Celebrity Divorce: ಸಾಲು ಸಾಲು ಡಿವೋರ್ಸ್, 2022ರಲ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ ಜೋಡಿಗಳಿವರು

Published : Dec 08, 2022, 03:53 PM ISTUpdated : Dec 08, 2022, 03:55 PM IST

2022 ಮುಗಿಯುತ್ತಾ ಬಂತು. ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಗಳು ಆದಂತೆ ಸಿನಿಮಾ ಕ್ಷೇತ್ರದಲ್ಲೂ ಹಲವು ಮದುವೆ ಹಾಗೆಯೇ ಹಲವು ಡಿವೋರ್ಸ್‌ಗಳು ನಡೆದಿವೆ. ಅದರಲ್ಲೂ ಊಹಿಸಿಯೇ ಇರದಿದ್ದ ಕೆಲ ಜೋಡಿಗಳು ಬೇರೆ ಬೇರೆಯಾಗಿದ್ದಾರೆ. ಅವರು ಯಾರೆಲ್ಲಾ ತಿಳಿಯೋಣ.

PREV
17
Celebrity Divorce: ಸಾಲು ಸಾಲು ಡಿವೋರ್ಸ್, 2022ರಲ್ಲಿ ಅಭಿಮಾನಿಗಳಿಗೆ ಶಾಕ್ ನೀಡಿದ ಜೋಡಿಗಳಿವರು

1. ಧನುಷ್-ಐಶ್ವರ್ಯ
ಸುಮಾರು 18 ವರ್ಷಗಳ ದಾಂಪತ್ಯದ ನಂತರ ತಮಿಳು ಹೀರೋ ಧನುಷ್ ಮತ್ತು ಅವರ ಪತ್ನಿ ಐಶ್ವರ್ಯಾ ಈ ವರ್ಷ ವಿಚ್ಛೇದನ ಘೋಷಿಸಿದರು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಸುಮಾರು 18 ವರ್ಷಗಳ ದಾಂಪತ್ಯದ ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುತ್ತಿರುವಾಗಿ ಹೇಳಿದ್ದು ಅಭಿಮಾನಗಳಿಗೆ ಬೇಸರ ಉಂಟು ಮಾಡಿದೆ. ಆದರೆ, ಆ ಬಳಿಕ ಮತ್ತೆ ಒಂದಾದರು ಎಂಬ ಸುದ್ದಿಯೂ ಹರಿದಾಡುತ್ತಿದೆ.

27

2. ಇಮ್ರಾನ್ ಖಾನ್-ಅವಂತಿಕಾ ಮಲಿಕಾ
ಈ ಬಾಲಿವುಡ್ ದಂಪತಿಗಳು ಈ ವರ್ಷ ತಮ್ಮ ಡಿವೋರ್ಸ್ ಘೋಷಿಸಿದರು. ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಈ ದಂಪತಿಗಳು ಜೊತೆಗಿರಲು ಸಾಧ್ಯವಿಲ್ಲ ಎಂದು ಹೇಳಿಕೊಂಡರು.

37

3. ಟಾಮ್ ಬ್ರಾಡಿ- ಗಿಸೆಲ್ ಬುಂಡ್ಚೆನ್
ಪ್ರಸಿದ್ಧ ಫುಟ್ಬಾಲ್ ಆಟಗಾರ ಟಾಮ್ ಬ್ರಾಡಿ ಮತ್ತು ಅವರ ಪತ್ನಿ, ಸೂಪರ್ ಮಾಡೆಲ್-ಪತ್ನಿ ಗಿಸೆಲ್ ಬುಂಡ್ಚೆನ್ ತಮ್ಮ ವಿಚ್ಛೇದನವನ್ನು ಘೋಷಿಸಿದ್ದಾರೆ. ಈ ವರ್ಷ ತಮ್ಮ 13 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ.

47
Image: Getty Images

4. ಹ್ಯಾರಿ ಸ್ಟೈಲ್ಸ್- ಒಲಿವಿಯಾ ವೈಲ್ಡ್
ಈ ಸ್ಟಾರ್ ಸೆಲೆಬ್ರಿಟಿಗಳು ಕೂಡ ಈ ವರ್ಷ ಬೇರ್ಪಟ್ಟರು. ಸುಮಾರು ಎರಡು ವರ್ಷಗಳ ಡೇಟಿಂಗ್ ನಂತರ ದಂಪತಿಗಳು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು.
 

57

5.ಕಿಮ್ ಕಾರ್ಡಶಿಯಾನ್-ಕನ್ಯೆ ವೆಸ್ಟ್.
ಖ್ಯಾತ ರಾಪರ್ ಕಾನ್ಯೆ ವೆಸ್ಟ್-ನಟಿ ಕಿಮ್ ಕಾರ್ಡಶಿಯಾನ್ ಅವರ ವಿಚ್ಛೇದನವನ್ನು ಅಂತಿಮಗೊಳಿಸಲಾಗಿದೆ. ಅವರು ಈ ವರ್ಷ ವಿಚ್ಛೇದನವನ್ನು ಘೋಷಿಸಿದರು. ಕಾನ್ಯೆ ವೆಸ್ಟ್-ಕಿಮ್ ಕಾರ್ಡಶಿಯಾನ್ 2014 ರಲ್ಲಿ ಇಟಲಿಯಲ್ಲಿ ವಿವಾಹವಾದರು. ಕಿಮ್ ಕಳೆದ ವರ್ಷ ಫೆಬ್ರವರಿಯಲ್ಲಿ ಕಾನ್ಯೆಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ಇತ್ತೀಚೆಗಷ್ಟೇ ಅವರ ವಿಚ್ಛೇದನ ದೃಢಪಟ್ಟಿರುವುದು ಗಮನಾ

67

6. ಸೊಹೈಲ್ ಖಾನ್- ಸೀಮಾ ಖಾನ್
ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೋಹೈಲ್ ಖಾನ್ ಕೂಡ ಈ ವರ್ಷ ವಿಚ್ಛೇದನವನ್ನು ಘೋಷಿಸಿದರು. ತುಂಬಾ ಆತ್ಮೀಯರಾಗಿದ್ದ ಸೋಹೈಲ್ ಖಾನ್ ಮತ್ತು ಸೀಮಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ 24 ವರ್ಷಗಳ ನಂತರ ಬೇರೆಯಾಗಲು ನಿರ್ಧರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

77

7. ಹನಿ ಸಿಂಗ್- ಶಾಲಿನಿ ತಲ್ವಾರ್
ರಾಪರ್-ಗಾಯಕಿ ಯೋ ಯೋ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಮದುವೆಯಾದ 21 ವರ್ಷಗಳ ನಂತರ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಈ ವರ್ಷ ಅವರು ತಮ್ಮ ವಿಚ್ಛೇದನವನ್ನು ಘೋಷಿಸಿದ್ದಾರೆ ಎಂಬುದು ಗಮನಾರ್ಹ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories