ವಿವಾಹದ ಒತ್ತಡ ನಿಭಾಯಿಸುವುದು ಹೇಗೆ?
ತಮ್ಮ ವಯಸ್ಸಿನ ಸ್ನೇಹಿತರು ಮತ್ತು ಪರಿಚಿತರು, ಸಂಬಂಧಿಕರು ಮದುವೆಯಾದಾಗ, ಜನರು ಹೆಚ್ಚಾಗಿ ತಾವು ಮದುವೆಯಾಗಬೇಕು ಎಂಬ ಒತ್ತಡ ಅನುಭವಿಸುತ್ತಾರೆ. ಅಥವಾ ಇತರರು ನಿಮ್ಮ ಮೇಲೆ ಒತ್ತಡ ಹೇರುತ್ತಾರೆ. ಇದರಿಂದ ನೀವು ಎಷ್ಟೊಂದು ಒತ್ತಡಕ್ಕೆ ಒಳಗಾಗುತ್ತೀರಿ ಅಂದ್ರೆ ಮುಂದೇನೂ ಮಾಡೋದು ಎಂದು ತಲೆಬಿಸಿಯಾಗುತ್ತೆ. ಆದ್ರೆ ಈ ಒತ್ತಡದಿಂದ (peer pressure of getting married) ಹೊರ ಬರೋದು ಸಾಧ್ಯ. ಹೇಗೆ ಅನ್ನೋದನ್ನು ನೋಡೋಣ.
ನೀವು ಮದ್ವೆಗೆ ಸಿದ್ಧರಿದ್ದೀರಾ?
ನೀವು ಮದುವೆಗೆ ಸಿದ್ಧರಿದ್ದೀರಾ? ಮೊದಲು ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳಿ. ಮದುವೆ ಒತ್ತಡ ದೂರ ಮಾಡಿ ಮತ್ತು ಮದುವೆ ಜವಾಬ್ದಾರಿ (responsibilities of marriage) ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಿ. ಇದಕ್ಕಾಗಿ, ನೀವು ಮದುವೆ ನಂತರ ಕುಟುಂಬ ಅಥವಾ ಸ್ನೇಹಿತರ ಜೀವನ ಹೇಗೆ ಬದಲಾಗಿದೆ ಎಂದು ತಿಳಿಯಿರಿ. ಈ ಬದಲಾದ ಜೀವನದೊಂದಿಗೆ ನೀವು ಚೆನ್ನಾಗಿ ಬದುಕಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಒತ್ತಡ ಸೃಷ್ಟಿಸಿದಾಗ
ಮದುವೆಯಾಗುವಂತೆ ಜನರು ನಿಮ್ಮ ಮೇಲೆ ಒತ್ತಡ ಹೇರಿದಾಗ ಏನು ಹೇಳಬೇಕು ಅನ್ನೋದಕ್ಕೆ ನಿಮ್ಮ ಉತ್ತರ ಸಿದ್ಧವಾಗಿಟ್ಟುಕೊಳ್ಳಿ. ಅಥವಾ ನಿಮ್ಮ ಆಲೋಚನೆಯನ್ನು ಅವರಿಗೆ ಸಂಪೂರ್ಣವಾಗಿ ಸ್ಪಷ್ಟಪಡಿಸಲು ಏನನ್ನಾದರೂ ಹೇಳಿ. ಹೀಗೆ ಮಾಡಿದ್ರೆ ಮದುವೆಯ ಬಗ್ಗೆ ನೀವು ಏನು ಯೋಚಿಸುತ್ತೀರಿ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬಹುದು.
ಪ್ರಪಂಚದ ಜವಾಬ್ದಾರಿ ನಿಮ್ಮದ್ದಲ್ಲ
ಯಾರ್ಯಾರೋ ಒತ್ತಡ ಹೇರುತ್ತಿದ್ದಾರೆ ಎಂದು ಮದುವೆಯಾಗೋ ತಪ್ಪು ಮಾಡ್ಬೇಡಿ. ಯಾಕಂದ್ರೆ ಒತ್ತಡ ಹೇರೋರು ಆ ಕೆಲ್ಸ ಮಾಡಿ, ಆಮೇಲೆ ಎಲ್ಲೋ ಹೋಗಿ ಬಿಡ್ತಾರೆ. ಆದರೆ ಜೀವನಪೂರ್ತಿ ಸಂಸಾರ ಮಾಡಬೇಕಾದವರು ನೀವು. ಮದ್ವೆ ಅಂದ್ರೆ ಇಬ್ಬರೂ ಸಾಮರಸ್ಯದಿಂದ ಬದುಕೋದು, ಆದರೆ ಒತ್ತಡಕ್ಕೆ ಒಳಗಾಗಿ ಮದ್ವೆ ಆದ್ರೆ ಒಳ್ಳೆಯ ಸಂಬಂಧ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಪ್ರಪಂಚದ ಬಗ್ಗೆ ಚಿಂತೆ ಬಿಟ್ಟು, ನಿಮಗೆ ಏನು ಸಾಧ್ಯ ಅದನ್ನೇ ಮಾಡಿ.
