ಲೈಂಗಿಕ ಜೀವನ ಎಂಜಾಯ್ ಮಾಡಬೇಕಂದ್ರೆ ಸಂಗಾತಿಯ ಪ್ಲೆಜರ್ ಪಾಯಿಂಟ್ ತಿಳ್ಕೊಳಿ…

First Published | Jan 30, 2024, 5:51 PM IST

ಸೆಕ್ಸ್ ಗೂ ಮೊದಲು ಫೋರ್ ಪ್ಲೇ ಮಾಡೋದರಿಂದ ಬೇಗನೆ ಆರ್ಗಸಂ ಪಡೆಯಬಹುದು. ಆದರೆ ಅದಕ್ಕೂ ಮುನ್ನ ನೀವು ಸಂಗಾತಿಯ ದೇಹದ ಯಾವ ಭಾಗಗಳು ಪ್ಲೆಜರ್ ಪಾಯಿಂಟ್ ಅನ್ನೋದನ್ನು ತಿಳಿದುಕೊಳ್ಳಬೇಕು. ಅದನ್ನ ತಿಳಿದುಕೊಂಡ್ರೆ ಸೆಕ್ಸ್ ಲೈಫ್ ಕೂಡ ಚೆನ್ನಾಗಿರುತ್ತೆ. 
 

ಇಂಟಿಮೆಸಿ ಮತ್ತು ಪ್ಲೆಜರ್ (intimacy and pleasure) ಯಾವುದೇ ಸಂಬಂಧದಲ್ಲಿ ಬಹಳ ಮುಖ್ಯವಾದ ಎರಡು ವಿಷಯಗಳು.  ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಅಗತ್ಯ ಅನ್ನೋದು ನಿಜ. ಅನೇಕ ಬಾರಿ ಲೈಂಗಿಕ ಚಟುವಟಿಕೆಯಲ್ಲಿ (sexual activity) ತೊಡಗುವಾಗ ನಮ್ಮ ಸಂಗಾತಿಯ ಪ್ಲೆಜರ್ ಪಾಯಿಂಟ್ ಯಾವುದು ಎಂದೇ ನಮಗೆ ತಿಳಿದಿರುವುದಿಲ್ಲ. ಹಾಗಾಗಿ ನಾವು ಅವರನ್ನು ಸಂಪೂರ್ಣವಾಗಿ ತೃಪ್ತಿಪಡಿಸಲು ಸಾಧ್ಯವಾಗುವುದಿಲ್ಲ ಅಥವಾ ಅವರು ನಿಜವಾದ ಸಂತೋಷವನ್ನು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಎರೋಜೆನಸ್ ಝೋನ್ ಬಗ್ಗೆ ತಿಳಿದಿರಬೇಕು..
 

ಕೆಲವು ಎರೋಜೆನಸ್ ವಲಯಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಆದರೆ ಅನೇಕ ಅಂಶಗಳನ್ನು ನಾವು ಕಡೆ ಗಣಿಸುತ್ತೇವೆ ಅಥವಾ ಅವುಗಳ ಬಗ್ಗೆ ನಮಗೆ ತಿಳಿದೇ ಇರೋದಿಲ್ಲ. ಇಂದು ನಾವು ಅಂತಹ ಕೆಲವು ಎರೋಜೆನಸ್ ವಲಯಗಳ  (erogenous zones) ಬಗ್ಗೆ ಮಾತನಾಡುತ್ತೇವೆ. ಅವುಗಳ ಬಗ್ಗೆ ಹೆಚ್ಚು ವಿವರವಾಗಿ ತಿಳಿದುಕೊಳ್ಳೋಣ.
 

