ಮತ್ತೆ ಮದುವೆಯಾದ ಡಿವೋರ್ಸ್ಡ್‌ ಜೋಡಿ ಅದಿತಿ ರಾವ್ ಹೈದರಿ & ಸಿದ್ಧಾರ್ಥ್‌: ಫೋಟೋ ವೈರಲ್

First Published | Sep 16, 2024, 2:36 PM IST

ಬಾಲಿವುಡ್‌ ಹಾಗೂ ದಕ್ಷಿಣ ಸಿನಿಮಾ ರಂಗ ಎರಡರಲ್ಲೂ ಹೆಸರು ಮಾಡಿರುವ ನಟಿ ಅದಿತಿ ರಾವ್ ಹೈದರಿ ಅವರು ಮತ್ತೊಬ್ಬ ಸೌತ್‌ ಇಂಡಿಯನ್ ಸ್ಟಾರ್ ಸಿದ್ಧಾರ್ಥ್ ಅವರನ್ನು ಮದುವೆಯಾಗಿದ್ದು,  ಅವರ ಮದುವೆಯ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಾಲಿವುಡ್‌ ಹಾಗೂ ದಕ್ಷಿಣ ಸಿನಿಮಾ ಎರಡರಲ್ಲೂ ಹೆಸರು ಮಾಡಿರುವ ನಟಿ ಅದಿತಿ ರಾವ್ ಹೈದರಿ ಅವರು ಮತ್ತೊಬ್ಬ ಸೌತ್‌ ಇಂಡಿಯನ್ ಸ್ಟಾರ್ ಸಿದ್ಧಾರ್ಥ್ ಅವರನ್ನು ಮದುವೆಯಾಗಿದ್ದು,  ಅವರ ಮದುವೆಯ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ತೆಲಂಗಾಣದ ವನಪರ್ಥಿಯಲ್ಲಿರುವ 400 ವರ್ಷಗಳ ಹಳೆಯ ದೇಗುಲದಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಸರಳವಾಗಿ ನವ ಜೀವನಕ್ಕೆ ಕಾಲಿರಿಸಿದೆ. 

Tap to resize

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಮೊದಲ ಫೋಟೋವನ್ನು ಜೋಡಿ ಪೋಸ್ಟ್ ಮಾಡಿದ್ದು, ಹಲವು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸಿದ್ದಾರೆ. 

ನೀನು ನನ್ನ ಸೂರ್ಯ, ಚಂದ್ರ ಹಾಗೂ ನನ್ನ ಎಲ್ಲಾ ನಕ್ಷತ್ರಗಳು ನೀನೇ,  ಶಾಶ್ವತವಾಗಿ ಆತ್ಮಸಂಗಾತ್ಯದತ್ತ, ಶಾಶ್ವತವಾದ ಪ್ರೀತಿಯತ್ತ ಬೆಳಕು ಹಾಗೂ ಸಂಗೀತ, ಮಿಸ್ಟರ್ & ಮಿಸೆಸ್ ಅದು& ಸಿದ್ದು ಎಂದು ತಮ್ಮ ಮದುವೆಯ ಫೋಟೋ ಶೇರ್ ಮಾಡಿ ಅದಿತಿ ರಾವ್‌ ಬರೆದುಕೊಂಡಿದ್ದು, ಸಿದ್ಧಾರ್ಥ್‌ಗೆ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. 

ಮದುವೆಗಾಗಿ ಅದಿತಿ ಚಿನ್ನದ ಬಣ್ಣದ ಕೆತ್ತನೆಯ ಬಾರ್ಡರ್ ಇರುವ ಕೆನೆ ಬಣ್ಣದ ಸೀರೆ ಧರಿಸಿದ್ದರೆ, ಇತ್ತ ಸಿದ್ಧಾರ್ಥ್‌ ಪಕ್ಕ ದಕ್ಷಿಣ ಭಾರತ ಶೈಲಿಯ ಬಿಳಿ ಬಣ್ಣದ ವೇಸ್ಟಿ ಹಾಗೂ ಶರ್ಟ್ ಧರಿಸಿದ್ದಾರೆ.

 ಕಳೆದ ಮಾರ್ಚ್‌ನಲ್ಲಿ ಈ ಜೋಡಿ ತಾವಿಬ್ಬರು ಎಂಗೇಜ್ ಆಗಿರುವುದಾಗಿ ಬರೆದುಕೊಂಡಿದ್ದರು.  ಅವನು ಯೆಸ್ ಎಂದ ಎಂಗೇಜ್ಡ್‌ ಎಂದು ಅದಿತಿ ಇನ್ಸ್ಟಾದಲ್ಲಿ ಬರೆದುಕೊಂಡಿದ್ದರು, ಅದಕ್ಕೆ ಸಿದ್ಧಾರ್ಥ್ ಅವಳು ಯೆಸ್ ಅಂದಳು ಎಂದು ಬರೆದುಕೊಂಡಿದ್ದರು.

ಸಿದ್ಧಾರ್ಥ್‌ ಹಾಗೂ ಅದಿತಿ ಇಬ್ಬರು ವಿಚ್ಚೇದಿತರಾಗಿದ್ದು, ಈ ಹಿಂದೆ ಅದಿತಿ 2002ರಲ್ಲಿ ಮಾಜಿ ನಟ ಸತ್ಯದೀಪ್ ಮಿಶ್ರಾ ಅವರನ್ನು ಮದುವೆಯಾಗಿದ್ದರು. 2013ರಲ್ಲಿ 11 ವರ್ಷಗಳ ದಾಂಪತ್ಯದ ನಂತರ ಅವರಿಬ್ಬರು ದೂರಾಗಿದ್ದರು. 

ಹಾಗೆಯೇ ಸಿದ್ಧಾರ್ಥ್‌ ಕೂಡ 2003ರಲ್ಲಿ ಮೇಘನಾ ಎಂಬುವವರನ್ನು ಮದುವೆಯಾಗಿದ್ದು, 2006ರ ವೇಳೆಗೆ ಇಬ್ಬರು ಪರಸ್ಪರ ದೂರಾಗಿದ್ದರು. ನಂತರ 2007ರಲ್ಲಿ ಇಬ್ಬರು ವಿಚ್ಚೇದನ ಪಡೆದುಕೊಂಡಿದ್ದರು.  ಈಗ ಸಿದ್ಧಾರ್ಥ್ ಹಾಗೂ ಅದಿತಿ ವಿವಾಹವಾಗುವ ಮೂಲಕ ನವಜೀವನಕ್ಕೆ ಕಾಲಿರಿಸಿದ್ದಾರೆ. 

Latest Videos

click me!