ಫ್ಯಾಷನ್ ಟ್ರೆಂಡ್ ಗಳು (fashion trend) ಸಮಯ ಕಳೆದಂತೆ ಬದಲಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಸಣ್ಣ ಕೂದಲಿನ ಟ್ರೆಂಡ್ ಬರುತ್ತದೆ, ಕೆಲವೊಮ್ಮೆ ಉದ್ದ ಕೂದಲಿನ ಟ್ರೆಂಡ್ ಮತ್ತು ಕೆಲವೊಮ್ಮೆ ಸಣ್ಣ ಕೂದಲಿನ ಕ್ರೇಜ್ ಹೆಚ್ಚಾಗುತ್ತದೆ. ಆದರೆ ಚಲನಚಿತ್ರಗಳಲ್ಲಿ, ನಾಯಕಿಯರು ಹೆಚ್ಚಾಗಿ ತಮ್ಮ ಉದ್ದನೆಯ ಕೂದಲನ್ನು ಓಪನ್ ಆಗಿ ಬಿಟ್ಟುಕೊಂಡಿರೋದನ್ನೆ ನಾವು ಹೆಚ್ಚಾಗಿ ಕಂಡಿದ್ದೀವಿ. 'ಕುಚ್ ಕುಚ್ ಹೋತಾ ಹೈ' (Kuch Kuch Hota Hai) ಸಿನಿಮಾ ನೆನಪಿಸಿಕೊಳ್ಳಿ, ಅಲ್ಲಿ ಸಣ್ಣ ಕೂದಲಿನ ಅಂಜಲಿ, ವರ್ಷಗಳ ಬಳಿಕ ರಾಹುಲ್ ಮುಂದೆ ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಾಗ, ರಾಹುಲ್ ಗೆ ಅಂಜಲಿ ಮೇಲೆ ಪ್ರೀತಿಯಾಗುತ್ತೆ. ಯಾಕೆ ಹೀಗೆ? ಆದ್ಯತೆಗಳ ವಿಷಯಕ್ಕೆ ಬಂದಾಗ, ಪುರುಷರು ಉದ್ದನೆಯ ಕೂದಲನ್ನು ಹೊಂದಿರುವ ಮಹಿಳೆಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಅದು ಏಕೆ? ಅದಕ್ಕೆ ಉತ್ತರ ಇಲ್ಲಿದೆ ನೋಡೋಣ.