Tap to resize

ಕೆಲವು ವಿಶೇಷ ಎರೋಜೆನಸ್ ವಲಯಗಳು ಇಲ್ಲಿವೆ
ಒಳ ತೊಡೆಗಳು  (inner thighs)

ಒಳ ತೊಡೆ ನಿಮ್ಮ ಸಂಗಾತಿಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಇದು ತುಂಬಾ ಮೃದುವಾಗಿದೆ, ಮತ್ತು ನಿಮ್ಮ ನಿಕಟ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿದೆ. ಈ ಭಾಗವನ್ನು ಸ್ಪರ್ಶಿಸುವುದು ಒಬ್ಬ ವ್ಯಕ್ತಿಯನ್ನು ಸುಲಭವಾಗಿ ಉತ್ತೇಜಿಸುತ್ತದೆ. ಇದು ಹೆಣ್ಣು ಮತ್ತು ಗಂಡು ಇಬ್ಬರನ್ನೂ ಉದ್ರೇಕಗೊಳಿಸುವ ಭಾಗವಾಗಿದೆ. ಅದನ್ನು ತುಂಬಾ ಹಗುರವಾದ ಕೈಗಳಿಂದ ಸ್ಪರ್ಶಿಸಬೇಕು.  

ಹೊಕ್ಕುಳಿನ ಕೆಳಭಾಗ ಮತ್ತು ಕಿಬ್ಬೊಟ್ಟೆಯ ಕೆಳಭಾಗ  (navel and lower abdomen)
ಹೊಕ್ಕುಳಿನ ಕೆಳಭಾಗ ಮತ್ತು ಕಿಬ್ಬೊಟ್ಟೆ ಕೆಳಭಾಗವನ್ನು ನಿಧಾನವಾಗಿ ಸ್ಪರ್ಶಿಸಿದರೆ ಬೇಗನೆ ಉದ್ರೇಕಗೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರೆ,  ಬೆರಳಿನ ತುದಿಗಳ ಸಹಾಯದಿಂದ, ನಾಭಿ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ವೃತ್ತಗಳನ್ನು ಮಾಡಿ, ಇದರಿಂದ ಸೆನ್ಸೇಶನ್ ಹೆಚ್ಚುತ್ತೆ. 

ಕಂಕುಳಿನ ಕೆಳಭಾಗ ಮತ್ತು ಒಳ ತೋಳುಗಳು (armpit)
ಕಂಕುಳನ್ನು ಹೇಗೆ ಉತ್ತೇಜಿಸುವುದು ಎಂದು ನೀವು ಯೋಚಿಸುತ್ತಿರಬಹುದು, ಆದರೆ ನಿಮಗೆ ತಿಳಿದಿರಲಿ ಅದು ಹೆಚ್ಚು ಪ್ರಚೋದನೆ ನೀಡುವ ಜಾಗವಾಗಿದೆ. ಹಿಂದಿನಿಂದ ಕೈಯನ್ನು ಚಲಿಸುವಾಗ ನಿಮ್ಮ ಕಂಕುಳಿನ ಕೆಳಭಾಗವನ್ನು ಸ್ಪರ್ಶಿಸುವಂತೆ ನಿಮ್ಮ ಸಂಗಾತಿಗೆ ತಿಳಿಸಿ. ಇದು ದೇಹದಲ್ಲಿ ವೈಬ್ರೇಟ್ ಉಂಟುಮಾಡುತ್ತದೆ. 

ಅಂಗೈ ಮತ್ತು ಬೆರಳಿನ ತುದಿಗಳು (palm and fingertips)
ಬೆರಳಿನ ತುದಿ ದೇಹದ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ಒಂದಾಗಿದೆ. ನಿಮ್ಮ ಅಂಗೈಗಳು ಸಹ ಸೂಕ್ಷ್ಮ ಅಂಗಗಳು. ಇವು ಗಂಡು ಮತ್ತು ಹೆಣ್ಣು ಇಬ್ಬರ ಎರೋಜೆನಸ್ ವಲಯಗಳಾಗಿವೆ. ನಿಮ್ಮ ಸಂಗಾತಿಯನ್ನು ಆಕರ್ಷಿಸಲು ನೀವು ಬಯಸಿದರೆ, ನಿಮ್ಮ ಬೆರಳನ್ನು ಅವರ ಅಂಗೈಗಳ ಮೇಲೆ ಚಲಿಸಿ. ಐ ಕಾಂಟಾಕ್ಟ್ ಇರಲಿ, ಇದು ದೇಹದಲ್ಲಿ ಸಂವೇದನೆಯನ್ನು ಸೃಷ್ಟಿಸುತ್ತದೆ ಮತ್ತು ನಿಮ್ಮ ಸಂಗಾತಿಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ.

ಸೊಂಟದ ಕೆಳಗಿನ ಭಾಗ (buttocks)
ಲೈಂಗಿಕ ಚಟುವಟಿಕೆಯ ಸಮಯದಲ್ಲಿ, ಜನರು ಸಾಮಾನ್ಯವಾಗಿ ಸೊಂಟದ ಕೆಳಗಿನ ಹಿಂದಿನ ಭಾಗವನ್ನು ಪ್ರಚೋದಿಸುತ್ತಾರೆ. ಅದನ್ನು ಮಸಾಜ್ ಮಾಡುವುದು, ಒತ್ತುವುದು ಮತ್ತು ಹೊಡೆಯುವುದು ದೇಹದಲ್ಲಿ ಸಂವೇದನೆಯನ್ನು ಉಂಟುಮಾಡುತ್ತದೆ, ಇದು ಪ್ರಚೋದನೆಯನ್ನು ಹೆಚ್ಚಿಸುತ್ತದೆ. ಮಹಿಳೆಯರ ಬಟಕ್ಸ್ ನ ಮಧ್ಯ ಭಾಗವನ್ನು ಸ್ಪರ್ಶಿಸಿದರೆ, ಅವರು ಹೆಚ್ಚು ಪ್ರಚೋದನೆ ಅನುಭವಿಸುತ್ತಾರೆ.

ಸ್ಕ್ರೋಟಮ್ ಮತ್ತು ಟೆಸ್ಟಿಕಲ್ಸ್  (scrotum and testicles)
ಮಹಿಳೆಯರು ತಮ್ಮ ಸಂಗಾತಿಯನ್ನು ಆಕರ್ಷಿಸಲು ತಮ್ಮ ಟ್ರಿಗರ್ ಪಾಯಿಂಟ್ ಗಾಗಿ ಹುಡುಕುತ್ತಿದ್ದರೆ, ಸ್ಕ್ರೋಟಮ್ ಮತ್ತು ಟೆಸ್ಟಿಕಲ್ಸ್ ಉತ್ತಮ ಆಯ್ಕೆ. ಇವೆರಡೂ ತುಂಬಾ ಸೂಕ್ಷ್ಮವಾಗಿರುತ್ತವೆ, ಅಲ್ಲಿ ಅನೇಕ ನರಗಳಿರುತ್ತವೆ, ಅದನ್ನು ಸ್ಪರ್ಶಿಸುವ ಮೂಲಕ ದೇಹ ಬಹಳ ಬೇಗನೆ ಉದ್ರೇಕಗೊಳ್ಳುತ್ತದೆ.  

ಫೋರ್ ಸ್ಕಿನ್  (foreskin)
ಫೋರ್ ಸ್ಕಿನ್ ಅನೇಕ ನರಗಳ ಅಂತ್ಯವಾಗಿದೆ, ಅದು ಪ್ರಚೋದಿಸಿದಾಗ ಅವುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಶಿಶ್ನವು ಸಂಪೂರ್ಣವಾಗಿ ನಿಮಿರಲು ಸಹಾಯ ಮಾಡುತ್ತದೆ. ಚರ್ಮದ ಈ ತೆಳುವಾದ ಪದರವು ವಿವಿಧ ರೀತಿಯ ಸಂವೇದನೆಗಳನ್ನು ಸೃಷ್ಟಿಸುತ್ತದೆ, ಈ ರೀತಿಯಾಗಿ ಪುರುಷರಲ್ಲಿ ಕಾಮಾಸಕ್ತಿ ಹೆಚ್ಚಿಸಬಹುದು.  

Latest Videos

click me!