ನೀವು ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿ (to do list)
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಏನನ್ನಾದರೂ ಮಾಡಲು ಬಯಸುತ್ತಾನೆ, ನೀವು ಅದನ್ನು ಬಯಸುತ್ತೀರಿ. ನೀವು ಪೂರ್ಣಗೊಳಿಸಲು ಬಯಸುವ ಅಂತಹ ಅನೇಕ ವಿಷಯಗಳನ್ನು ನಿಮ್ಮ ಲಿಸ್ಟ್ ನಲ್ಲಿ ಸೇರಿಸಿರಬಹುದು. ಈ ಲಿಸ್ಟ್ ನಲ್ಲಿ ನಿಮ್ಮ ಮದ್ವೆ ಇದ್ರೆ ಮದ್ವೆಯಾಗಿ. ಇಲ್ಲಾಂದ್ರೆ ಮದ್ವೆ ಮೊದ್ಲು ಮಾಡಬೇಕಾದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ.
ನಿರ್ಲಕ್ಷಿಸಬೇಡಿ (do not avoid anyone)
ಮದುವೆಯ ಬಗ್ಗೆ ಆಗಾಗ್ಗೆ ಮಾತನಾಡುವ ಆ ಸಂಬಂಧಿಕರಿಂದ ನಾವು ನಮ್ಮನ್ನು ದೂರವಿಡೋದನ್ನು ನಾವು ಮಾಡ್ತೇವೆ. ಕನಿಷ್ಠ ಪಕ್ಷ ಮಾನಸಿಕ ಒತ್ತಡ (Mental Stress) ಅನುಭವಿಸೋದನ್ನು ತಪ್ಪಿಸಬಹುದು ಎಂದು ನೀವು ಅಂದುಕೊಂಡಿರುತ್ತೀರಿ. ಆದರೆ ಇದು ತಪ್ಪು, ನೀವು ಅಲ್ಲಿ ಇಲ್ಲದಿದ್ದರೆ, ಆ ಜನರು ಇತರರೊಂದಿಗೆ ಮಾತನಾಡುತ್ತಾರೆ. ಯಾರ್ಯರದ್ದೋ ಮೂಲಕ ವಿಷಯಗಳು ಎಲ್ಲೆಡೆ ಹರಡಿದಾಗಿ ನೀವು ಕೆಟ್ಟದಾಗಿ ಭಾವಿಸುತ್ತೀರಿ. ಅವರು ನಿಮ್ಮ ಹಿಂದೆ ನಿಮಗೆ ಕೆಟ್ಟದ್ದನ್ನು ಮಾಡಬಹುದು. ಆದುದರಿಂದ ನೀವಾಗಿಯೇ ಅವರನ್ನು ಒಳ್ಳೆಯ ಮಾತುಗಳಿಂದ ಎದುರಿಸಲು ಕಲಿಯಿರಿ.
ನೀವು ಹೇಳಿದ್ದು ಸರಿ ಎಂದು ಹೇಳಿ
ಯಾರಾದರೂ ನಿಮ್ಮನ್ನು ಮದುವೆಯಾಗಲು ಕೇಳಿದಾಗಲೆಲ್ಲಾ, ಅವರು ಹೇಳಿದ್ದು ಸರಿಯಾಗಿದೆ ಎಂದು ಹೇಳಿ, ಖಂಡಿತಾ ಆದಷ್ಟು ಬೇಗ ಮದ್ವೆ ಆಗ್ತೆನೆ ಅನ್ನೋದನ್ನು ಸಹ ಹೇಳಿ. ಯಾಕಂದ್ರೆ ಹೀಗೆ ಹೇಳಿದ್ರೆ ಮತ್ತೆ ಅವರು ನಿಮ್ಮೊಂದಿಗೆ ಮದ್ವೆ ಬಗ್ಗೆ ಮಾತನಾಡಲು ಬರೋದಿಲ್ಲ. ಜೊತೆಗೆ ನೀವು ಅಂದುಕೊಂಡ ಕೆಲಸವನ್ನು ಸಹ ಸುಲಭವಾಗಿ ಯಾವುದೇ ಒತ್ತಡಕ್ಕೆ ಒಳಗಾಗದೆ ಮುಗಿಸಬಹುದು.
ಇದು ಇಡೀ ಜೀವನದ ವಿಷಯವಾಗಿದೆ.
ನೆನಪಿಡಿ, ವಿವಾಹವು ಎರಡು ದಿನಗಳ ಕೆಲಸವಲ್ಲ. ನಿಮ್ಮ ಇಡೀ ಜೀವನವು ಅದರಲ್ಲಿ ಅಡಗಿರುತ್ತದೆ. ಆದ್ದರಿಂದ ಮದುವೆಯನ್ನು ಯಾರ ಒತ್ತಡಕ್ಕೂ ಒಳಗಾಗಿ ಆಗಬೇಡಿ. ಬದಲಾಗಿ, ಅದಕ್ಕೆ ಸರಿಯಾದ ಸಮಯ ಮತ್ತು ಸಂದರ್ಭಗಳು ಇದ್ದಾಗ ಮಾತ್ರ ಮದುವೆಗೆ ಸಿದ್ಧರಾಗಿ.