನ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ಅನ್ನೋದಾದ್ರೆ ಅವರು ಯಾವತ್ತು ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು (eye contact) ಮಾತನಾಡೋದಿಲ್ಲ. ಜೊತೆಗೆ ಮಾತನಾಡಲು ಕಷ್ಟಪಡೋದು ಸಹ ಸುಳ್ಳು ಹೇಳುವವರ ಸಂಕೇತವಾಗಿದೆ. 
 

ಇನ್ನು ಇದೆಲ್ಲಾ ಸಂಕೇತ ಕಂಡು ಬಂದ ತಕ್ಷಣ ಅವರು ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ಖಚಿತವಾಗಿ ಹೇಳೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಆತ್ಮವಿಶ್ವಾಸದ ಕೊರತೆ ಇರೋರು, ತುಂಬಾನೆ ನರ್ವಸ್ ಆಗಿರೋ ವ್ಯಕ್ತಿಯಲ್ಲೂ ಸಹ ಇದೇ ಸಂಕೇತಗಳು ಕಂಡು ಬರುತ್ತವೆ. 

Latest Videos

click me!