ಇಂಥ ಹೆಂಡ್ತಿ ಇದ್ದರೆ, ಹತ್ತಿರವೂ ಹೋಗಬೇಡಿ ಅನ್ನುತ್ತೆ ಚಾಣಕ್ಯ ನೀತಿ

First Published | Jul 11, 2023, 5:48 PM IST

ಒಳ್ಳೆಯ ಹೆಂಡತಿ ಗಂಡನ ಜೀವನಕ್ಕೆ ಸರಿಯಾದ ಮಾರ್ಗ ನೀಡುತ್ತಾಳೆ. ಆದರೆ ಹೆಂಡತಿ ನಿಷ್ಪ್ರಯೋಜಕಳಾಗಿದ್ದರೆ, ಅವಳು ಜೀವನವನ್ನು ನರಕವನ್ನಾಗಿ ಮಾಡುತ್ತಾಳೆ. ಆದ್ದರಿಂದ, ಜೀವನವನ್ನು ಸಂತೋಷವಾಗಿರಿಸಲು ಎಂತಹ ಹೆಂಡತಿಯಿಂದ ದೂರ ಇರೋದು ಒಳ್ಳೆಯದು ಅನ್ನೊದನ್ನು ಚಾಣಕ್ಯರು ಹೇಳಿದ್ದಾರೆ. 
 

ಮದುವೆ ನಂತರ, ಮಹಿಳೆ ತನ್ನ ಪತಿ ಮತ್ತು ಇಡೀ ಕುಟುಂಬದ ಸಂತೋಷದ ಜವಾಬ್ದಾರಿಯನ್ನು ಹೊಂದಿರುತ್ತಾಳೆ. ಅವಳು ಮನೆಗೆ ಕೇವಲ ಸೊಸೆಯಾಗಿ ಮಾತ್ರವಲ್ಲದೆ ಗೌರವವಾಗಿ ಹೋಗುತ್ತಾಳೆ. ಆದ್ದರಿಂದ, ವಿವಾಹಿತ ಮಹಿಳೆ (married woman) ಎಲ್ಲವನ್ನೂ ತುಂಬಾ ಚಿಂತನಶೀಲವಾಗಿ, ಯೋಚಿಸಿ ಮಾಡಬೇಕಾಗುತ್ತೆ ಹೆಂಡತಿಯು ಸದ್ಗುಣಶೀಲಳಾಗಿದ್ದರೆ, ಅವಳು ಹಾಳಾದ ಮನುಷ್ಯನನ್ನು ಸಹ ಸರಿಪಡಿಸುತ್ತಾಳೆ, ಅವನ ವೈಫಲ್ಯಗಳನ್ನು ಯಶಸ್ಸಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದ್ದಾಳೆ. 

ಒಂದು ವೇಳೆ, ಹೆಂಡತಿಯ ಸ್ವಭಾವವು (wives character) ಕೆಟ್ಟದಾಗಿದ್ದರೆ, ಕುಟುಂಬದ ಪ್ರತಿಯೊಬ್ಬ ಸದಸ್ಯನು ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ಸ್ವತಃ ಪತಿಯು ಸಹ ತನ್ನ ಜೀವನದಲ್ಲಿ ಸಂತೋಷವನ್ನು ಅನುಭವಿಸಲು ಎಂದಿಗೂ ಸಾಧ್ಯವಾಗುವುದಿಲ್ಲ. ಇದರಿಂದ ಜೀವನವು ದುಃಖದಿಂದ ಕೂಡಿರುತ್ತೆ.

Tap to resize

ಮಹಾನ್ ರಾಜತಾಂತ್ರಿಕ ಮತ್ತು ತತ್ವಜ್ಞಾನಿ ಆಚಾರ್ಯ ಚಾಣಕ್ಯನ ನೀತಿಗಳ ಸಂಗ್ರಹವಾದ ಚಾಣಕ್ಯ ನೀತಿ (Chanakya Niti) ಪುಸ್ತಕದಲ್ಲಿ, ಹೆಂಡತಿಗೆ ಅವನತಿಯ ಗುಣಗಳಿದ್ದರೆ, ಅವಳನ್ನು ಬಿಡುವುದು ಸೂಕ್ತ ಎಂದು ಉಲ್ಲೇಖಿಸಲಾಗಿದೆ. ಕೆಳಗೆ ತಿಳಿಸಿದ ಲಕ್ಷಣಗಳು ನಿಮ್ಮ ಹೆಂಡತಿಗಿದ್ದರೆ, ಅಂತಹ ಹೆಂಡತಿಯನ್ನು ಬಿಡೋದು ಉತ್ತಮ. 
 

ಯೋಚಿಸದವರು ಮತ್ತು ಮಾತನಾಡದವರು
ಚಾಣಕ್ಯ ನೀತಿಯ (Chanakya Niti) ಪ್ರಕಾರ, ತನ್ನ ಮಾತಿನ ಮೇಲೆ ಕಂಟ್ರೋಲ್ ಇಲ್ಲದೇ ತುಂಬಾ ಕಠಿಣ ಪದಗಳನ್ನು ಬಳಸುವ ಹೆಂಡತಿಯಿಂದ ದೂರ ಇರೋದು ಸರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅಂತಹ ಜನರ ಮಾತಿನಿಂದ ದಾಂಪತ್ಯ ಜೀವನದಲ್ಲಿ ದೊಡ್ಡ ಹಾನಿಯುಂಟಾಗುತ್ತೆ. ಅಲ್ಲದೆ, ಅಂತಹ ಜನರು ಇತರರ ಭಾವನೆಗಳ ಬಗ್ಗೆಯೂ ಚಿಂತಿಸಸೋದಿಲ್ಲ.

ವಿಷಯವನ್ನು ಅರ್ಥಮಾಡಿಕೊಳ್ಳದೆ ಕೋಪಗೊಳ್ಳುವವರು
ಕೋಪಗೊಳ್ಳುವುದು ಮಾನವ ಸ್ವಭಾವ, ಆದರೆ ಯಾವುದೇ ಮಾತುಗಳನ್ನು ಅರ್ಥ ಮಾಡಿಕೊಳ್ಳದೇ ಎಲ್ಲಾದಕ್ಕೂ ಕೋಪ ಮಾಡಿಕೊಳ್ಳುವ ಜನರಿಂದ ಜೀವನ ನರಕವಾಗುತ್ತೆ. ಅದಕ್ಕಾಗಿಯೇ ಆಚಾರ್ಯ ಚಾಣಕ್ಯನು (Acharya Chanakya) ತನ್ನ ಮತ್ತು ತನ್ನ ಕುಟುಂಬದ ಸಂತೋಷಕ್ಕಾಗಿ ಕೋಪದ ಸ್ವಭಾವವನ್ನು ಹೊಂದಿರುವ ಹೆಂಡತಿಯನ್ನು ಬಿಡುವುದು ಉತ್ತಮ ಎಂದು ಹೇಳುತ್ತಾನೆ.

ಮನೆಯ ವಾತಾವರಣವನ್ನು ಕೆಟ್ಟದಾಗಿಸುವವರು
ಮನೆಯಲ್ಲಿ ಅಶಾಂತಿಯನ್ನು ಉಂಟುಮಾಡುವ ಹೆಂಡತಿಯೊಂದಿಗೆ ಜೀವನವು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಅವಳ ಈ ಗುಣದಿಂದಾಗಿ ಇಡೀ ಕುಟುಂಬವೆ ತೊಂದರೆ ಅನುಭವಿಸಬೇಕಾಗಿ ಬರುತ್ತೆ. ಏಕೆಂದರೆ ಅಂತಹ ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಗುಣಗಳನ್ನು ಕಲಿಸಲು ಸಾಧ್ಯವಾಗೋದಿಲ್ಲ.

ಒಳ್ಳೆಯ ಹೆಂಡತಿಯ ಗುರುತೇನು?
ಚಾಣಕ್ಯ ನೀತಿಯ ಪ್ರಕಾರ, ಮಹಿಳೆ ತನ್ನ ಕಾರ್ಯಗಳು, ಧರ್ಮ ಮತ್ತು ಮಾತುಗಳಿಂದ ಪರಿಶುದ್ಧಳಾದಾಗ ಮಾತ್ರ ಅವಳನ್ನು ಒಳ್ಳೆಯ ಹೆಂಡತಿ ಎಂದು ಕರೆಯಲಾಗುತ್ತದೆ. ಅವಳು ಏನು ಮಾತನಾಡುತ್ತಾಳೆ ಮತ್ತು ಹೇಗೆ ಮಾಡುತ್ತಾಳೆ ಅನ್ನೋದರ ಮೇಲೆ ಮನೆಯವರ ನೆಮ್ಮದಿ ನಿಲ್ಲುತ್ತೆ. ಆದ್ದರಿಂದ ಉತ್ತಮ ಗುಣ ಸ್ವಭಾವದ ವ್ಯಕ್ತಿಯನ್ನೇ ಪತ್ನಿಯನ್ನಾಗಿ ಆರಿಸಿ, ಎಂದು ಚಾಣಕ್ಯ ಹೇಳುತ್ತಾರೆ. 

Latest Videos

click me!