ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ವೈಯಕ್ತಿಕ ಮತ್ತು ನಿಕಟ ಅನುಭವವಾಗಿದೆ. ಇದು ವೈಯಕ್ತಿಕ ಆದ್ಯತೆ, ಪಾಲುದಾರರ ನಡುವೆ ಒಪ್ಪಿಕೊಂಡಂತೆ ಬದಲಾಗಬಹುದು. AI ಹೇಳಿರುವ ದೈಹಿಕ ಸಂಬಂಧಕ್ಕೆ ಸಂಬಂಧಿಸಿದ ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ.
27
ಸಂವಹನ
ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವಾಗ ಸಂವಹನವು ಬಹಳ ಮುಖ್ಯ ಎಂದು ChatGPT ವಿವರಿಸಿದೆ. ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕ ಸಂವಹನವನ್ನು ಹೊಂದಿರುವುದು ಮುಖ್ಯ. ಲೈಂಗಿಕ ಕ್ರಿಯೆಯಲ್ಲಿ ನಿಮ್ಮ ಆಸೆಗಳು, ಗಡಿಗಳು ಮತ್ತು ನಿರೀಕ್ಷೆಗಳ ಬಗ್ಗೆ ಸಂಗಾತಿಯೊಂದಿಗೆ ಮಾತನಾಡಿ. ಅವರ ಅಗತ್ಯತೆಗಳು ಮತ್ತು ಕಾಳಜಿಗಳನ್ನು ಆಲಿಸಿ. ಸಂಬಂಧದಲ್ಲಿ ಇಬ್ಬರ ಒಪ್ಪಿಗೆಯೂ ಮುಖ್ಯ ಎಂದು ಚಾಟ್ ಜಿಪಿಟಿ ವಿವರಿಸುತ್ತದೆ.
37
ಪರಸ್ಪರ ಒಪ್ಪಿಗೆ
ಲೈಂಗಿಕ ಚಟುವಟಿಕೆಯು ಯಾವಾಗಲೂ ಒಮ್ಮತದಿಂದ ಕೂಡಿರಬೇಕು. ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಲು ದಂಪತಿಗಳು ಮುಕ್ತವಾಗಿ ಮತ್ತು ಉತ್ಸಾಹದಿಂದ ಒಪ್ಪಿಕೊಳ್ಳಬೇಕು. ಸಮ್ಮತಿಯನ್ನು ಮೌಖಿಕವಾಗಿ ನೀಡಬಹುದು. ಒಪ್ಪಿಗೆಯಿಲ್ಲದೆ ಲೈಂಗಿಕ ಕ್ರಿಯೆ ಅರ್ಥ ಹೀನ ಮತ್ತು ತಪ್ಪು ಕೂಡಾ ಹೌದು.
47
ಭಾವನಾತ್ಮಕ ಸಂಪರ್ಕ
ಸಂಗಾತಿಯೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ರಚಿಸುವುದು ಅನ್ಯೋನ್ಯತೆ ಮತ್ತು ಒಟ್ಟಾರೆ ಲೈಂಗಿಕ ಅನುಭವವನ್ನು ಹೆಚ್ಚಿಸುತ್ತದೆ. ಪ್ರೀತಿ, ತಿಳುವಳಿಕೆ ಮತ್ತು ಹಂಚಿಕೊಂಡ ಅನುಭವಗಳ ಮೂಲಕ ಭಾವನಾತ್ಮಕವಾಗಿ ಸಂಪರ್ಕಿಸಲು ಸಮಯ ತೆಗೆದುಕೊಳ್ಳಬಹುದು.
57
ಫೋರ್ ಪ್ಲೇ
ಹಾಸಿಗೆಯ ಮೇಲೆ ನೇರವಾಗಿ ಲೈಂಗಿಕ ಕ್ರಿಯೆ ನಡೆಸುವ ಬದಲು, ಫೋರ್ ಪ್ಲೇ ಮಾಡಿ. ಇದು ಉತ್ಸಾಹವನ್ನು ಹೆಚ್ಚಿಸುತ್ತದೆ. ಫೋರ್ ಪ್ಲೇ ಚುಂಬನ, ಮುದ್ದಾಡುವುದು, ಮೌಖಿಕ ಸಂಭೋಗ ಮೊದಲಾದ ಚಟುವಟಿಕೆಗಳನ್ನು ಒಳಗೊಂಡಿರಬಹುದು.
67
ಲೈಂಗಿಕ ಆರೋಗ್ಯ
ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರೆ, ಲೈಂಗಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಮುಖ್ಯ. ಲೈಂಗಿಕವಾಗಿ ಹರಡುವ ಸೋಂಕುಗಳ (STIs) ಹರಡುವಿಕೆಯನ್ನು ತಡೆಗಟ್ಟಲು ಕಾಂಡೋಮ್‌ಗಳನ್ನು ಬಳಸಿ. ನಿಯಮಿತವಾಗಿ ಆರೋಗ್ಯ ಪರಿಶೀಲಿಸಿ.
77
ಲೈಂಗಿಕ ಕ್ರಿಯೆ ವೈವಾಹಿಕ ಜೀವನದ ಒಂದು ಭಾಗವಷ್ಟೇ. ಅದುವೇ ಜೀವನವಲ್ಲ. ಸಂಬಂಧದಲ್ಲಿ ಭಾವನಾತ್ಮಕ ನಂಟು ಕೂಡಾ ತುಂಬಾ ಮುಖ್ಯ. ದಂಪತಿಗಳು ಇದನ್ನು ನೆನಪಿಟ್ಟುಕೊಳ್ಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.