ಬಿಲಿಯನೇರ್ ದಂಪತಿ ನೀತಾ- ಮುಕೇಶ್ ಅಂಬಾನಿ ತಮ್ಮ ಅವಳಿ ಮಕ್ಕಳಿಗೆ ಇಶಾ, ಆಕಾಶ್‌ ಎಂದು ಹೆಸರಿಟ್ಟಿದ್ಯಾಕೆ?

First Published | Apr 5, 2024, 4:18 PM IST

ಏಷ್ಯಾದ ಹಾಗೂ ಭಾರತದ ಬಿಲಿಯನೇರ್‌ಗಳಲ್ಲಿ ಒಬ್ಬರು ಮುಕೇಶ್ ಅಂಬಾನಿ. ಹಲವು ಐಷಾರಾಮಿ ಬಂಗಲೆ, ಕಾರುಗಳನ್ನು ಹೊಂದಿದ್ದಾರೆ. ಇವರ ಮನೆ, ಸಂಸ್ಥೆ ಎಲ್ಲದರ ಹೆಸರುಗಳೂ ವಿಭಿನ್ನವಾಗಿದೆ. ಅಂಬಾನಿ ಮಕ್ಕಳಿಗೆ ಆಕಾಶ್‌, ಇಶಾ ಎಂದು ಹೆಸರಿಟ್ಟಿದ್ಯಾಕೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

ಏಷ್ಯಾದ ಹಾಗೂ ಭಾರತದ ಬಿಲಿಯನೇರ್‌ಗಳಲ್ಲಿ ಒಬ್ಬರು ಮುಕೇಶ್ ಅಂಬಾನಿ. ಹಲವು ಐಷಾರಾಮಿ ಬಂಗಲೆ, ಕಾರುಗಳನ್ನು ಹೊಂದಿದ್ದಾರೆ. ಅಂಬಾನಿ ಕುಟುಂಬ, ಮಕ್ಕಳ ವಿಷಯ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ.
 

ಇತ್ತೀಚೆಗೆ ಡಿಸೈನರ್‌ಗಳಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರೊಂದಿಗೆ ನೀತಾ ಅಂಬಾನಿ ಸಂದರ್ಶನದ ಹಳೆಯ ಕ್ಲಿಪ್ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಅಲ್ಲಿ ಅವರು ತಮ್ಮ ಅವಳಿ ಮಕ್ಕಳಾದ ಇಶಾ ಅಂಬಾನಿ ಮತ್ತು ಆಕಾಶ್ ಅಂಬಾನಿಗೆ ಯಾಕೆ ಹಾಗೆ ಹೆಸರಿಟ್ಟರು ಎಂಬುದನ್ನು ವಿವರಿಸಿದ್ದಾರೆ.
 

Tap to resize

ತನ್ನ ಮಕ್ಕಳ ಜನನದ ಬಗ್ಗೆ ಮಾತನಾಡಿರುವ ನೀತಾ ಅಂಬಾನಿ, ಇಶಾ ಮತ್ತು ಆಕಾಶ್ ಇಬ್ಬರು ಮಕ್ಕಳ ನಿರೀಕ್ಷೆಯಲ್ಲಿದ್ದಾಗ ನಾನು ಯುಎಸ್‌ನಲ್ಲಿದ್ದೆ. ಮುಕೇಶ್ ಅಂಬಾನಿ ನನ್ನನ್ನು ಭೇಟಿ ಮಾಡಲು ಯುಎಸ್‌ಗೆ ಬಂದಿದ್ದರು. ನಂತರ ಅವರು ಭಾರತಕ್ಕೆ ತೆರಳಿದರು. ಆದರೆ ಈ ಸಮಯದಲ್ಲಿ ಇಶಾ ಮತ್ತು ಆಕಾಶ್ ಜನಿಸಿದರು ಮತ್ತು ಮುಕೇಶ್ ಅಂಬಾನಿ ತಕ್ಷಣವೇ ಹಿಂತಿರುಗಬೇಕಾಯಿತು ಎಂದು ವಿವರಿಸಿದರು.

ಮುಕೇಶ್ ಅಂಬಾನಿ ಬಂದಾಗ, ಮಕ್ಕಳಿಗೆ ಇಶಾ ಮತ್ತು ಆಕಾಶ್ ಎಂದು ಹೆಸರಿಸಲು ಸೂಚಿಸಿದರು. ಅಂದರೆ ಕ್ರಮವಾಗಿ ಪರ್ವತಗಳು ಮತ್ತು ಆಕಾಶದ ದೇವತೆ ಎಂಬ ಅರ್ಥ ಬರುತ್ತದೆ ಎಂದು ನೀತಾ ಅಂಬಾನಿ ತಿಳಿಸಿದರು.

'ನಾನು ಯುಎಸ್‌ನಲ್ಲಿದ್ದೆ, ಮತ್ತು ಮುಕೇಶ್ ನನ್ನನ್ನು ಬಿಟ್ಟು ಹಿಂತಿರುಗಿ ಬಂದಿದ್ದರು. ವಿಮಾನ ಇಳಿದ ತಕ್ಷಣ ಅವರಿಗೆ ಕರೆ ಬಂತು' ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.

ವಿಮಾನ ಪೈಲಟ್ ನಿಮಗೆ ಇಬ್ಬರು ಮಕ್ಕಳು, ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಹೊಂದಿದ್ದೀರಿ ಎಂದರು, ಅವರೆಲ್ಲರೂ ತುಂಬಾ ಉತ್ಸುಕರಾಗಿದ್ದರು ಎಂದು ನೀತಾ ಅಂಬಾನಿ ಸಂದರ್ಶನದಲ್ಲಿ ಹೇಳಿದ್ದಾರೆ.

ಇಶಾ ಮತ್ತು ಆಕಾಶ್ ಹುಟ್ಟಿದ ಮೂರು ವರ್ಷಗಳ ನಂತರ ಅವರ ಮೂರನೇ ಮಗು ಅನಂತ್ ಅಂಬಾನಿ ಜನಿಸಿದನು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿವೆಡ್ಡಿಂಗ್ ಇವೆಂಟ್ ಇತ್ತೀಚಿಗೆ ಗುಜರಾತ್‌ನ ಜಾಮ್ನಾ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು.

Latest Videos

click me!