ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ, ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಆರಂಭದಲ್ಲಿ ಜಾತ್ಯತೀತಳು ಎಂದು ಹೇಳಿದ್ದ ಅವರು, ನಂತರ ತಾನು ಅನುಭವಿಸಿದ ಚಿತ್ರಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪಿನ ಅರಿವಾಗಿ, ಸನಾತನ ಧರ್ಮಕ್ಕೆ ಮರಳಿದ್ದಾರೆ.
ಈಗ ಎಲ್ಲೆಲ್ಲೂ ಲವ್ ಜಿಹಾದ್, ಮತಾಂತರದ್ದೇ ಮಾತು. ಅದರಲ್ಲಿಯೂ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ (TCS) ಲವ್ ಜಿಹಾದ್ ಪ್ರಕರಣದಿಂದ ಕಾರ್ಪೋರೇಟ್ ಜಗತ್ತಿಗೂ ಕಾಲಿಟ್ಟ ಜಿಹಾದಿಗಳ ಬಗ್ಗೆ ದೇಶಾದ್ಯಂತ ಹಿಂದೂಗಳಲ್ಲಿ ಆತಂಕ ಎದುರಾಗಿದೆ. ಹಿಂದೂ ಹೆಣ್ಣುಮಕ್ಕಳು ಅದ್ಹೇಗೆ ಮರುಳಾಗುತ್ತಾರೆ, ಅಲ್ಲಿ ಏನು ನಡೆಯುತ್ತದೆ, ಅಸಲಿಗೆ ಆಗೋದೇನು ಎನ್ನುವುದನ್ನು ಅರಿಯದೇ ಬೆಚ್ಚಿಬಿದ್ದಿದ್ದಾರೆ ಪೋಷಕರು. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳೂ ಎಲ್ಲರನ್ನು ನಡುಗಿಸುವಂತಿದೆ. ಹಾಗೆಂದು ಈ ಲವ್ ಜಿಹಾದ್ ಅಥವಾ ಮತಾಂತರ ಈಗಿನ ಮಾತಲ್ಲ, ಬದಲಿಗೆ ಸೋಷಿಯಲ್ ಮೀಡಿಯಾಗಳಿಂದ ಇವು ಬೆಳಕಿಗೆ ಬರುತ್ತಿವೆ ಅಷ್ಟೇ.
26
ನಾನು ಜಾತ್ಯಾತೀತಳು ಎಂದಿದ್ದ ನಟಿ
ಅಂಥದ್ದೇ ಒಂದು ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ. ಹಿಂದಿ ಸೀರಿಯಲ್ ನೋಡುವವರಿಗೆ ಚಾಹತ್ ಖನ್ನಾ ಪರಿಚಿತ ಮುಖ. ಹಲವಾರು ಫೇಮಸ್ ಸೀರಿಯಲ್ಗಳಲ್ಲಿ ನಟಿಸಿದ್ದಾರೆ ಈಕೆ. ಮುಸ್ಲಿಂ ಯುವಕನನ್ನು ನಂಬಿ ಮದುವೆಯಾಗಿ ಕೊನೆಗೆ ಸತ್ಯದ ಅರಿವಾಗಿ ಸನಾತನ ಧರ್ಮಕ್ಕೆ ವಾಪಸಾಗಿರುವ ಈ ನಟಿಯ ಈಗ ತಾನು ಅನುಭವಿಸಿದ ಹಿಂಸೆಗಳ ಬಗ್ಗೆ ಬಿಚ್ಚಿಡುತ್ತಿದ್ದಾಳೆ. ಮದುವೆಯಾಗುವ ಸಂದರ್ಭದಲ್ಲಿ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದ ನಟಿ, ನಾನು ಜಾತ್ಯಾತೀತಳು, ಸ್ವಯಂ ಪ್ರೇರಣೆಯಿಂದ ಈ ಮದುವೆಯಾಗುತ್ತಿದ್ದೇನೆ. ಇದನ್ನು ಪ್ರಶ್ನಿಸುವ ಹಕ್ಕು ಬೇರೆಯವರಿಗೆ ಇಲ್ಲ ಎಂದಿದ್ದಳು!
