Gen Z Girls And Boys: ಕಾಲೇಜು ದಿನಗಳಲ್ಲಿ ಹುಡುಗ-ಹುಡುಗಿ ಒಬ್ಬರಿಗೊಬ್ಬರು ಆಕರ್ಷಿತರಾಗುವುದು ಸಹಜ. Gen-Z ಹುಡುಗರನ್ನು ಆಕರ್ಷಿಸುವ ಹುಡುಗಿಯರ ಕೆಲವು ಚಲನವಲನಗಳು ಮತ್ತು ಲಕ್ಷಣಗಳನ್ನು ಈ ಲೇಖನ ವಿವರಿಸುತ್ತದೆ.
ಹದಿಹರೆಯದಲ್ಲಿ ಹುಡುಗ-ಹುಡುಗಿ ಒಬ್ಬರಿಗೊಬ್ಬರು ಆಕರ್ಷಿತರಾಗೋದು ತುಂಬಾ ಸಹಜ. ಇತ್ತೀಚೆಗೆ ಕಾಲೇಜು ದಿನಗಳಲ್ಲಿಯೇ ಪ್ರೇಮಪಾಶದಲ್ಲಿ ಸಿಲುಕುತ್ತಾರೆ. ಆದರೆ ಇದನ್ನು ಕೇವಲ ಆಕರ್ಷಣೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಹುಡುಗಿಯರ ಕೆಲವು ಚಲನವಲನಗಳು ಇಂದಿನ Gen-Z ಹುಡುಗರನ್ನು ಆಕರ್ಷಿಸುತ್ತವೆ. Gen-Z ಯುವಕರನ್ನು ಆಕರ್ಷಿಸುವ ಕೆಲವು ಲಕ್ಷಣಗಳು ಇಲ್ಲಿವೆ.
26
ಹುಡುಗಿ ಕಾರ್, ಸ್ಕೂಟಿ ಚಾಲನೆ ಮಾಡ್ತಿದ್ರೆ ಹುಡುಗರಿಗೆ ಇಷ್ಟವಾಗುತ್ತದೆ. ಡ್ರೈವಿಂಗ್ ಕೆಟ್ಟದಾಗಿ ಮಾಡ್ತಿದ್ರೂ ಅಂತ ಹುಡುಗಿಯರತ್ತ Gen-Z ಹುಡುಗರು ಆಕರ್ಷಿತರಾಗುತ್ತಾರೆ. ಫ್ರೆಂಡ್ಸ್ ಗ್ರೂಪ್ ಅಂದ್ರೆ ಅಲ್ಲಿ ಯುವಕ ಮತ್ತು ಯುವತಿಯರಿರುತ್ತಾರೆ. ಮಾತನಾಡುವ ಸಂದರ್ಭದಲ್ಲಿ ಹುಡುಗಿ ಪ್ರೀತಿಯಿಂದ ಶಟ್-ಅಪ್ ಅಂತ ಬೈದರೂ ಇಷ್ಟವಾಗ್ತಾರಂತೆ.
36
ಆಫಿಸ್‌ಗೆ ಬರೋ ಮಹಿಳೆ ಸರಿಯಾದ ಔಟ್‌ಫಿಟ್ ಧರಿಸುತ್ತಿದ್ರೆ ಆಕೆಯತ್ತ ಪುರುಷರು ಆಕರ್ಷಣೆಗೊಳಗಾಗುತ್ತಾರೆ. ವೆಲ್ ಡ್ರೆಸ್ ಮಾಡುವ ಯುವತಿಯರು ಜೀವನದಲ್ಲಿ ತುಂಬಾನೇ ಶಿಸ್ತು ರೂಢಿಸಿಕೊಂಡಿರುತ್ತಾರೆ ಎಂಬ ನಂಬಿಕೆ ಇದೆ. ಮೊದಲಿನಿಂದಲೂ ವೆಲ್ ಡ್ರೆಸ್ ಮಹಿಳೆಯರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ.
ಪಾರ್ಟಿ, ಪ್ರಯಾಣ ಅಥವಾ ಯಾವುದೇ ಸಂದರ್ಭದಲ್ಲಿ ಹುಡುಗಿ ತನ್ನ ಮೊಬೈಲ್‌ನ್ನು ಪಾಕೆಟ್‌ನಲ್ಲಿರಿಸಿಕೊಳ್ಳಲು ನೀಡಿದ್ರೆ ಆ ಹುಡುಗ ಫುಲ್ ಫಿದಾ ಆಗುತ್ತಾನೆ. ಇದರರ್ಥ ಆಕೆ ತನ್ನನ್ನು ಸಂಪೂರ್ಣವಾಗಿ ನಂಬುತ್ತಾಳೆ ಎಂದು ಭಾವಿಸುತ್ತಾನೆ. ಹುಡುಗ ಸಹ ಮೊಬೈಲ್ ಕಾಪಾಡೋದು ತನ್ನ ಕರ್ತವ್ಯ ಎಂಬಂತೆ ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾನೆ.
56
ಹುಡುಗರು ನೀಡಿದ ಆಹಾರವನ್ನು ಹುಡುಗಿ ಇಷ್ಟಪಟ್ಟು ತಿಂದು ಅದರ ಬಗ್ಗೆ ಪದೇ ಪದೇ ಮೆಚ್ಚುಗೆ ಸೂಚಿಸಿದ್ರೆ ಬಾಯ್ಸ್ ಫುಲ್ ಹ್ಯಾಪಿ ಹ್ಯಾಪಿ ಆಗ್ತಾರೆ. ಎಲ್ಲರೊಂದಿಗಿರುವಾಗ ಜೋರಾಗಿ ಮನಸ್ಸು ತುಂಬಿ ನಗುವ ಹುಡುಗಿಯರು ಬಾಯ್ಸ್‌ಗೆ ಕ್ಯೂಟ್ ಆಗಿ ಕಾಣಿಸುತ್ತಾರೆ. ಈ ರೀತಿಯಾಗಿರುವ ಹುಡುಗಿಯರು ಯಾವುದೇ ಮುಚ್ಚುಮರೆ ಮಾಡಲ್ಲ ಎಂದು ಹುಡುಗರು ತಿಳಿದುಕೊಳ್ಳುತ್ತಾರೆ.
66
ಯಾವುದೇ ಕಾರಣ ಇಲ್ಲದೇ ಮಾತನಾಡುತ್ತಾ ಹುಡುಗಿ ತಾನು ಧರಿಸಿದ್ದ ಕನ್ನಡಕವನ್ನು ತಲೆ ಮೇಲೆ ಹಾಕಿಕೊಳ್ಳೋದು ಸಹ ಪುರುಷರನ್ನು ಆಕರ್ಷಿಸುತ್ತದೆ. ಇನ್ನು ಹುಡುಗಿಯರ ಮೆಸ್ಸಿ ಲುಕ್ (ಓವರ್ ಸೈಜ್ ಟೀಶರ್ಟ್, ನಿದ್ದೆಮಂಪರು) ಹುಡುಗಿಯರು ಹುಡುಗರಿಗೆ ಕ್ಯೂಟ್ ಆಗಿ ಕಾಣಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.