30 ಲಕ್ಷ ರೂ ವೇತನ,ಪೋಷಕರಿಂದ ದೂರ: ಭಾವಿ ಪತಿಗೆ ಇರಬೇಕಾದ ಅರ್ಹತೆ ಲಿಸ್ಟ್ ನೀಡಿದ ಮಹಿಳೆ!

First Published | Sep 12, 2024, 5:39 PM IST

ಪೋಷಕರಿಂದ ದೂರ, 30 ಲಕ್ಷ ರೂಪಾಯಿ ಸಂಬಳ, ಕನಿಷ್ಠ 3 ಬೆಡ್ ರೂಂ ಮನೆ ..ಸೇರಿದಂತೆ ಹಲವು ಅರ್ಹತೆಗಳಿರುವ ವರ ಬೇಕಾಗಿದ್ದಾನೆ ಎಂದು ಮಹಿಳೆ ಪಟ್ಟಿ ನೀಡಿದ್ದಾಳೆ. ಈ ಪಟ್ಟಿ ನೋಡಿ ಜನ ಸಲಹೆ ನೀಡಿದ್ದಾರೆ. 
 

ಮದುವೆಯಾಗಲು ವರ ಬೇಕಾಗಿದ್ದಾನೆ. ಆದರೆ ವರನಿಗೆ ಕೆಲ ಅರ್ಹತೆಗಳಿರಬೇಕು ಅನ್ನೋದು ಮಹಿಳೆಯ ಪಟ್ಟು. ಈ ಪೈಕಿ ಹುಡುಗ ಪೋಷಕರಿಂದ ದೂರವಿರಬೇಕು, ಪೋಷಕರು ಇಲ್ಲದಿದ್ದರೂ ಇನ್ನೂ ಉತ್ತಮ. 30 ಲಕ್ಷ ರೂ ಸಂಬಳ ಇರಬೇಕು, ಕನಿಷ್ಠ 2ಬೆಡ್ ರೂಂ ಮನೆ ಇರಬೇಕು ಸೇರಿದಂತೆ ಒಂದರ ಮೇಲೊಂದರಂತೆ ಪಟ್ಟಿ ನೀಡಿದ್ದಾಳೆ. 
 

ಮಹಿಳೆಯ ನೀಡಿದ ಅರ್ಹತೆಗಳ ಪಟ್ಟಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ನೆಟ್ಟಿಗರ ಗಮನಸೆಳೆದಿದೆ. ಈ ಪಟ್ಟಿಯಲ್ಲಿ ಮಹಿಳೆ ತಾನು ತಿಂಗಳಿಗೆ 1.32 ಲಕ್ಷ ರೂ ಸಂಬಂಳ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಈಕೆ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದಾಳೆ. ಆದರೆ ತನಗೆ ಮದುವೆಯಾಗದ ಪುರುಷರೇ ಬೇಕು ಎಂದಿದ್ದಾಳೆ.
 

Tap to resize

ಮಹಿಳೆ ಬಿಎಡ್ ಡಿಗ್ರಿ ಮಾಡಿದ್ದಾಳೆ ಎಂದು ಹೇಳಿದ್ದಾಳೆ. ವರ ಭಾರತದಲ್ಲಿದ್ದರೆ ವರ್ಷಕ್ಕೆ 30 ಲಕ್ಷ ರೂಪಾಯಿ ವೇತನ, ವಿದೇಶದಲ್ಲಿದ್ದರೆ ಕನಿಷ್ಠ 80 ಲಕ್ಷ ರೂಪಾಯಿ ವೇತನ ಇರಬೇಕು ಎಂದು ಬಯಸಿದ್ದಾಳೆ. ಇದರ ಜೊತೆಗೆ ಐಷಾರಾಮಿ ಜೀವನ, ಪ್ರಯಾಣ, ಪ್ರವಾಸ ಸೇರಿದಂತೆ ಕೆಲ ಗುಣಗಳು ಮದುವೆಯಾಗಲು ಬಯಸುವ ವರನಿಗೆ ಇರಬೇಕು ಎಂದು ಪಟ್ಟಿ ಮಾಡಿದ್ದಾಳೆ.
 

ಕನಿಷ್ಠ 3 ಬೆಡ್ ರೂಂ ಮನೆ ಇರಬೇಕು. ಆದರೆ ಮನೆಯಲ್ಲಿ ಪೋಷಕರು ಇರಬಾರದು. ಪೋಷಕರಿಂದ ದೂರವಿರಬೇಕು ಎಂದು ಸ್ಪಷ್ಟವಾಗಿ ಮಹಿಳೆ ಉಲ್ಲೇಖಿಸಿದ್ದಾಳೆ. ಆದರೆ ತನ್ನ ಪೋಷಕರು ತನ್ನ ಜೊತೆಯಲ್ಲೇ ಇರುತ್ತಾರೆ ಎಂದಿದ್ದಾಳೆ.  ಕೆಲಸದ ಕಾರಣ ಮನೆಯಲ್ಲಿನ ಕೆಲಸ ಮಾಡಲು ಸಾಧ್ಯವಿಲ್ಲ. ಆಡುಗೆ, ಪಾತ್ರೆ ತೊಳೆಯುವುದು, ಬಟ್ಟೆ ಜೋಡಿಸಲು, ಮನೆಯ ಕ್ಲೀನಿಂಗ್ ಸೇರಿದಂತೆ ಎಲ್ಲಾ ಮನೆಗೆಲಕ್ಕೆ ಆಳುಗಳನ್ನು ಇಟ್ಟುಕೊಳ್ಳುವಂತಿರಬೇಕು. 
 

ಹುಡುಗನ ವಯಸ್ಸು 34 ರಿಂದ 39ರ ಒಳಗೆ ಇರಬೇಕು. ಮಾಂಸಾಹಾರಿಯಾಗಿರಬೇಕು. ಆದರೆ ಕುಡಿತ, ಸಿಗರೇಟು ಚಟ ಇರಬಾರದು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿರಬೇಕು. ಈ ಎಲ್ಲಾ ಗುಣಗಳಿರುವ ನೋಡಲು ಸುಂದರವಾಗಿರುವ, ಉತ್ತಮ ಗುಣನಡೆತೆ ಹೊಂದಿರುವ ವರ ಬೇಕಾಗಿದ್ದಾನೆ ಎಂದು ಮಹಿಳೆ ದೊಡ್ಡ ಪಟ್ಟಿಯನ್ನೇ ನೀಡಿದ್ದಾಳೆ. 
 

ಈ ಮಹಿಳೆಯ ಪಟ್ಟಿ ನೋಡಿ, ನೀನು ಮದುವೆಯಾಗದಿರುವುದೇ ಒಳಿತು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.  ಪೋಷಕರಿಂದ ದೂರವಿರಬೇಕು, ಐಷಾರಾಮಿ ಹೊಟೆಲ್‌ಗಳಲ್ಲಿ ಉಳಿದುಕೊಳ್ಳುವ ಹವ್ಯಾಸ ಇರಬೇಕು ಎಂದೆಲ್ಲಾ ಹೇಳಿದ್ದಾರೆ. ಈಕೆ ಮದುವೆಯಾಗುವ ವರನಿಗೆ ಮೊದಲೇ ಆಲ್ ದಿ ಬೆಸ್ಟ್ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
 

Latest Videos

click me!