ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹಕ್ಕೆ ಈ ರೀತಿ ಇರುತ್ತಂತೆ ಡ್ರೆಸ್‌ಕೋಡ್‌!

First Published | Feb 23, 2024, 9:30 AM IST

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪೂರ್ವ ವಿವಾಹ ಸಮಾರಂಭಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಈ ಅದ್ಧೂರಿ ವಿವಾಹಕ್ಕೆ ನಿರ್ಧಿಷ್ಟ ಡ್ರೆಸ್‌ಕೋಡ್‌ನ್ನು ಆಯ್ಕೆ ಮಾಡಲು ಅಂಬಾನಿ ಫ್ಯಾಮಿಲಿ ಯೋಜನೆ ರೂಪಿಸುತ್ತಿದೆ. ಏನದು?

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಜಾಮ್‌ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವಿಶ್ವದ ಕೋಟ್ಯಧಿಪತಿಗಳು ದಂಡು ಆಗಮಿಸುವ ನಿರೀಕ್ಷೆಯಿದೆ.

ವಿವಾಹ ಪೂರ್ವದ ಕಾರ್ಯಕ್ರಮಗಳು ಮಾರ್ಚ್ 1ರಂದು ಪ್ರಾರಂಭವಾಗಲಿದ್ದು, ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 3ರ ವರೆಗೆ ನಡೆಯಲಿದೆ. ಮದುವೆಯ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ. ಇನ್ನು ಈ ಅದ್ಧೂರಿ ವಿವಾಹಕ್ಕೆ ನಿರ್ಧಿಷ್ಟ ಡ್ರೆಸ್‌ಕೋಡ್‌ನ್ನು ಆಯ್ಕೆ ಮಾಡಲು ಅಂಬಾನಿ ಫ್ಯಾಮಿಲಿ ಯೋಜನೆ ರೂಪಿಸುತ್ತಿದೆ.

Tap to resize

ರಾಜಮನೆತನದ ಸೊಬಗಿನಿಂದ ಅಲಂಕರಿಸಲ್ಪಟ್ಟ ಆಮಂತ್ರಣವು ಆತ್ಮೀಯ ಸ್ವಾಗತವನ್ನು ನೀಡುವುದಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನಿಖರವಾದ ಡ್ರೆಸ್‌ಕೋಡ್‌ನ್ನು ನಿಗದಿಪಡಿಸಲಾಗುತ್ತದೆ. 
 

ಮದುವೆ ಕಾರ್ಯಕ್ರಮಗಳ ಮೊದಲ ದಿನದ ಡ್ರೆಸ್ ಕೋಡ್‌ನ್ನು 'ಆನ್ ಈವ್ನಿಂಗ್ ಇನ್ ಎವರ್‌ಲ್ಯಾಂಡ್' ಎಂದು ಹೆಸರಿಸಲಾಗಿದೆ. ಇದು ಸೊಗಸಾದ ಕಾಕ್‌ಟೈಲ್ ಒಪ್ಪುವಂಥಾ ಉಡುಪಿನೊಂದಿಗೆ ಬರುತ್ತದೆ. ಅತಿಥಿಗಳು ಅತ್ಯುತ್ತಮ ಸಂಜೆಯ ಉಡುಗೆಗಳನ್ನು ಧರಿಸಲು ಪ್ರೋತ್ಸಾಹಿಸಲಾಗುತ್ತದೆ.

ಮರುದಿನ 'ಎ ವಾಕ್ ಆನ್ ದಿ ವೈಲ್ಡ್‌ಸೈಡ್' ಕಾನ್ಸೆಪ್ಟ್ ಇಡಲಾಗುತ್ತಿದೆ. ಅಲ್ಲಿ  'ಜಂಗಲ್ ಫೀವರ್'ನ ಡ್ರೆಸ್ ಕೋಡ್‌ ಅನ್ವಯಿಸಲಾಗುತ್ತದೆ. ಅಂಬಾನಿಗಳ ಪ್ರಾಣಿ ರಕ್ಷಣಾ ಕೇಂದ್ರದ ಮೂಲಕ ಅತಿಥಿಗಳು ಪ್ರಯಾಣಿಸುತ್ತಿರುವಾಗ, ಉಡುಪುಗಳು ಆರಾಮದಾಯಕ ಮತ್ತು ಆಕರ್ಷಕವಾಗಿರುವಂತೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.

ಅಂತಿಮ ದಿನವು 'ಟಸ್ಕರ್ ಟ್ರೇಲ್ಸ್' ಥೀಮ್‌ನೊಂದಿಗೆ ಜಾಮ್‌ನಗರದ ಪ್ರಶಾಂತ ಸೌಂದರ್ಯದಲ್ಲಿ ಪಾಲ್ಗೊಳ್ಲಲು ಅತಿಥಿಗಳನ್ನು ಆಹ್ವಾನಿಸುತ್ತದೆ, ಅಲ್ಲಿ ಸಾಂದರ್ಭಿಕ ಚಿಕ್ ಉಡುಗೆಯು ಮದುವೆಯ ಸಂಭ್ರಮವನ್ನು ಹೆಚ್ಚಿಸಲಿದೆ.

ಅಂತಿಮವಾಗಿ, ಹಸ್ತಾಕ್ಷರ್, ಅಂದರೆ ಸಹಿ, ಪರಂಪರೆಯ ಭಾರತೀಯ ಉಡುಪುಗಳ ಸಂಜೆಯೊಂದಿಗೆ ಸಂಭ್ರಮಾಚರಣೆಯನ್ನು ಭವ್ಯವಾದ ಮುಕ್ತಾಯಕ್ಕೆ ತರುತ್ತದೆ. ಅತಿಥಿಗಳು ತಮ್ಮ ಸೊಗಸಾದ ಉಡುಪಿನೊಂದಿಗೆ ಈ ಸಂದರ್ಭವನ್ನು ಅಲಂಕರಿಸಿದಂತೆ, ಅವರು ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಭಾಗಿಯಾಗಲಿದ್ದಾರೆ

ಉಡುಪನ್ನು ಮೀರಿ, ಆಚರಣೆಗಳು ಹೇರ್ ಸ್ಟೈಲಿಸ್ಟ್‌ಗಳು ಮತ್ತು ಸೀರೆ-ಡ್ರೇಪರ್‌ಗಳಿಂದ ಮೇಕ್ಅಪ್ ಸೇವೆಗಳವರೆಗೆ ಮದುವೆ ವೈಭವದಿಂದ ಕೂಡಿರಲಿದೆ. ಪ್ರತಿಯೊಬ್ಬ ಅತಿಥಿಯು ಐಷಾರಾಮಿ ಮತ್ತು ವೈಭವದ ರೆಡಿಯಾಗಿರುವುದನ್ನು ಖಚಿತಪಡಿಸಲಾಗುತ್ತದೆ.

ಸೆಲೆಬ್ರಿಟಿಗಳ ಪ್ರದರ್ಶನಗಳು, ಜಗತ್ತಿನ ಹಲವು ಅತಿಥಿಗಳ ಆಗಮನದ ಮದುವೆಯ ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದೆ. ಒಟ್ನಲ್ಲಿ ಅಂಬಾನಿ ಕುಟುಂಬ ಅದ್ಧೂರಿ ಮದುವೆಗೆ ಸಜ್ಜಾಗುತ್ತಿದೆ.

Latest Videos

click me!