ಮಕ್ಕಳ ಮದ್ವೆ ಟೈಮಲ್ಲಿ ಹನಿಮೂನ್ ಹೊರಟ್ರ ಸಚಿನ್ & ಅಂಜಲಿ: ಫೋಟೋಸ್ ಸಖತ್ ವೈರಲ್

First Published | Feb 25, 2024, 3:47 PM IST

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಕಾಶ್ಮೀರದ ಮಂಜಲ್ಲಿ ಇಬ್ಬರು ಮಕ್ಕಳಂತೆ ಆಟವಾಡುತ್ತಿರುವ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಕಾಶ್ಮೀರದ ಮಂಜಲ್ಲಿ ಇಬ್ಬರು ಮಕ್ಕಳಂತೆ ಆಟವಾಡುತ್ತಿರುವ ಫೋಟೋ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಾಶ್ಮೀರ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದು, ಅಂಜಲಿ ಹಾಗೂ ತೆಂಡೂಲ್ಕರ್ ಇಬ್ಬರು ಮಂಜಿನಲ್ಲಿ ಮಕ್ಕಳಂತೆ ಆಡುವುದನ್ನು ಕಾಣಬಹುದಾಗಿದೆ.

Tap to resize

ಇತ್ತೀಚೆಗಷ್ಟೇ ಅವರು ಕಾಶ್ಮೀರದ ಪಹಾಲ್ಗಾಮ್‌ನಲ್ಲಿ ಮೊದಲ ಮಂಜಿನ ಮಳೆಯನ್ನು ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಅದೇ ರೀತಿ ಈಗ ಪತ್ನಿ ಜೊತೆ ಕಳೆಯುತ್ತಿರುವ ರೋಮ್ಯಾಂಟಿಕ್ ಕ್ಷಣಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

ಲವ್ ಅಟ್ ಫೋರ್ಸ್ಟ್‌( ಮಂಜಿನಿಂದ ಕೂಡಿದ್ದ ಸ್ಥಳ) ಸೈಟ್ ಎಂದು ಬರೆದುಕೊಂಡಿರುವ ಸಚಿನ್ ಫೋಟೋಗಳಲ್ಲಿ ಪುಟ್ಟ ಮಕ್ಕಳಂತೆ ಮಂಜಿನಲ್ಲಿ ಬಿದ್ದು ಹೊರಳಾಡುತ್ತಿರುವ ಫೋಟೋಗಳನ್ನು ನೋಡಬಹುದು. 

ಇಬ್ಬರು ಚಳಿಯಿಂದ ರಕ್ಷಿಸಿಕೊಳ್ಳಲು ಸೂಟ್ ಬೂಟಿನೊಂದಿಗೆ ತಮ್ಮನ್ನು ತಾವು ಕವರ್ ಮಾಡಿಕೊಂಡು ಮಂಜಿನಾಟವಾಡುತ್ತಿದ್ದಾರೆ.  ಇವರ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡ್ತಿದ್ದಾರೆ. 


ಕೆಲವರು ನಿಮ್ಮಂತೆ ಕಾಶ್ಮೀರದ ಬಗ್ಗೆ ಯಾರೂ ಪ್ರಮೋಟ್ ಮಾಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಸಚಿನ ಒಳಗೊಬ್ಬ ಮಗುವಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಕಾಶ್ಮೀರ ಪ್ರವಾಸದಲ್ಲಿರುವ ಸಚಿನ್ ತೆಂಡೂಲ್ಕರ್ ಕೈಗಳಿಲ್ಲದ ಕಾಶ್ಮೀರಿ ಕ್ರಿಕೆಟಿಗ ಭಾರತದ ಪ್ಯಾರಾ ಕ್ರಿಕೆಟ್ ಟೀಮ್‌ನಲ್ಲಿ ಸ್ಥಾನ ಪಡೆದಿರುವ ಆಮೀರ್‌ನನ್ನು ಭೇಟಿಯಾಗಿ ಹುರಿದುಂಬಿಸಿದ್ದರು.
 

ಜೊತೆಗೆ ಕಾಶ್ಮೀರದ ಪಶ್ಮೀನಾ ಶಾಲುಗಳ ನಿರ್ಮಾಣ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿ ಉಣ್ಣೆಯಿಂದ ಶಾಲುಗಳನ್ನು ತಯಾರಿಸುವ ಕೆಲಸವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. 
 

Latest Videos

click me!