12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದ್ವೆಯಾಗಲು ಆತನ ಹೆಂಡ್ತಿಗೆ 1.5 ಕೋಟಿ ಕೊಟ್ಟ ಮಹಿಳೆ

Published : Feb 16, 2026, 02:49 PM IST

54 ವರ್ಷದ ಮಹಿಳಾ ಅಧಿಕಾರಿಯೊಬ್ಬರು ತಮಗಿಂತ 12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಪ್ರೀತಿಸಿದ್ದಾರೆ. ಆತನನ್ನು ಮದುವೆಯಾಗುವ ಸಲುವಾಗಿ, ಆತನ ಪತ್ನಿಗೆ ವಿಚ್ಛೇದನ ನೀಡಲು ಸುಮಾರು 1.5 ಕೋಟಿ ರೂಪಾಯಿ ಪರಿಹಾರ ನೀಡಿ, ಕೊನೆಗೆ ತಮ್ಮ ಪ್ರೀತಿಯನ್ನು ಗೆಲ್ಲಿಸಿಕೊಂಡಿದ್ದಾರೆ.

PREV
16
12 ವರ್ಷ ಚಿಕ್ಕವನಾದ ಸಹೋದ್ಯೋಗಿ

ಪ್ರೀತಿಸಿದವರಿಗಾಗಿ ಏನು ಬೇಕಾದರೂ ಮಾಡಲು ಕೆಲವರು ಸಿದ್ಧರಿರುತ್ತಾರೆ. ಅಂತಹದ್ದೇ ಒಂದು ವಿಚಿತ್ರ ಪ್ರೇಮಕಥೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲೊಬ್ಬರು 54 ವರ್ಷದ ಮಹಿಳಾ ಅಧಿಕಾರಿ, ತಮಗಿಂತ 12 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದುವೆಯಾಗಲು, ಆತನ ಹೆಂಡತಿಗೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ಕೊಟ್ಟಿದ್ದಾರೆ.

26
54 ವರ್ಷದ ಮಹಿಳೆ

ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರಿ ಉದ್ಯೋಗಿಯಾಗಿರುವ 54 ವರ್ಷದ ಮಹಿಳೆ, ತಮ್ಮದೇ ಇಲಾಖೆಯ 42 ವರ್ಷದ ಸಹೋದ್ಯೋಗಿಯನ್ನು ಮದುವೆಯಾಗಲು ಈ ದಾರಿ ಹಿಡಿದಿದ್ದಾರೆ. ಈ ವಿಷಯವನ್ನು ಅವರ ಸಹೋದ್ಯೋಗಿಯ ಹಿರಿಯ ಮಗಳು ಕೋರ್ಟ್ ಮೆಟ್ಟಿಲೇರಿದಾಗ ಬಹಿರಂಗವಾಯಿತು. ಈ ಘಟನೆಯನ್ನು ನೆಟ್ಟಿಗರು 90ರ ದಶಕದ ಹಿಟ್ ಸಿನಿಮಾ "ಜುದಾಯಿ"ಗೆ ಹೋಲಿಸುತ್ತಿದ್ದಾರೆ.

36
ಪ್ರೀತಿಗೆ ವಯಸ್ಸಿನ ಅಂತರವಿಲ್ಲವೇ?

ಕೇಂದ್ರ ಸರ್ಕಾರಿ ಇಲಾಖೆಗೆ ಹೊಸದಾಗಿ ಕೆಲಸಕ್ಕೆ ಸೇರಿದ್ದ 42 ವರ್ಷದ ಉದ್ಯೋಗಿ ಮೇಲೆ, ಅದೇ ಇಲಾಖೆಯ 54 ವರ್ಷದ ಹಿರಿಯ ಅಧಿಕಾರಿಗೆ ಪ್ರೀತಿ ಹುಟ್ಟಿದೆ. ಈ ಅಫೇರ್ ಶುರುವಾದ ಮೇಲೆ, ಆತ ತನ್ನ ಹೆಂಡತಿ ಹಾಗೂ 16 ಮತ್ತು 12 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಕಡೆಗಣಿಸಲು ಶುರುಮಾಡಿದ. ಮನೆಯಲ್ಲಿ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ದಿನವೂ ಜಗಳ ನಡೆಯುತ್ತಿತ್ತು.

