ಯುವ ಸಮೂಹದಲ್ಲೇ ಡೇಟಿಂಗ್ ಹೊಸದಲ್ಲ. ಇದಕ್ಕಾಗಿ ಹಲವು ಆ್ಯಪ್‌ಗಳಿವೆ. ಇನ್ನು ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿ, ಬಳಿಕ ಡೇಟಿಂಗ್ ಹೋಗುವ ಪದ್ಧತಿಯೂ ಹೊಸದಲ್ಲ. ಆದರೆ ಇದೀಗ ಯುವ ಸಮೂಹ ಹೊಸ ಡೇಟಿಂಗ್‌ನತ್ತ ಒಲವು ತೋರಿಸುತ್ತಿದೆ. ಇದು ಆನ್‌ಲೈನ್ ಮೂಲಕ ಪರಿಚಯ ಮಾಡಿಕೊಂಡ ಅಥವಾ ಚಾಟಿಂಗ್ ಬಳಿಕ ಡೇಟಿಂಗ್ ಹೋಗುವ ಪದ್ಧತಿಯಲ್ಲ. ಇದು ಪೈನಾಪಲ್ ಡೇಟಿಂಗ್.
Pineapple
ಹೌದು, ಅನನಾಸು ಡೇಟಿಂಗ್. ಇದು ಸಂಪೂರ್ಣ ಆಫ್‌ಲೈನ್. ಇಲ್ಲಿ ಪೈನಾಪಲ್ ಹಣ್ಣೆ ವೇದಿಕೆ. ಹೇಗೆ ಸೋಶಿಯಲ್ ಮೀಡಿಯಾ, ಆ್ಯಪ್‌ಗಳು ಡೇಟಿಂಗ್ ಆರಂಭಿಸುವ, ಚಾಟಿಂಗ್ ಮಾಡಿ ಡೇಟಿಂಗ್ ಕರೆದುಕೊಂಡು ಹೋಗುವ ವೇದಿಕೆಯಾಗಿದೆಯೋ ಅದೆ ರೀತಿ ಇಲ್ಲಿ ಅನನಾಸು ಹಣ್ಣೆ ಪ್ಲಾಟ್‌ಫಾರ್ಮ್. ಹೀಗಾಗಿ ಇದು ಪೈನಾಪಲ್ ಡೇಟಿಂಗ್ ಎಂದು ಜನಪ್ರಿಯವಾಗುತ್ತಿದೆ.
ಇದು ಸ್ಪೈನ್‌ನಲ್ಲಿ ಆರಂಭಗೊಂಡ ಆಫ್‌ಲೈನ್ ಡೇಟಿಂಗ್. ಆದರೆ ಅಷ್ಟೇ ವೇಗದಲ್ಲಿ ಇತರೆಡೆ ಹರಡುತ್ತಿದೆ. ಸ್ಪೇನ್‌ನ ಮರ್ಸಡೋನಾ ಸೂಪರ್ ಮಾರ್ಕೆಟ್‌ನಲ್ಲಿ ಈ ಪೈನಾಪಲ್ ಡೇಟಿಂಗ್ ಆರಂಭಗೊಂಡಿದೆ. ಈ ಸೂಪರ್ ಮಾರ್ಕೆಟ್ ಈ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಈ ಟ್ರೆಂಡ್ ಇದೀಗ ಭಾರಿ ಜನಪ್ರಿಯತೆ ಪಡೆದುಕೊಂಡು ಹಲವರು ಪೈನಾಪಲ್ ಡೇಟಿಂಗ್ ಮೂಲಕ ರೊಮ್ಯಾನ್ಸ್ ಆರಂಭಿಸಿದ್ದಾರೆ.
ಈ ಸೂಪರ್ ಮಾರ್ಕೆಟ್‌ನಲ್ಲಿ ಸಂಜೆ 7 ಗಂಟೆಯಿಂ 8 ಗಂಟೆವರೆಗೆ ಪೈನಾಪಲ್ ಡೇಟಿಂಗ್‌ಗೆ ಅವಕಾಶ ನೀಡಲಾಗಿದೆ. ಇಲ್ಲಿ ಸಿಂಗಲ್ ಆಗಿದ್ದವರು ಈ ಸೂಪರ್ ಮಾರ್ಕೆಟ್‌ಗೆ ಆಗಮಿಸಿ ವಸ್ತಗಳನ್ನು ಖರೀದಿಸುವ ಕಾರ್ಟ್ ಟ್ರೋಲಿ ತೆಗೆದು ನೇರವಾಗಿ ಹಣ್ಣುಗಳ ಸಾಲಿನಿಂದ ಪೈನಾಪಲ್ ಹಣ್ಣ ತೆಗೆದು ಕಾರ್ಟ್‌ಗೆ ಹಾಕಿಕೊಳ್ಳತ್ತಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ಪೈನಾಪಲ್ ಹಣ್ಣನ್ನು ಉಲ್ಟಾ ಇಡಬೇಕು. ಅಂದರೆ ತಲೆಕೆಳಗಾಗಿ ಪೈನಾಪಲ್ ಹಣ್ಣನ್ನು ಕಾರ್ಟ್‌ನಲ್ಲಿ ಇಡಬೇಕು. ಹೀಗೆ ಸಿಂಗಲ್ ಆಗಿರುವವರು ಡೇಟಿಂಗ್ ಮಾಡಲು ಇಚ್ಚಿಸುವ ಎಲ್ಲರೂ ಹೀಗೆ ಮಾಡುತ್ತಾ ಶಾಪಿಂಗ್ ಮಾಡುತ್ತಾರೆ. ಈ ವೇಳೆ ಯಾರು ಇಷ್ಟವಾಗುತ್ತಾರೆ ಅವರ ಕಾರ್ಟ್‌ಗೆ ಮೆಲ್ಲನೆ ಡಿಕ್ಕಿ ಹೊಡೆದರೆ ಸಾಕು. ಅವರಿಗೂ ನಿಮ್ಮನ್ನು ಇಷ್ಟವಾದರೆ ಡೇಟಿಂಗ್ ಶುರು.
ಶಾಪಿಂಗ್ ಮಾಡುತ್ತಲೇ ಆಫ್‌ಲೈನ್ ಮೂಲಕ ಈ ಡೇಟಿಂಗ್ ಆರಂಭಗೊಳ್ಳುತ್ತದೆ. ನೋಡಿ ಇಷ್ಟವಾದರೆ, ಅವರಿಗೂ ಒಕೆಯಾದರೆ ಡೇಟಿಂಗ್. ಇದು ಹಳೇ ಜಮಾನದ ಕಾನ್ಸೆಪ್ಟ್. ಆದರೆ ವಿಧಾನ ಹೊಸದು. ಆನ್‌ಲೈನ್‌ನಲ್ಲೇ ಮುಳುಗಿ ಡೇಟಿಂಗ್ ಮಾಡೋ ಈ ಕಾಲದಲ್ಲಿ ಇದೀಗ ಆಫ್ ಲೈನ್ ಡೇಟಿಂಗ್ ಭಾರಿ ಸದ್ದು ಮಾಡುತ್ತಿದೆ.