ಮದ್ವೆಗೆ 2 ತಿಂಗಳಿರುವಾಗ ಕೈ ಕೊಟ್ಟಿದ್ದ ಬಾಯ್‌ಫ್ರೆಂಡ್ : ಕಷ್ಟದ ದಿನಗಳ ನೆನಪು ಮಾಡಿಕೊಂಡ ಸನ್ನಿ ಲಿಯೋನ್

First Published | Apr 7, 2024, 4:53 PM IST

ವಯಸ್ಕರ ಸಿನಿಮಾ ಇಂಡಸ್ಟ್ರಿಯಿಂದ ಬಾಲಿವುಡ್‌ವರೆಗೆ ಬೆಳೆದು ಬಂದಿರುವ ಸನ್ನಿಯನ್ನು ಇಂದು ಇಷ್ಡಪಡದವರಿಲ್ಲ, ಆದರೆ ಇಂತಹ ಸನ್ನಿಗೂ ಮದುವೆಗೆ ಎರಡು ತಿಂಗಳಿರುವ ಹೊತ್ತಿಗೆ ಬಾಯ್‌ಫ್ರೆಂಡ್ ಕೈ ಕೊಟ್ಟಿದ್ದನಂತೆ. 

ಮಾಜಿ ನೀಲಿ ಚಿತ್ರಗಳ ತಾರೆ, ಬಿಗ್ ಬಾಸ್ 17 ನಂತರ ಭಾರತದಲ್ಲಿ ಬಹಳ ಖ್ಯಾತಿ ಗಳಿಸಿರುವ ನಟಿ ಸನ್ನಿ ಲಿಯೋನ್‌ಗೆ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. 

 ಪ್ರಸ್ತುತ ಸಾಕಷ್ಟು ಖ್ಯಾತಿಯ ಜೊತೆ ತಮ್ಮ ಬದುಕಿನ ಅದ್ಭುತ ಹಂತವನ್ನು ಎಂಜಾಯ್ ಮಾಡುತ್ತಿರುವ ಸನ್ನಿ ಲಿಯೋನ್ ಅವರು ತಮ್ಮ ಬದುಕಿನ ಕೆಟ್ಟ ದಿನಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 

Tap to resize

ಪ್ರಸ್ತುತ ಡೇನಿಯಲ್ ವೆಬರ್ ಮದುವೆಯಾಗಿ ಮೂವರು ಮಕ್ಕಳೊಂದಿಗೆ ದಾಂಪತ್ಯ ಜೀವನವನ್ನು ಎಂಜಾಯ್ ಮಾಡುತ್ತಿರುವ ಸನ್ನಿ ಅವರ ವೃತ್ತಿ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ,

ವಯಸ್ಕರ ಸಿನಿಮಾ ಇಂಡಸ್ಟ್ರಿಯಿಂದ ಬಾಲಿವುಡ್‌ವರೆಗೆ ಬೆಳೆದು ಬಂದಿರುವ ಸನ್ನಿಯನ್ನು ಇಂದು ಇಷ್ಡಪಡದವರಿಲ್ಲ, ಆದರೆ ಇಂತಹ ಸನ್ನಿಗೂ ಮದುವೆಗೆ ಎರಡು ತಿಂಗಳಿರುವ ಹೊತ್ತಿಗೆ ಬಾಯ್‌ಫ್ರೆಂಡ್ ಕೈ ಕೊಟ್ಟಿದ್ದನಂತೆ. 

ತನುಜ್ ವಿರ್ವಾನಿ ಜೊತೆ ನಟಿ ಸನ್ನಿ ಲಿಯೋನ್ ಎಂಟಿವಿಯ ಸ್ಪ್ಲಿಟ್ ವಿಲ್ಲಾ ರಿಯಾಲಿಟಿ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದು, ಇದರಲ್ಲಿ ಸನ್ನಿ ಮದ್ವೆಗೆ 2 ತಿಂಗಳಿರುವಾಗ ಗೆಳೆಯ ಕೈಕೊಟ್ಟ ಬಗ್ಗೆ ಮಾತನಾಡಿದ್ದಾರೆ. 