46
ಹೆಂಡತಿ ಜೊತೆ ಬಾಳಲು ಆಗ್ತಿಲ್ಲ

ಇದರಿಂದ ಬೇಸತ್ತ ಹಿರಿಯ ಮಗಳು ಖಿನ್ನತೆಗೆ ಜಾರಿದ್ದಳು. ಕೊನೆಗೆ, ಮನೆಯಲ್ಲಿ ಶಾಂತಿ ಬೇಕೆಂದು ಆಕೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದಳು. ಕೋರ್ಟ್‌ನಲ್ಲಿ ಸುಮಾರು ಐದು ವರ್ಷಗಳ ಕಾಲ ದಂಪತಿಗೆ ಕೌನ್ಸೆಲಿಂಗ್ ನಡೆಸಲಾಯಿತು. ಆದರೆ, ಗಂಡ ಮಾತ್ರ ತನಗೆ ಹೆಂಡತಿ ಜೊತೆ ಬಾಳಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ.

56
ವಿಚ್ಛೇದನಕ್ಕೆ ಸಿಕ್ಕಿತು ಭಾರಿ ಪರಿಹಾರ

ಕೊನೆಗೆ, ಗಂಡನಿಂದ ವಿಚ್ಛೇದನ ಪಡೆಯಲು ಪತ್ನಿ ಪರಿಹಾರಕ್ಕೆ ಬೇಡಿಕೆಯಿಟ್ಟರು. ಒಂದು ಡ್ಯೂಪ್ಲೆಕ್ಸ್ ಫ್ಲ್ಯಾಟ್ ಹಾಗೂ 27 ಲಕ್ಷ ರೂಪಾಯಿ ನಗದು ನೀಡಬೇಕೆಂದು ಕೇಳಿದರು. ಇದಕ್ಕೆ ಒಪ್ಪಿದ ಮಹಿಳಾ ಅಧಿಕಾರಿ, ತಮ್ಮ ಜೀವನದ ಸಂಪಾದನೆಯಿಂದಲೇ ಈ ಹಣವನ್ನು ಕೊಡುವುದಾಗಿ ಹೇಳಿದರು. ಒಪ್ಪಂದದಂತೆ ಹಣ ಕೈಸೇರಿದ ನಂತರ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಗಂಡನೂ ಇಲ್ಲ, ಡೇವಿಡ್ಡೂ ಸಿಗಲಿಲ್ಲ: ಪೊಲೀಸ್ ಠಾಣೆಯಿಂದ ಹೋಗಿದ್ದೆಲ್ಲಿಗೆ ಡ್ರಾಮಾ ಕ್ವೀನ್ ಪ್ರಿಯಾಂಕಾ!

66
ನ್ಯಾಯಾಲಯ ಹೇಳಿದ್ದೇನು?

ಆ ಹಿರಿಯ ಅಧಿಕಾರಿ ತನ್ನ ಪ್ರಿಯಕರನಾದ ಸಹೋದ್ಯೋಗಿಯನ್ನು ಮದುವೆಯಾದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕೌಟುಂಬಿಕ ನ್ಯಾಯಾಲಯದ ಕೌನ್ಸೆಲರ್‌ಗಳು, 'ಬಲವಂತವಾಗಿ ಸಂಬಂಧದಲ್ಲಿ ಉಳಿಸುವುದಕ್ಕಿಂತ, ಗೌರವಯುತವಾಗಿ ಬೇರೆಯಾಗುವುದು ಉತ್ತಮ. ಮಕ್ಕಳ ಮಾನಸಿಕ ಆರೋಗ್ಯ ಮತ್ತು ಕುಟುಂಬದ ಆರ್ಥಿಕ ಭದ್ರತೆಗೂ ಇದೇ ಸರಿ' ಎಂದು ಅಭಿಪ್ರಾಯಪಟ್ಟರು. ಅಂದಹಾಗೆ, ಮಧ್ಯಪ್ರದೇಶವು ಭಾರತದಲ್ಲಿ ಅತಿ ಹೆಚ್ಚು ವಿಚ್ಛೇದನ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಯಾರೇ ನೀನು ಚೆಲುವೆ? ಹುಡ್ಗೀರೂ ಹೊಟ್ಟೆ ಉರಿದುಕೊಳ್ಳುವಷ್ಟು ಸುಂದರಿ, ಯಾರೀ ಮಾಯಗಾತಿ?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories