ಅವಳು ಜಗಳಗಂಟಿಯೋ, ರೊಮ್ಯಾಂಟಿಕೋ? ಹುಡುಗಿಯರ ಗುಣ ತಿಳಿಯೋದು ಹೇಗೆ?

First Published | Jul 5, 2023, 6:03 PM IST

ಒಬ್ಬ ಹುಡುಗಿಯ ಗುಣ ಹೇಗಿದೆ ಅನ್ನೋದನ್ನು ಆಕೆಯನ್ನು ನೋಡುವ ಮೂಲಕ ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದರೆ, ಅದು ತಪ್ಪು. ನಿಮಗೆ ಗೊತ್ತಾ? ದೇಹದ ಅನೇಕ ಭಾಗಗಳಿವೆ, ಆ ಭಾಗಗಳನ್ನು ನೋಡುವ ಮೂಲಕ ಅವರ ವ್ಯಕ್ತಿತ್ವ ತಿಳಿದುಕೊಳ್ಳಬಹುದಂತೆ. ಹೇಗೆ ಅನ್ನೋದನ್ನು ನೋಡೋಣ. 
 

ನೀವು ಯಾವುದೇ ವ್ಯಕ್ತಿಯ ಗುಣ, ಸ್ವಭಾವ (peronality) ಹೇಗಿದೆ ಎಂದು ತಿಳಿಯಲು ಬಯಸಿದ್ರೆ ಅವರೊಂದಿಗೆ ಸಮಯ ಕಳೆಯೋದು ಬಹಳ ಮುಖ್ಯ. ಆದರೆ ಅದಕ್ಕೆ ತುಂಬಾ ಸಮಯ ತೆಗೆದುಕೊಳ್ಳುತ್ತೆ ಅಲ್ವಾ? ಅದರ ಬದಲಾಗಿ ನೀವು ಆ ವ್ಯಕ್ತಿಯ ಮೂಗಿನ ಆಕಾರವನ್ನು ಎಚ್ಚರಿಕೆಯಿಂದ ನೋಡಬೇಕು.ಹೌದು ಅವರ ಮೂಗು ಹೇಗಿದೆ ಅನ್ನೋದನ್ನು ನೋಡೋ ಮೂಲಕ ಸುಲಭವಾಗಿ ಅವರ ಸ್ವಭಾವವನ್ನು ತಿಳಿಯಬಹುದು. 

ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಗುರುತಿಸುವ ಈ ಸುಲಭ ಮಾರ್ಗವು ಹುಡುಗಿಯನ್ನು ಇಂಪ್ರೆಸ್ (impress girl) ಮಾಡಲು ಟ್ರೈ ಮಾಡ್ತಿರೋ ಹುಡುಗರಿಗೆ ತುಂಬಾ ಸಹಾಯ ಮಾಡುತ್ತೆ. ಮೂಗಿನ ರಚನೆಯಲ್ಲಿ 14 ವಿಧಗಳಿವೆಯಾದರೂ, ಕೆಲವು ಸಾಮಾನ್ಯ ಮೂಗಿನ ಆಕಾರದ ವ್ಯಕ್ತಿಗಳ ವೈಶಿಷ್ಟ್ಯ ಹೇಗಿರುತ್ತೆ ಅನ್ನೋದರ ಬಗ್ಗೆ ತಿಳಿಯೋಣ. 

Tap to resize

ದೊಡ್ಡ ಮೂಗು ಹೊಂದಿರುವ ಜನ
ದೊಡ್ಡ ಮೂಗು (Big nose) ಬಲ್ಬ್ ತರಹದ ಬಿಂದುಗಳು ಮತ್ತು ದೊಡ್ಡ ಮೂಗಿನ ಹೊಳ್ಳೆಗಳನ್ನು ಹೊಂದಿರುತ್ತೆ. ಅಂತಹ ಮೂಗು ಹೊಂದಿರೋ ಜನರು ತಮ್ಮ ಜೀವನವನ್ನು ಮುಕ್ತವಾಗಿ ನಡೆಸುತ್ತಾರೆ. ಈ ಜನರಲ್ಲಿ, ಅಹಂ ಅಗತ್ಯಕ್ಕಿಂತ ಹೆಚ್ಚಾಗಿದೆ. ಅಷ್ಟೇ ಅಲ್ಲ ಇವರು ಇತರರ ಭಾವನೆಗಳ ಬಗ್ಗೆ ಕೇರ್ ಮಾಡೋದೆ ಇಲ್ಲ. 

ಈ ದೊಡ್ಡ ಮೂಗಿನ ಜನರು ಬಾಲ್ಯದಿಂದಲೂ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಅವರು ತಮ್ಮ ಗುರಿ ತಲುಪಲು ಯಾರ ಸಹಾಯವನ್ನೂ ತೆಗೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ದೊಡ್ಡ ಮೂಗು ಹೊಂದಿರುವ ಜನರು ಹಣ ವ್ಯರ್ಥ ಮಾಡೋದು ಇಲ್ಲ, ಆದರೂ ಇವರು ರಾಯಲ್ ಆಗಿ ಲೈಫ್ ಲೀಡ್(royal life) ಮಾಡೋದನ್ನು ಇಷ್ಟಪಡ್ತಾರೆ. 

ಹದ್ದಿನಂತಹ ಮೂಗು ಹೊಂದಿರುವ ಜನರು
ಗಿಡುಗದ ಕೊಕ್ಕಿನಂತಹ ಮೂಗನ್ನು (sharp nose) ಹೊಂದಿರುವ ಜನರು ತಮಗೆ ಅನಿಸಿದನ್ನು ಹೇಳಲು ಮತ್ತು ರಿಸ್ಕ್ ತೆಗೆದುಕೊಳ್ಳಲು ಹೆದರೋದಿಲ್ಲ. ಅಂತಹ ಜನರು ಎಲ್ಲರೂ ತಮ್ಮನ್ನು ಗೌರವಿಸಬೇಕೆಂದು ಬಯಸುತ್ತಾರೆ, ಆದ್ದರಿಂದ ಹೆಚ್ಚಾಗಿ ಅವರು ಜನರ ಜೊತೆ ಜೊತೆಯಾಗಿ ಕೆಲಸ ಮಾಡುತ್ತಾರೆ. 

ಈ ರೀತಿಯ ಶಾರ್ಪ್ ಮೂಗು ಹೊಂದಿರುವ ಜನರು ಬಹಳ ಬೇಗನೆ ಎಲ್ಲರೊಡನೆ ಸ್ನೇಹಿತರಾಗುತ್ತಾರೆ, ಆದರೆ ಇನ್ನೂ ಅನೇಕ ಜನರು ಅವರನ್ನು ಸ್ವಾರ್ಥಿ ಎಂದು ಪರಿಗಣಿಸುತ್ತಾರೆ. ಇಂತಹ ಮೂಗು ಹೊಂದಿರೋ ಜನರಿಗೆ ಎಂದಿಗೂ ಹಣದ ಕೊರತೆಯಿರೋದಿಲ್ಲ. ಅವರ ಅದೃಷ್ಟ ತುಂಬಾ ಸ್ಟ್ರಾಂಗ್ ಆಗಿರುತ್ತೆ.

ಸಣ್ಣ ಮೂಗು ಹೊಂದಿರುವ ಜನರು ಹೇಗಿರ್ತಾರೆ?
ಚಿಕ್ಕ ಮೂಗು (small nose) ಹೊಂದಿರುವ ಜನರು ತುಂಬಾ ಆಕ್ಟೀವ್ ಆಗಿರ್ತಾರೆ. ಎಲ್ಲಿಯವರೆಗೆ ಯಾರೂ ಅವರಿಗೆ ತೊಂದರೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಅವರು ಯಾರೊಂದಿಗೂ ಜಗಳವಾಡುವುದಿಲ್ಲ. ಇವರು ಕೂಲ್ ಆಗಿರೋ ಜನ, ಆದರೆ ಯಾರಾದ್ರೂ ಇವರಿಗೆ ಕೋಪ ಬರುವಂತೆ ಮಾಡಿದ್ರೆ, ಮತ್ತೆ ಏನೇ ಆದ್ರೂ ಅವರನ್ನು ಬಿಡುವಂತವರಲ್ಲ. 

ಅಷ್ಟೇ ಅಲ್ಲ, ಈ ಸಣ್ಣ ಮೂಗಿನ ಜನರು ತುಂಬಾ ರೋಮ್ಯಾಂಟಿಕ್ (romantic) ಆಗಿರುತ್ತಾರೆ, ಈ ಕಾರಣದಿಂದಾಗಿ ಅವರು ಸಾಮಾನ್ಯವಾಗಿ ಪ್ರೇಮ ವಿವಾಹವಾಗಲು ಇಷ್ಟಪಡುತ್ತಾರೆ. ಅವರು ಉತ್ತಮ ಮಾತುಗಾರರು ಆಗಿರೋದರಿಂದ ಸುಲಭವಾಗಿ ಎಲ್ಲರನ್ನು ತಮ್ಮತ್ತ ಸೆಳೆಯುವ ಕಲೆಯನ್ನು ಸಹ ಹೊಂದಿರ್ತಾರೆ.
 

ನೇರ ಮೂಗು ಹೊಂದಿರುವ ಜನರು
ನೇರ ಮೂಗು (straight Nose) ಹೊಂದಿರುವ ಜನರು ತುಂಬಾ ಸೂಕ್ಷ್ಮ ಸ್ವಭಾವದವರು. ಅದಕ್ಕಾಗಿಯೇ ಅವರು ಪ್ರತಿ ಸಮಸ್ಯೆಯಲ್ಲೂ ಜನರಿಗೆ ಸಹಾಯ ಮಾಡಲು ಯಾವಾಗಲೂ ಇರುತ್ತಾರೆ. ಈ ಜನರು ತುಂಬಾ ತಾಳ್ಮೆ ಮತ್ತು ತಿಳುವಳಿಕೆಯುಳ್ಳವರು, ಆದರೆ ಯಾರಾದರೂ ಅವರನ್ನು ಲಘುವಾಗಿ ತೆಗೆದುಕೊಳ್ಳುವುದನ್ನು ಅವರು ಇಷ್ಟಪಡುವುದಿಲ್ಲ. ಅಂತಹ ಜನರು ಸರಳ ಜೀವನವನ್ನು ನಡೆಸ್ತಾರೆ. ಅನಗತ್ಯವಾಗಿ ಖರ್ಚು ಮಾಡೋದಿಲ್ಲ, ಜೊತೆ ಆಧ್ಯಾತ್ಮದಲ್ಲಿ ತೊಡಗಿರ್ತಾರೆ. 
 

Latest Videos

click me!