ಸೆಟ್‌ನಲ್ಲಿ ಕಂಟೆಸ್ಟೆಂಟ್ ಆಗಿದ್ದ ದೇವಂಗಿನಿ ಎಂಬಾಕೆಯನ್ನು ಸಮಾಧಾನ ಪಡಿಸುವ ವೇಳೆ ಸನ್ನಿ ತಮ್ಮ ಹಾರ್ಟ್‌ ಬ್ರೇಕ್ ಸ್ಟೋರಿ ಹೇಳಿಕೊಂಡಿದ್ದಾರೆ. 

ಪತಿ ಡೇನಿಯಲ್ ಜೊತೆ ಮದ್ವೆಯಾಗುವುದಕ್ಕೂ ಮೊದಲು ಸನ್ನಿಗೆ ಬೇರೊಬ್ಬನ ಮೇಲೆ ಪ್ರೀತಿಯಾಗಿತ್ತು, ಅದು ಮದುವೆಯ ಹಂತಕ್ಕೂ ಬಂದು ತಲುಪಿ ಹವಾಯ್‌ನಲ್ಲಿ ಅದ್ದೂರಿಯಾಗಿ ಮದ್ವೆಯಾಗುವುದಕ್ಕೂ ಈ ಜೋಡಿ ನಿರ್ಧರಿಸಿದ್ದರು.

ಆದರೆ ಅಷ್ಟರಲ್ಲಿ ಗೆಳೆಯ ಕೈ ಕೊಟ್ಟ.ಮದುವೆಗೆ ಕೇವಲ 2 ತಿಂಗಳಿತ್ತು, ಬಟ್ಟೆ ಬರೆ ಸೇರಿದಂತೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು.  ಆದರೆ ಮದ್ವೆ ಮುರಿದು ಬಿತ್ತು. ಆತ ನನಗೆ ಮೋಸ ಮಾಡಿದ್ದ ಎಂದು ಸನ್ನಿ ಹೇಳಿಕೊಂಡಿದ್ದಾರೆ. 

ಅದೊಂದು ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣ. ಆದರೆ ದೇವರ ಯೋಜನೆ ಬೇರೆ ಇತ್ತು. ಆತ ನನಗೆ ಓರ್ವ ದೇವತೆಯನ್ನು ಕಳುಹಿಸಿದ ಎಂದು ಪತಿ ವೇಬರ್ ಅನ್ನು ಹೊಗಳಿದ್ದಾರೆ ಸನ್ನಿ. 

ಪ್ರಸ್ತುತ ನನ್ನ ಗಂಡ ನನ್ನ ಎಲ್ಲಾ ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದ, ಅಪ್ಪ ತೀರಿಕೊಂಡಾಗಲು ಅಮ್ಮ ತೀರಿಕೊಂಡಗಲೂ ಆತ ನನ್ನೊಂದಿಗೆ ಇದ್ದ ಈಗಲೂ ಇದ್ದಾನೆ. ದೇವರು ನಿಮಗೆ ಬೇರೆ ದೊಡ್ಡದಾದ ನಿಮಗೆ ಅರ್ಹವಾಗಿರುವ ಯೋಜನೆ ರೂಪಿಸಿರುತ್ತಾನೆ ಎಂದು ಸನ್ನಿ ಹೇಳಿದ್ದಾರೆ. 

ಸನ್ನಿ ಲಿಯೋನ್ ಮೂಲ ಹೆಸರು ಕರೆನ್ಜಿತ್ ಕೌರ್ ವೊಹ್ರಾ,  ಕೆನಡಾದ ಭಾರತೀಯ ಸಿಖ್ ಕುಟುಂಬದಲ್ಲಿ ಜನಿಸಿದ ಸನ್ನಿ ಕೆಲ ವರ್ಷಗಳ ಹಿಂದಷ್ಟೇ ಭಾರತಕ್ಕೆ ಆಗಮಿಸಿದ್ದರು

Latest Videos

click me!