36
ಒಂದು ಮದ್ವೆ ಮುರಿಯುತ್ತಲೇ ಸಿಕ್ಕವನೇ ಫರ್ಹಾನ್
ಅಷ್ಟಕ್ಕೂ ನಟಿಗೆ ಇದಾಗಲೇ ಮದುವೆಯಾಗಿತ್ತು. 2006 ರಲ್ಲಿ ಭರತ್ ನರಸಿಂಘಾನಿ ಎನ್ನುವವರ ಜೊತೆ ಮದುವೆಯಾಗಿತ್ತು. ಆದರೆ ಈ ಮದುವೆ ವರ್ಷದಲ್ಲಿಯೇ ಮುರಿದು ಬಿತ್ತು. ಆಗಲೇ ಪರಿಚಯವಾದದ್ದು ಫರ್ಹಾನ್ ಮಿರ್ಜಾ. 2013 ರಲ್ಲಿ ಫರ್ಹಾನ್ ಮಿರ್ಜಾ ಜೊತೆ ಮದುವೆಯಾಯಿತು. ಮತಾಂತರಗೊಂಡಳು ನಟಿ. ಎರಡು ಮಕ್ಕಳಾಯಿತು. ಅಲ್ಲಿಯವರೆಗೂ ತನಗೆ ಚಿತ್ರಹಿಂಸೆಯನ್ನೇ ನೀಡಲಾಗುತ್ತಿತ್ತು. ಆದರೂ ಸಹಿಸಿಕೊಂಡಿದ್ದೆ ಎಂದಿದ್ದಾರೆ.
ಅನಾರೋಗ್ಯ ಇದ್ದರೂ ದೈಹಿಕ ಸಂಪರ್ಕ ಬೆಳೆಸುವಂತೆ ಗಂಡ ಒತ್ತಾಯಿಸುತ್ತಿದ್ದ. ನಾನು ಬಹುದೊಡ್ಡ ತಪ್ಪು ಮಾಡಿದ್ದು ಆಗಲೇ ಗೊತ್ತಾಯಿತು. ಹಿಂದೂ ಧರ್ಮ ಬಿಟ್ಟುಬಂದು ಬಹುದೊಡ್ಡ ತಪ್ಪು ಮಾಡಿದೆ. ಅದರ ಮಹತ್ವ ಕೊನೆಗೆ ತಿಳಿಯಿತು ಎಂದು ನಟಿ ಮಾಧ್ಯಮಗಳ ಮುಂದೆ ಬಂದು ಗೋಳೋ ಎಂದು ಅತ್ತಿದ್ದಾರೆ.
56
ಯಾರೂ ಒತ್ತಡ ಹಾಕಿಲ್ಲ
ಕೊನೆಗೆ, ತನ್ನ ತಪ್ಪಿನ ಅರಿವಾಗಿ ಗಂಡನ ವಿರುದ್ಧ ಕೇಸ್ ಹಾಕಿ ಇದೀಗ ಸನಾತನ ಧರ್ಮಕ್ಕೆ ವಾಪಸಾಗಿದ್ದಾರೆ ನಟಿ. ಇದಕ್ಕೂ ಮೊದಲು ಮತಾಂತರವಾಗಬೇಕಿದ್ದ ಸಂದರ್ಭದಲ್ಲಿ, ನನಗೆ ಯಾರೂ ಒತ್ತಡ ಹಾಕುತ್ತಿಲ್ಲ. ನಾನು ಸ್ವಂತ ಇಚ್ಛೆಯಿಂದ ಮತಾಂತರವಾಗುತ್ತಿದ್ದೇನೆ ಎಂದವರು ಈಗ ತಾವು ಅನುಭವಿಸಿರುವ ಕಷ್ಟಗಳ ಬಗ್ಗೆ ವಿವರಿಸಿದ್ದಾರೆ.
66
ಎಲ್ಲಾ ಹಬ್ಬ ಆಚರಿಸ್ತಾರೆ
ನಾನು ಜಾತ್ಯತೀತಳು. ಅವರ ಮನೆಯಲ್ಲಿ ಈದ್ ಮತ್ತು ದೀಪಾವಳಿ ಎರಡನ್ನೂ ಸಮಾನ ಸಂತೋಷದಿಂದ ಆಚರಿಸುತ್ತಾರೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದರು. ನಾನು ಹೀಗೆ ಹೇಳಿದ್ರೆ ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಆದರೆ ಅವರು ತುಂಬಾ ಒಳ್ಳೆಯವರು ಎಂದಾಕೆ ಈಗ ಉಲ್ಟಾ ಹೊಡೆದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.